ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚು ಸಮಸ್ಯೆ ಉದ್ಭವಿಸುವುದು ಮಳೆಗಾಲದಲ್ಲಿ. ರಾಜಕಾಲುವೆ(Raja kaluve)ಗಳ ಅಸಮರ್ಪಕ ಕಾಮಗಾರಿ, ರಾಜಕಾಲುವೆಗಳ ಒತ್ತುವರಿ ಇದಕ್ಕೆ ಕಾರಣವಾಗಿದೆ. ಈ ಹಿಂದೆ ಕೆರೆ ಜಾಗಗಳಲ್ಲಿ ಬಿಡಿಎ(BDA) ವಸತಿ ನಿರ್ಮಾಣ ಅಧಿಸೂಚನೆ ಹೊರಡಿಸಲಾಗಿತ್ತು. ನೀರು ನಿಲ್ಲಲು ಸರಿಯಾದ ಸ್ಥಳಗಳಿಲ್ಲದ ಸಂದರ್ಭದಲ್ಲಿ ಕರೆಗಳಲ್ಲಿ ನಿವೇಶನ ನಿರ್ಮಾಣ ಮಾಡಿದರೆ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿತ್ತು, ಇದೀಗ ಈ ಅಧಿಸೂಚನೆ (Notification)ಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಕರೆಗಳ ಜಾಗಗಳಲ್ಲಿ ಬಿಡಿಎ ವಸತಿ ನಿರ್ಮಾಣ ಅಧಿಸೂಚನೆ ರದ್ದು ವಿಚಾರವಾಗಿ ಬೆಂಗಳೂರಿನ ಪೈ ಬಡಾವಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ”ಬಿಡಿಎ ವಸತಿ ನಿರ್ಮಾಣ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ. 2007-08ರಲ್ಲಿ ಬಿಡಿಎ ವಸತಿ ನಿರ್ಮಾಣ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಈ ಅಧಿಸೂಚನೆಯನ್ನು ರದ್ದಿಗೊಳಿಸಲಾಗಿದೆ. ಯಾವುದೇ ಕರೆಯಲ್ಲಿ ಕಟ್ಟಡ ನಿರ್ಮಿಸಲು ಅನುಮತಿ ನೀಡಬಾರದು. ಈ ನಿಟ್ಟಿನಲ್ಲಿ ವಸತಿ ನಿರ್ಮಾಣ ಅಧಿಸೂಚನೆ ರದ್ದುಗೊಳಿಸಿದ್ದೇನೆ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಳೆಯಿಂದ ಹಾನಿ ಉಂಟಾಗಲು ಕಾರಣವೇನು?
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಕಾರ ಮಳೆಗೆ ರಾಜಕಾಲುವೆಗಳು ತುಂಬಿ ಹರಿದಿದ್ದು, ನೀರೆಲ್ಲಾ ರಸ್ತೆ ಮೇಲೆ ಬಂದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಗಲ್ಲಿ ಪ್ರದೇಶಗಳಲ್ಲಿನ ನಿವಾಸಗಳ ನೆಲಮಹಡಿಯೊಳಗೆ ನೀಡು ನುಗ್ಗಿತ್ತು. ಪಾರ್ಕಿಂಗ್ ಮಾಡಿದ್ದ ದ್ವಿಚಕ್ರವಾಹನಗಳು ನೀರಿನಲ್ಲಿ ತೇಲುತ್ತಿದ್ದವು. ಇದಕ್ಕೆ ಕಾರಣ, ರಾಜಕಾಲುವೆಗಳ ಒತ್ತುವರಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಡಿಎ ಏಜೆಂಟ್ಗಿರಿ ವಿರುದ್ಧ ಹರಿಹಾಯ್ದ ಅಧ್ಯಕ್ಷ ಎಸ್ಆರ್ ವಿಶ್ವನಾಥ್: ಬಿಡಿಎನಲ್ಲಿ ಏಜೆಂಟ್ಗಳ ಕಾರುಬಾರು
ಬೆಂಗಳೂರಿನಲ್ಲಿ ಮಳೆಗಾಲದಲ್ಲಿನ ಇಂಥ ಸಮಸ್ಯೆ ಹಿಂದೆಯೂ ಇತ್ತು. ಈ ಸಮಸ್ಯೆಗಳಿಗೆ ಫಲ್ಸ್ಟಾಪ್ ಇಡಲು ಎಲ್ಲಾ ಸರ್ಕಾರಗಳು ವಿಫಲವಾಗಿದೆ. ಮೊನ್ನೆ ಸಂಭವಿಸಿದ ಮಳೆನೀರಿನ ಅವಾಂತರಕ್ಕೆ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದ್ದು, ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ನೆರೆಯ ಮುನ್ಸೂಚನೆ ಇದ್ದರೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಕೂಡಲೇ ಒತ್ತುವರಿಗಳನ್ನು ತೆರುವಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದವು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ