ಚಿತ್ರದುರ್ಗದಲ್ಲಿ ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ! ಮೂವರು ಆರೋಪಿಗಳು ಅರೆಸ್ಟ್
ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದರು. ದಾಳಿ ವೇಳೆ ವೇಶ್ಯಾವಾಟಿಕೆ ಅಡ್ಡೆಯ ಕಳ್ಳ ಬಾಗಿಲು ರಹಸ್ಯ ಬಯಲಾಗಿದೆ.
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ವೇಶ್ಯಾವಾಟಿಕೆ (Prostitution) ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಅರೆಸ್ಟ್ (Arrest) ಆಗಿದ್ದಾರೆ. ಹೊರ ರಾಜ್ಯದ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಶೌಚಾಲಯ ಗೋಡೆಗೆ ಗೌಪ್ಯ ಬಾಗಿಲು ನಿರ್ಮಿಸಿ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದರು. ದಾಳಿ ವೇಳೆ ವೇಶ್ಯಾವಾಟಿಕೆ ಅಡ್ಡೆಯ ಕಳ್ಳ ಬಾಗಿಲು ರಹಸ್ಯ ಬಯಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮಾಹಿತಿ ಮೇರೆಗೆ ಚಿತ್ರದುರ್ಗ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿದ್ದವರು ಬಂಧನ: ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಟಿಪ್ಸ್ ನೀಡುತ್ತೇವೆಂದು ವಂಚಿಸಿ ಸಾರ್ವಜನಿಕರ ಬಳಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರೆಹಮತ್ ಉಲ್ಲಾ, ಮಲ್ಲಯ್ಯ ಸ್ವಾಮಿ, ದುರ್ಗಪ್ಪ ಬಂಧಿತರು. ಮೇಕ್ ಇನ್ ಪ್ರಾಫಿಟ್ ಎಂಬ ಕಂಪನಿ ಹೆಸರು ಹೇಳಿ ವಂಚನೆ ಮಾಡಿದ್ದಾರೆ. ಬಂಧಿತರು 2.15 ಲಕ್ಷ ರೂ. ಹಣ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ 3 ಮೊಬೈಲ್, 6 ಸಿಮ್ ಕಾರ್ಡ್ನ ವಶಕ್ಕೆ ಪಡೆದಿದ್ದಾರೆ.
ಪಡಿತರ ಅಕ್ಕಿ ಅಕ್ರಮ ಸಾಗಾಟ: ರಾಯಚೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ದಾಳಿ ವೇಳೆ 296 ಕ್ವಿಂಟಾಲ್ನ 605 ಅಕ್ಕಿ ಮೂಟೆಗಳನ್ನ ಜಪ್ತಿ ಮಾಡಲಾಗಿದ್ದು, ಲಾರಿ ಚಾಲಕ ನಾಗೇಶ್ ಮುದಗಲ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಕಿ ದಂಧೆ ನಡೆಸುತ್ತಿದ್ದರ ಬಗ್ಗೆ ಆರೋಪಿ ನಾಗೇಶ್ ಒಪ್ಪಿಕೊಂಡಿದ್ದಾನೆ. ಸದ್ಯ ಈ ಬಗ್ಗೆ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
Honour killing in Hyderabad: ನಿಮ್ಮ ಟೈಮ್ಲೈನ್; ಮುಸ್ಲಿಂ ಸಮುದಾಯದೊಳಗೂ ಜಾತಿ ಶ್ರೇಷ್ಠತೆಯ ವ್ಯಸನವಿದೆ
Sri Lanka: ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಲ್ಲಿ 5 ವಾರಗಳಲ್ಲಿ ಎರಡನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ
Published On - 8:12 am, Sat, 7 May 22