
ಬೆಂಗಳೂರು: ಫಾಜಿಲ್ ಕೊಲೆ ಪ್ರಕರಣದಲ್ಲಿ ಯಾವ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳಿಂದ ನಾನು ಮಾಹಿತಿಯನ್ನು ಪಡೆಯುತ್ತೇನೆ. ಇದು ಕೇವಲ ಕೊಲೆಯಲ್ಲ, ಪೂರ್ವನಿಯೋಜಿತ ಕೃತ್ಯ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಯಾರೂ ಕೂಡ ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಆರೋಪಗಳು ಹಾಸ್ಯಾಸ್ಪದವಾಗಿದೆ. 3 ಪ್ರಕರಣಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ, ಹಿಂದೆ ಬಿದ್ದಿಲ್ಲ. ಇದನ್ನ ನಾನು ಕೇವಲ ಕೊಲೆ ಎಂದು ನೋಡುತ್ತಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Suratkal Murder: ಫಾಜಿಲ್ ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರ ಸಿದ್ಧತೆ, 12 ಮಂದಿ ಪೊಲೀಸರ ವಶಕ್ಕೆ
ಪ್ರವೀಣ್ ಮನೆಗೆ ಹೋಗಿದ್ದ ಸಂದರ್ಭ ಇನ್ನೊಂದು ಕೊಲೆ ಆಗಿದೆ. ಎಡಿಜಿಪಿ ಲಾ ಆ್ಯಂಡ್ ಆರ್ಡರ್ ಕಂಟ್ರೋಲ್ ಮಾಡುವುದಕ್ಕೆ ಹೇಳಿದ್ಧೇವೆ. ಮೂರು ಕೊಲೆ ಗಂಭೀರವಾಗಿ ತೆಗೆದುಕೊಳ್ಳಲು ಹೇಳಿದ್ದೇವೆ. ಇನ್ನಷ್ಟು ಕಠಿಣ ಕ್ರಮ ಮಾಡುತ್ತೇವೆ. 55 ರಸ್ತೆಗಳು ಕೇರಳ ಬಾರ್ಡರ್ನಲ್ಲಿದೆ. ವಿಶೇಷ ಪೊಲೀಸ್ ಕ್ರಮ ಮಾಡುವ ತೀರ್ಮಾನ ಮಾಡಲಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಏನು ಮಾಡ್ತಿದ್ರು, ನಮಗೆ ಗೊತ್ತಿದೆ ಹೇಗೆ ನಿಭಾಯಿಸಬೇಕು ಅಂತ. ಇದನ್ನು ಕೇವಲ ಕೊಲೆ ಅಂತ ನೋಡ್ತಾ ಇಲ್ಲ. ಆರ್ಗನೈಸ್ಡ್ ಕ್ರೈಂ ಇದರ ಹಿಂದಿದೆ. ಕಾಂಗ್ರೆಸ್ ಆರೋಪಗಳು ಹಾಸ್ಯಾಸ್ಪದವಾಗಿದೆ. ಯಾರೂ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅವನು ಹೇಳಿದ್ದೇ ವೇದ ವಾಕ್ಯ ಅಲ್ಲ ಎಂದು ಸಿದ್ದರಾಮಯ್ಯ ಮಾತಿಗೆ ಸಿಎಂ ಬೊಮ್ಮಾಯಿ ಕಿಡಿಕಾರಿದರು.
ಇದನ್ನೂ ಓದಿ; ಸಿಎಂ ಬೊಮ್ಮಾಯಿ ಮಂಗಳೂರಿನಲ್ಲಿ ಇದ್ದಾಗಲೇ ಮೂರನೇ ಕೊಲೆಯಾಗಿದೆ; ಹೆಚ್ಡಿ ಕುಮಾರಸ್ವಾಮಿ ಟ್ವೀಟ್
ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಸಿಎಂ
ಹತ್ಯೆ ವಿಚಾರವಾಗಿ ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಸಂಬಂಧ ಚರ್ಚೆ ಮಾಡಲಿದ್ದಾರೆ. ಕೇರಳ ಭಾಗದ 55 ರಸ್ತೆಗಳಲ್ಲಿ ನಾಕಾ ಬಂದಿ ಹಾಕಿ ಖಡಕ್ ತಪಾಸಣೆ ಮಾಡಲಾಗುವುದು.
Published On - 11:05 am, Fri, 29 July 22