AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Future We Want: ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರೊಂದಿಗೊಂದು ಸಂವಾದ

ನೊಬೆಲ್ ಪುರಸ್ಕಾರ(Nobel Prize)ವೆಂಬುದು ಎಲ್ಲರಿಗೂ ಸಿಗುವಂಥದ್ದಲ್ಲ, ಕೇಳಿ ಪಡೆಯುವಂಥದ್ದೂ ಅಲ್ಲ. ಅವರು ಮಾಡಿರುವ ಸಾಧನೆಯನ್ನು ನೋಡಿ ಕೊಡುವಂಥದ್ದು. ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರ ಸಂವಾದವೊಂದು ನಡೆಯಲಿದೆ. ಇದೇ ನವೆಂಬರ್ 3ರಿಂದ 5ರವರೆಗೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ ಜೆಎನ್​ ಟಾಟಾ ಆಡಿಟೋರಿಯಂನಲ್ಲಿ ನಡೆಯಲಿದೆ. ಟಾಟಾ ಟ್ರಸ್ಟ್​​ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಸಂವಾದವು ಯುವ ಜನತೆಗೆ ಹೆಚ್ಚು ತಮ್ಮನ್ನು ತಾವು ಸಮಾಜದಲ್ಲಿ ತೊಡಗಿಕೊಳ್ಳುವುದು, ಸಮಾನತೆಯುಳ್ಳ ಭವಿಷ್ಯತ್ತನ್ನು ರೂಪಿಸಲು, ಜ್ಞಾನ ವಿನಿಮಯ ಮಾಡಿಕೊಳ್ಲುವುದು ಹೀಗೆ ಹತ್ತು ಹಲವು ಕಾರಣಗಳನ್ನಿಟ್ಟುಕೊಂಡು ನೊಬೆಲ್ ಪುರಸ್ಕೃತರನ್ನು ಒಂದುಗೂಡಿಸಲಾಗುತ್ತಿದೆ.

The Future We Want: ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರೊಂದಿಗೊಂದು ಸಂವಾದ
ನೊಬೆಲ್
ನಯನಾ ರಾಜೀವ್
|

Updated on:Oct 30, 2025 | 12:38 PM

Share

ಬೆಂಗಳೂರು, ಅಕ್ಟೋಬರ್ 30: ನೊಬೆಲ್ ಪುರಸ್ಕಾರ(Nobel Prize)ವೆಂಬುದು ಎಲ್ಲರಿಗೂ ಸಿಗುವಂಥದ್ದಲ್ಲ, ಕೇಳಿ ಪಡೆಯುವಂಥದ್ದೂ ಅಲ್ಲ. ಅವರು ಮಾಡಿರುವ ಸಾಧನೆಯನ್ನು ನೋಡಿ ಕೊಡುವಂಥದ್ದು. ಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರ ಸಂವಾದವೊಂದು ನಡೆಯಲಿದೆ. ಇದೇ ನವೆಂಬರ್ 3ರಿಂದ 5ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಜೆಎನ್ಟಾಟಾ ಆಡಿಟೋರಿಯಂನಲ್ಲಿ ನಡೆಯಲಿದೆ.

ಟಾಟಾ ಟ್ರಸ್ಟ್​​ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಸಂವಾದವು ಯುವ ಜನತೆಗೆ ಹೆಚ್ಚು ತಮ್ಮನ್ನು ತಾವು ಸಮಾಜದಲ್ಲಿ ತೊಡಗಿಕೊಳ್ಳುವುದು, ಸಮಾನತೆಯುಳ್ಳ ಭವಿಷ್ಯತ್ತನ್ನು ರೂಪಿಸಲು, ಜ್ಞಾನ ವಿನಿಮಯ ಮಾಡಿಕೊಳ್ಲುವುದು ಹೀಗೆ ಹತ್ತು ಹಲವು ಕಾರಣಗಳನ್ನಿಟ್ಟುಕೊಂಡು ನೊಬೆಲ್ ಪುರಸ್ಕೃತರನ್ನು ಒಂದುಗೂಡಿಸಲಾಗುತ್ತಿದೆ.

ಪುರಸ್ಕೃತರಾದ ಡೇವಿಡ್ ಮ್ಯಾಕ್‌ಮಿಲನ್ ಮಾತಾಡಿ, ನಾನು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಅಲ್ಲಿನ ವಿದ್ಯರ್ಥಿಗಳು, ಸಂಶೋಧಕರು ಹಾಗೂ ಜನ ಸಾಮಾನ್ಯರನ್ನು ಭೇಟಿಯಾಗಲು ನಾನು ನಿಜವಾಗಿಯೂ ಕೌತುಕನಾಗಿದ್ದೇನೆ. ಭಾರತದಲ್ಲಿ ವಿಜ್ಞಾನಕ್ಕೆ ಇರುವ ಪ್ರೋತ್ಸಾಹ ಅಥವಾ ಮನ್ನಣೆ ನೀಡುತ್ತಿದೆ. ನಾವ ಸಂಶೋಧನೆ ಹಾಗೂ ಭವಿಷ್ಯದ ಆವಿಷ್ಾರ ಕುರಿತು ಪರಿಕಲ್ಪನೆಯನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ದಿ ಫ್ಯೂಷರ್ ಡಿ ವಾಂಟ್ ಎಂಬ ಥೀಮ್ನೊಂದಿಗೆ ಬೆಂಗಳೂರಿನಲ್ಲಿ ಸಂವಾದ ನಡೆಯಲಿದೆ. ನೊಬೆಲ್ ಬಹುಮಾನ ಪುರಸ್ಕೃತ ಜೇಮ್ಸ್ ರಾಬಿನ್ಸನ್(ಆರ್ಥಿಕತೆ ವಿಜ್ಞಾನಗಳು, 2024) ಮತ್ತು ಡೇವಿಡ್ ಮ್ಯಾಕ್‌ಮಿಲನ್(ರಸಾಯನಶಾಸ್ತ್ರ, 2021) ಇವರುಗಳ ಜೊತೆಜೊತೆಗೇ ಸುಪ್ರಸಿದ್ಧ ತಜ್ಞರಾದ ತೊಲುಲಾಹ್ ಓನಿ, ಗಗನ್‌ದೀಪ್ ಕಾಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಕುಶ್ ಪಾರ್ಮರ್ ಅವರುಗಳನ್ನು ಒಳಗೊಂಡಿರುತ್ತದೆ.

ಮನುಕುಲದ ಒಳಿತಿಗಾಗಿ ಶ್ರಮಿಸಿದವರಿಗೆ  ನೊಬೆಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರು ಹಲವು ಪರಿಣಾಮಕಾರಿ ವಿಚಾರಗಳನ್ನು ವಿನಿಯಮ ಮಾಡಲಿದ್ದಾರೆ. ಜನರ ಮನಸ್ಸುಗಳನ್ನು ಪ್ರೇರೇಪಿಸಿ, ನಾವು ಬಯಸುವ ಭವಿಷ್ಯವನ್ನು ರೂಪಿಸಲು ಈ ಸಂವಾದ ಸಹಾಯ ಮಾಡಲಿದೆ ಎಂದು ನೋಬೆಲ್ ಫೌಂಡೇಶನ್‌ನ ಕಾರ್ಯನಿರ್ವಹಣಾ ನಿರ್ದೇಶಕಿ ಹನ್ನಾ ಸ್ಟ್ಯಾರ್ನೆ ಹೇಳಿದ್ದಾರೆ.

ಮತ್ತಷ್ಟು ಓದಿ:  Nobel Prize 2025: ನೊಬೆಲ್ ಪ್ರಶಸ್ತಿ ಎಂದರೇನು? ಯಾವ್ಯಾವ ವರ್ಗಗಳಲ್ಲಿ ನೀಡಲಾಗುತ್ತೆ, ವಿಜೇತರ ಪಟ್ಟಿ ಇಲ್ಲಿದೆ

ಟಾಟಾ ಟ್ರಸ್ಟ್‌ಗಳ ಸಿಇಒ ಸಿದ್ಧಾರ್ಥ್ ಶರ್ಮಾ ಮಾತನಾಡಿ, ಟಾಟಾ ಟ್ರಸ್ಟ್‌ಗಳು ಶತಮಾನಕ್ಕಿಂತ ಹೆಚ್ಚು ಕಾಲದಿಂದ ನಮ್ಮ ಸಮುದಾಯಗಳೊಂದಿಗೆ ಕೈಜೋಡಿಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿವೆ. ಭಾರತದ ಅತ್ಯಂತ ಹಳೆಯ ದಾನಶೀಲ ಸಂಸ್ಥೆಯಾಗಿರುವ ಮತ್ತು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ನಮ್ಮ ಪರಂಪರೆ, ಸಮಾಜಕ್ಕೆ ಹಿಂತಿರುಗಿಸುವ ಮನೋಭಾವ ಮತ್ತು ಉತ್ತಮ ನಾಳೆಯನ್ನು ರೂಪಿಸುವ ಕಲ್ಪನೆಗಳನ್ನು ಬೆಂಬಲಿಸುವ ಧೋರಣೆಯಲ್ಲಿ ಬೇರೂರಿದೆ.

ಈ ಸಂವಾದವನ್ನು ನೊಬೆಲ್ ಪ್ರೈಜ್ ಔಟ್‌ರೀಚ್ ಮತ್ತು ಟಾಟಾ ಟ್ರಸ್ಟ್ಸ್, ನೋಬೆಲ್ ಇಂಟರ್ ನ್ಯಾಷನಲ್ ಭಾಗೀದಾರರಾದ ಎಬಿಬಿ, ಇಕ್ಯುಟಿ, ಸ್ಕೇನಿಯ ಮತ್ತು ಸ್ಟೆಗ್ರಾ(ABB, EQT, Scania and Stegra)ದ ಬೆಂಬಲವಿದೆ.

ನೊಬೆಲ್ ಪ್ರಶಸ್ತಿ ಎಂದರೇನು?

ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಆದರೆ ಅವರ ಈ ಆವಿಷ್ಕಾರವು ಅವರಿಗೆ ಟೀಕೆಯಷ್ಟೇ ಖ್ಯಾತಿಯನ್ನೂ ತಂದುಕೊಟ್ಟಿತು. ನಂತರ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆಯನ್ನು ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು. ಈ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:37 pm, Thu, 30 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ