ಬೆಂಗಳೂರು: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದ ತನಿಖೆಯನ್ನ ಸಿಐಡಿ ಪೊಲೀಸರು (CID Police) ಚುರುಕುಗೊಳಿಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ಮಾಡಿ ಆರೋಪಿಗಳನ್ನ ಬಂಧಿಸುತ್ತಿದ್ದಾರೆ. ತನಿಖೆ ಹೆಚ್ಚಾದಂತೆ ಒಂದೊಂದು ಅಕ್ರಮ ಬೆಳಕಿಗೆ ಬರುತ್ತಿದೆ. ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ನನ್ನು ನಿನ್ನೆ ರಾತ್ರಿಯಿಂದ ವಿಚಾರಣೆ ಮಾಡಲಾಗುತ್ತಿದೆ. ರುದ್ರಗೌಡ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಸದ್ಯ ಸಿಐಡಿ ತನಿಖೆಯಲ್ಲಿ ಪತ್ತೆಯಾದ ಅಕ್ರಮಗಳ ಬಗ್ಗೆ ತನಿಖಾ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
1. ಬ್ಲೂಟೂತ್ ಬಳಕೆ ಮಾಡಿ ಎಕ್ಸಾಂ ಬರೆದಿದ್ದಾರೆ.
2. ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್ನಲ್ಲಿ ತಿದ್ದುಪಡಿ ಮಾಡಿದ್ದಾರೆ.
3. ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿದ್ದಾರೆ.
4. ಸೀಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಬರೆಯಲಾಗಿದೆ.
5. ಫಿಸಿಕಲ್ ವೇಳೆ ಹಣ ನೀಡಿ ಅಕ್ರಮ ಎಸಗಿದ್ದಾರೆ.
6. ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.
7. ಮೊದಲ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಬರೆಯಲಾಗಿದೆ.
8. ಎರಡನೆ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಪರೀಕ್ಷೆ ಬರೆಯಲಾಗಿದೆ.
9. ಎಕ್ಸಾಂ ಸೆಂಟರ್ ಬುಕ್ ಮಾಡಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ.
ಕೆಲವರ ಪತ್ತೆಗೆ ಮುಂದಾಗಿರುವ ಸಿಐಡಿ ಅಧಿಕಾರಿಗಳು: ಇನ್ನೂ ಕೆಲವರ ಪತ್ತೆಗೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಬಂಧನದ ಭೀತಿಯಿಂದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಿಐಡಿ ತಂಡ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಮರಳು ಮಾಫಿಯಾ ನಂಟು:
ಬಂಧಿತ ಬೆರಳಚ್ಚು ವಿಭಾಗದ ಸಿಪಿಐ ಆನಂದ್ಗೆ ಮರಳು ಮಾಫಿಯಾದ ನಂಟು ಇದೆ ಎಂದು ಹೇಳಲಾಗುತ್ತಿದೆ. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಭೀಮಾ ನದಿಯಲ್ಲಿನ ಮರಳು ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾನೆ. ಅನೇಕ ಅಕ್ರಮ ಮರಳುಗಳ್ಳರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಇದೆ.
ಇದನ್ನೂ ಓದಿ
ಖ್ಯಾತ ನಟ ಮೋಹನ್ ಜುನೇಜ ನಿಧನ; ‘ಕೆಜಿಎಫ್’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ
ಚಿತ್ರದುರ್ಗದಲ್ಲಿ ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ! ಮೂವರು ಆರೋಪಿಗಳು ಅರೆಸ್ಟ್
Published On - 8:41 am, Sat, 7 May 22