ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು ಏನು ಗೊತ್ತಾ?

ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಭಾರೀ ಚರ್ಚೆಯಾಗುತ್ತಿತ್ತು. ಸದ್ಯ ಈ ಚರ್ಚೆಗೆ ಪೂರ್ಣ ವಿರಾಮ ಬಿದ್ದಿದೆ.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು ಏನು ಗೊತ್ತಾ?
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
Updated By: sandhya thejappa

Updated on: Jul 28, 2021 | 8:41 AM

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ನಿನ್ನೆ (ಜುಲೈ 27) ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯದ ಸಿಎಂ ಎಂದು ಬೊಮ್ಮಾಯಿ ಹೆಸರನ್ನು ಘೋಷಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ರಾಜಭವನದಲ್ಲಿ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅವರ ಮೇಲೆ ರಾಜ್ಯದ ಅಭಿವೃದ್ಧಿ ಹೊಣೆ ಬೀಳಲಿದೆ. ಅಲ್ಲದೇ ಕೆಲವು ಸವಾಲುಗಳು ಬೊಮ್ಮಾಯಿಯವರ ಮುಂದಿವೆ.

ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಭಾರೀ ಚರ್ಚೆಯಾಗುತ್ತಿತ್ತು. ಸದ್ಯ ಈ ಚರ್ಚೆಗೆ ಪೂರ್ಣ ವಿರಾಮ ಬಿದ್ದಿದೆ. ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ನಾಡಿನ ವಿವಿಧೆಡೆ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಪ್ರಮಾಣವಚನ ಸ್ವೀಕರಿಸಲಿರುವ ನೂತನ ಸಿಎಂಗೆ ಹೆಚ್ಚು ಸವಾಲುಗಳು ಮುಂದಿವೆ.

ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಮುಂದಿರುವ ಸವಾಲುಗಳು:
* ಹೊಸದಾದ ಆ್ಯಕ್ಟಿವ್ ಆದ ಸಚಿವ ಸಂಪುಟ ರಚನೆ.
* ಅತ್ಯುತ್ತಮ ತಂಡ ರಚನೆ.
* ಸಂಪುಟ ಸಹೋದ್ಯೋಗಿಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗಿರುವುದು.
* ಬಿಎಸ್​ವೈ ವಿರೋಧಿ ಬಣ ಬೊಮ್ಮಾಯಿ ವಿರೋಧಿ ಬಣವಾಗಿಯೂ ಕಾಡುವ ಸಾಧ್ಯತೆ.
* ಪ್ರವಾಹ ಪೀಡಿತ ಪ್ರದೇಶಗಳಿಗೆ ಆದ್ಯತೆಯ ಭೇಟಿ.
* ಕೊರೊನಾ 3ನೇ ಅಲೆ ಎದುರಿಸುವುದು.
* ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ.
* ಬಿಬಿಎಂಪಿ ಚುನಾವಣೆ.
* ಸರ್ಕಾರದ ಇಮೇಜ್ ಹೆಚ್ಚಿಸಬೇಕಾಗಿರುವುದು.
* 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವುದು.
* ಯಡಿಯೂರಪ್ಪ ರಬ್ಬರ್ ಸ್ಟಾಂಪ್ ಆಗದ ರೀತಿ ಆಡಳಿತ ನಡೆಸಬೇಕಿರುವುದು.

ಇದನ್ನೂ ಓದಿ

Karnataka Politics: ಯಡಿಯೂರಪ್ಪ ಸರ್ಕಾರದಲ್ಲಿ ಸಿ.ಪಿ ಯೋಗೀಶ್ವರ್​ಗೆ ಇದ್ದ ಸಮಸ್ಯೆ ಏನಾಗಿತ್ತು?

Basavaraj Bommai Oath Taking: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ, ದೇವಸ್ಥಾನ ದರ್ಶನ ಬಳಿಕ ಬಿಎಸ್​ವೈ ಭೇಟಿ

(There are challenges ahead for Chief Minister Basavaraj Bommai)