AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯಸಾಯಿ ಬಾಬಾ ದರ್ಶನಕ್ಕೆ ಹೋಗುವವರಿಗೆ ರೈಲ್ವೆ ಇಲಾಖೆಯಿಂದ ಗುಡ್​​​ ನ್ಯೂಸ್​​: ವೇಳಾಪಟ್ಟಿ ಇಲ್ಲಿದೆ ನೋಡಿ

ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನೋತ್ಸವದ ಪ್ರಯುಕ್ತ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ಹಾಗೂ ಬೆಂಗಳೂರಿಗೆ ಆಗಮಿಸುವ ಭಕ್ತರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ವಿಶೇಷ ಎಕ್ಸ್‌ಪ್ರೆಸ್ ಹಾಗೂ ಮೆಮು ರೈಲುಗಳನ್ನು ಘೋಷಿಸಿದೆ. ದೇಶದ ಪ್ರಮುಖ ನಗರಗಳಿಂದ ಪುಟ್ಟಪರ್ತಿ ಮತ್ತು ಬೆಂಗಳೂರು ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸತ್ಯಸಾಯಿ ಬಾಬಾ ದರ್ಶನಕ್ಕೆ ಹೋಗುವವರಿಗೆ ರೈಲ್ವೆ ಇಲಾಖೆಯಿಂದ ಗುಡ್​​​ ನ್ಯೂಸ್​​: ವೇಳಾಪಟ್ಟಿ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 18, 2026 | 4:05 PM

Share

ಬೆಂಗಳೂರು, ನ.18: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 101ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಂಧ್ರಪ್ರದೇಶದ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ಹಾಗೂ ಬೆಂಗಳೂರು ಕಡೆಗೆ ಆಗಮಿಸುವ ಭಕ್ತರ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ (South Western Railway) ವತಿಯಿಂದ ಹಲವು ವಿಶೇಷ ಎಕ್ಸ್‌ಪ್ರೆಸ್ ಹಾಗೂ ಮೆಮು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ದೇಶದ ವಿವಿಧ ಪ್ರಮುಖ ನಗರಗಳಿಂದ ಪುಟ್ಟಪರ್ತಿ ಮತ್ತು ಬೆಂಗಳೂರು ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ.

ವಿಶೇಷ ರೈಲುಗಳ ವಿವರ ಹಾಗೂ ಸಮಯದಪಟ್ಟಿ:

ರೈಲು ಸಂಖ್ಯೆ 08031/08032 ಸಾಂತ್ರಗಾಚಿ–ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ–ಸಾಂತ್ರಗಾಚಿ ಎಕ್ಸ್‌ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ 08031 ಸಾಂತ್ರಗಾಚಿಯಿಂದ ನವೆಂಬರ್ 17 ಮತ್ತು 24ರಂದು (ಮಂಗಳವಾರ) ಮಧ್ಯಾಹ್ನ 12:40ಕ್ಕೆ ಹೊರಟು, ಮರುದಿನ ರಾತ್ರಿ 21:30ಕ್ಕೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ತಲುಪಲಿದೆ. ಮರುಮಾರ್ಗದಲ್ಲಿ ರೈಲು ಸಂಖ್ಯೆ 08032 ಪ್ರಶಾಂತಿ ನಿಲಯದಿಂದ ನವೆಂಬರ್ 18 ಮತ್ತು 25ರಂದು (ಬುಧವಾರ) ರಾತ್ರಿ 23:00ಕ್ಕೆ ಹೊರಟು, ಶುಕ್ರವಾರ ಬೆಳಿಗ್ಗೆ 08:00ಕ್ಕೆ ಸಾಂತ್ರಗಾಚಿ ತಲುಪಲಿದೆ. ಖರಗ್‌ಪುರ, ಬಾಲೇಶ್ವರ, ಭದ್ರಕ್, ಕಟಕ್, ಭುವನೇಶ್ವರ, ಬ್ರಹ್ಮಪುರ, ಪಾಲಾಸಾ, ವಿಜಯನಗರಂ, ದುವ್ವಾಡ, ಸಮಲ್ಕೋಟ್, ರಾಜಮಂಡ್ರಿ, ವಿಜಯವಾಡ, ಗುಂಟೂರು, ನಂದ್ಯಾಲ್, ಧೋನ್, ಗೂಟಿ ಮತ್ತು ಧರ್ಮಾವರಂ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 06525/06526 ಕೆಎಸ್‌ಆರ್ ಬೆಂಗಳೂರು–ಧರ್ಮಾವರಂ–ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲು

ನವೆಂಬರ್ 20ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 08:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06525, ಮಧ್ಯಾಹ್ನ 12:30ಕ್ಕೆ ಧರ್ಮಾವರಂ ತಲುಪಲಿದೆ. ವಾಪಾಸು ಮಾರ್ಗದಲ್ಲಿ ರೈಲು ಸಂಖ್ಯೆ 06526 ಧರ್ಮಾವರಂನಿಂದ ಮಧ್ಯಾಹ್ನ 13:20ಕ್ಕೆ ಹೊರಟು ಅದೇ ದಿನ ಸಂಜೆ 17:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ನವೆಂಬರ್ 20ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 08:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06525, ಮಧ್ಯಾಹ್ನ 12:30ಕ್ಕೆ ಧರ್ಮಾವರಂ ತಲುಪಲಿದೆ. ವಾಪಾಸು ಮಾರ್ಗದಲ್ಲಿ ರೈಲು ಸಂಖ್ಯೆ 06526 ಧರ್ಮಾವರಂನಿಂದ ಮಧ್ಯಾಹ್ನ 13:20ಕ್ಕೆ ಹೊರಟು ಅದೇ ದಿನ ಸಂಜೆ 17:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.

ರೈಲು ಸಂಖ್ಯೆ 08555/08556 ಶ್ರೀಕಾಕುಳಂ ರೋಡ್–ಯಶವಂತಪುರ–ಶ್ರೀಕಾಕುಳಂ ರೋಡ್ ಎಕ್ಸ್‌ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ 08555 ನವೆಂಬರ್ 20ರಂದು (ಶುಕ್ರವಾರ) ಶ್ರೀಕಾಕುಳಂ ರೋಡ್‌ನಿಂದ ಸಂಜೆ 16:00ಕ್ಕೆ ಹೊರಟು, ಶನಿವಾರ ಮಧ್ಯಾಹ್ನ 15:00ಕ್ಕೆ ಯಶವಂತಪುರ ತಲುಪಲಿದೆ. ವಾಪಾಸು ರೈಲು ಸಂಖ್ಯೆ 08556 ನವೆಂಬರ್ 24ರಂದು (ಮಂಗಳವಾರ) ಯಶವಂತಪುರದಿಂದ ಸಂಜೆ 17:00ಕ್ಕೆ ಹೊರಟು, ಬುಧವಾರ ಸಂಜೆ 17:15ಕ್ಕೆ ಶ್ರೀಕಾಕುಳಂ ರೋಡ್ ತಲುಪಲಿದೆ. ಚಿಪುರುಪಲ್ಲಿ, ವಿಜಯನಗರಂ, ಕೊತ್ತವಲಸ, ವಿಶಾಖಪಟ್ಟಣಂ, ದುವ್ವಾಡ, ಅನಕಾಪಲ್ಲಿ, ಎಲ್ಲಮಂಚಿಲಿ, ತುನಿ, ಸಮಲ್ಕೋಟ್, ರಾಜಮಂಡ್ರಿ, ತಡೆಪಲ್ಲಿಗುಡೆಂ, ಏಲೂರು, ವಿಜಯವಾಡ, ಗುಂಟೂರು, ನರಸಾರಾವೆಟ್, ದೊಣಕೊಂಡ, ಮಾರ್ಕಾಪುರ ರೋಡ್, ಕುಂಬುಮ್, ಗಿಡ್ಡಲೂರು, ನಂದ್ಯಾಲ್, ಧೋನ್, ಗುಂಟಕಲ್, ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಹಿಂದೂಪುರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ: ಯಶವಂತಪುರ ಹಾಗೂ ಹಾಸನಕ್ಕೆ ಬರುವ 8 ಪ್ರಮುಖ ರೈಲುಗಳ ಸಮಯ ಬದಲಾವಣೆ

ರೈಲು ಸಂಖ್ಯೆ 07246/07245 ಯಶವಂತಪುರ–ವಿಜಯವಾಡ–ಯಶವಂತಪುರ ವಿಶೇಷ ರೈಲು

ರೈಲು ಸಂಖ್ಯೆ 07246 ನವೆಂಬರ್ 21ರಂದು (ಶನಿವಾರ) ಯಶವಂತಪುರದಿಂದ ಸಂಜೆ 17:00ಕ್ಕೆ ಹೊರಟು, ಭಾನುವಾರ ಬೆಳಿಗ್ಗೆ 07:45ಕ್ಕೆ ವಿಜಯವಾಡ ತಲುಪಲಿದೆ. ವಾಪಾಸು ರೈಲು ಸಂಖ್ಯೆ 07245 ನವೆಂಬರ್ 23ರಂದು (ಸೋಮವಾರ) ರಾತ್ರಿ 23:50ಕ್ಕೆ ವಿಜಯವಾಡದಿಂದ ಹೊರಟು, ಮಂಗಳವಾರ ಮಧ್ಯಾಹ್ನ 15:00ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 56531/56532 ಯಶವಂತಪುರ–ಹಿಂದೂಪುರ–ಗುಂಟಕಲ್ ಪ್ಯಾಸೆಂಜರ್ ವಿಶೇಷ ರೈಲು

ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಹಿಂದೂಪುರ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 56531/56532 ಅನ್ನು ಗುಂಟಕಲ್ ವರೆಗೆ ತಾತ್ಕಾಲಿಕವಾಗಿ ವಿಸ್ತರಿಸಿದೆ. ನವೆಂಬರ್ 20ರಿಂದ 26ರವರೆಗೆ ಈ ರೈಲುಗಳು ಒಟ್ಟು 7 ಫೆರಿಗಳಂತೆ ಸಂಚರಿಸಲಿವೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ