AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honour killing in Hyderabad: ನಿಮ್ಮ ಟೈಮ್​ಲೈನ್; ಮುಸ್ಲಿಂ ಸಮುದಾಯದೊಳಗೂ ಜಾತಿ ಶ್ರೇಷ್ಠತೆಯ ವ್ಯಸನವಿದೆ

Cruelty : ಸಾಮಾಜಿಕವಾಗಿ ನಾವು ಬೆಳೆಸಿ ಪೋಷಿಸಿಕೊಂಡು ಬಂದಂತಹ ಹುಸಿ ಮೌಲ್ಯಗಳೇ ಇಂಥ ಕೃತ್ಯಗಳಿಗೆ ಕಾರಣ, ಧರ್ಮ ಅಲ್ಲ. ಅಷ್ಟಕ್ಕೂ, ಕ್ರೌರ್ಯ- ಧರ್ಮದ ಹೆಸರಲ್ಲಾದರೂ ಜಾತಿಯ ಹೆಸರಲ್ಲಾದರೂ ಪ್ರೇಮದ ಹೆಸರಲ್ಲಾದರೂ ಕ್ರೌರ್ಯವೇ ಮತ್ತು ಕಠಿಣ ದಂಡನಾರ್ಹವೇ, ಅಪರಾಧಿ ಹಿಂದುವಾದರೂ ಮುಸ್ಲಿಮ್ ಆದರೂ.

Honour killing in Hyderabad: ನಿಮ್ಮ ಟೈಮ್​ಲೈನ್; ಮುಸ್ಲಿಂ ಸಮುದಾಯದೊಳಗೂ ಜಾತಿ ಶ್ರೇಷ್ಠತೆಯ ವ್ಯಸನವಿದೆ
ಶ್ರೀದೇವಿ ಕಳಸದ
|

Updated on:May 07, 2022 | 7:46 AM

Share

ನಿಮ್ಮ ಟೈಮ್​ಲೈನ್ : ಮುಸ್ಲಿಂ ಯುವಕನನ್ನು ಹಿಂದೂ ಯುವತಿ ಪ್ರೀತಿಸಿ, ಮುಸ್ಲಿಂ ಪದ್ಧತಿಯ ಪ್ರಕಾರ ವಿವಾಹವಾಗುವುದರಿಂದ ಯುವತಿಯ ಕುಟುಂಬಕ್ಕೆ ಉಂಟಾಗುವ ಮಾನಸಿಕ ಕ್ಲೇಶವನ್ನು ನಿರಾಕರಿಸಿ ಮಾತಾಡಬೇಕಿಲ್ಲ. ಸಂಬಂಧಿಕರು ಮತ್ತು ನೆರೆಯವರಿಂದ ಇರಿಯುವ ನೂರು ಮಾತುಗಳನ್ನು ಈ ಕುಟುಂಬ ಕೇಳಬೇಕಾಗುತ್ತದೆ. ಉಪದೇಶ, ಧರ್ಮ ಪಾಠಗಳು ಯಥೋಚಿತವಾಗಿ ಅವರನ್ನು ಕಾಡಿಕಾಡಿ ತಿವಿಯುತ್ತವೆ. ತಂದೆ-ತಾಯಿ ಎನಿಸಿಕೊಳ್ಳುವುದಕ್ಕೆ ನೀವು ನಾಲಾಯಕ್ಕು.. ಎಂಬ ಷರಾವನ್ನು ಸಮಾಜ ನೀಡಿಬಿಡುತ್ತದೆ. ಹಾಗೆಯೇ ಹಿಂದೂ ಯುವಕನನ್ನು ಮುಸ್ಲಿಂ ಯುವತಿ (Muslim woman) ಪ್ರೀತಿಸಿ ಹಿಂದೂ ಪದ್ಧತಿಯಂತೆ ವಿವಾಹವಾದರೂ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆದರೆ, ಶ್ರೀಮಂತ ಕುಟುಂಬಕ್ಕೆ ಸಂಬಂಧಿಸಿ ಮಾತ್ರ ಈ ಮಾತುಗಳು ಅನ್ವಯಿಸುವುದಿಲ್ಲ. ವಿಷಾದವೇನೆಂದರೆ, ಜನವರಿ 31ರಂದು ಹಿಂದೂ ಪದ್ಧತಿಯಂತೆ ಮುಸ್ಲಿಂ ಯುವತಿ ಅಶ್ರೀನ್ ಸುಲ್ತಾನರನ್ನು ( Syed Ashrin Sultan) ಆರ್ಯ ಸಮಾಜದಲ್ಲಿ ವಿವಾಹವಾಗಿದ್ದ ನಾಗರಾಜುವನ್ನು ನಿನ್ನೆ ಯುವತಿಯ ಸಹೋದರ ಸಯ್ಯದ್ ಮುಬೀನ್ ಅಹ್ಮದ್ ಮತ್ತು ಸಂಬಂಧಿಕ ಮಹಮ್ಮದ್ ಮಸೂದ್ ಎಂಬಿಬ್ಬರು ಯುವತಿಯ ಎದುರೇ ಹತ್ಯೆ ಮಾಡಿದ್ದಾರೆ. ತಕ್ಷಣ ತೆಲಂಗಾಣ ಬಿಜೆಪಿ ಈ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ. ಏ.ಕೆ. ಕುಕ್ಕಿಲ, ಪತ್ರಕರ್ತ (A.K.Kukkila)

ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾದರೆ ಅದನ್ನು ಲವ್ ಜಿಹಾದ್ ಎಂದು ಹೇಳುವ ಇದೇ ಪಕ್ಷ, ಸುಲ್ತಾನ ಮತ್ತು ನಾಗರಾಜು ಹಿಂದೂ ಪದ್ಧತಿಯಂತೆಯೇ ಆರ್ಯ ಸಮಾಜದಲ್ಲಿ ಮದುವೆಯಾದುದನ್ನು ತಣ್ಣಗೆ ಸಹಿಸಿಕೊಂಡಿತ್ತು. ಅಂದಹಾಗೆ, 2 ವರ್ಷಗಳ ಹಿಂದೆ Ground Zero: killing love with caste pride ಎಂಬ ಶೀರ್ಷಿಕೆಯಲ್ಲಿ ದ ಹಿಂದೂ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿತ್ತು. ಮೇಲ್ಜಾತಿಯ ಅವಂತಿ ರೆಡ್ಡಿಯನ್ನು ಮದುವೆಯಾದ ಮೂರೇ ತಿಂಗಳೊಳಗೆ ಕೆಳಜಾತಿಯ ಹೇಮಂತಕುಮಾರ್ ಇದೇ ತೆಲಂಗಾಣದಲ್ಲಿ ಯುವತಿಯ ಕುಟುಂಬದಿಂದ ಹತ್ಯೆಗೀಡಾಗಿರುವುದನ್ನು ಈ ವರದಿಯಲ್ಲಿ ಹೇಳಲಾಗಿತ್ತು. 2014ರಲ್ಲಿ 28, 2015ರಲ್ಲಿ 251 ಮತ್ತು 16ರಲ್ಲಿ 77 ಇಂತಹ ಮರ್ಯಾದಾ ಹತ್ಯೆಗಳು ಆಗಿರುವುದನ್ನು ವರದಿ ಪಟ್ಟಿ ಮಾಡಿದೆ. ಅಂದಹಾಗೆ, ಪತ್ನಿ ಸುಲ್ತಾನರ ಎದುರಲ್ಲೇ ನಾಗರಾಜುವನ್ನು ಹತ್ಯೆಗೈದ ರೀತಿಯಲ್ಲೇ 2018 ಅಕ್ಟೋಬರ್ 14 ರಂದು ಇದೇ ತೆಲಂಗಾಣದಲ್ಲಿ ಪ್ರಣಯ್​ನನ್ನು ಹತ್ಯೆ ಮಾಡಲಾಗಿತ್ತು. ಮೇಲ್ಜಾತಿ ಯುವತಿ ಅಮೃತ ರೆಡ್ಡಿಯನ್ನು ಪ್ರೀತಿಸಿ ವಿವಾಹವಾಗಿದ್ದ ಈ ದಲಿತ ಯುವಕ, ಆಕೆಯ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯ ತಂದೆ ಮತ್ತು ಸಹೋದರರು ಕಣ್ಣೆದುರೇ ಪ್ರಣಯ್ ನನ್ನು ಹತ್ಯೆ ಮಾಡಿದ್ದರು. ಆಗ ಅಮೃತ 5 ತಿಂಗಳ ಬಸುರಿ. ನಿಜವಾಗಿ, ಸಾಮಾಜಿಕವಾಗಿ ನಾವು ಬೆಳೆಸಿ ಪೋಷಿಸಿಕೊಂಡು ಬಂದಂತಹ ಹುಸಿ ಮೌಲ್ಯಗಳೇ ಇಂಥ ಕೃತ್ಯಗಳಿಗೆ ಕಾರಣ, ಧರ್ಮ ಅಲ್ಲ. ಅಷ್ಟಕ್ಕೂ, ಕ್ರೌರ್ಯ- ಧರ್ಮದ ಹೆಸರಲ್ಲಾದರೂ ಜಾತಿಯ ಹೆಸರಲ್ಲಾದರೂ ಪ್ರೇಮದ ಹೆಸರಲ್ಲಾದರೂ ಕ್ರೌರ್ಯವೇ ಮತ್ತು ಕಠಿಣ ದಂಡನಾರ್ಹವೇ, ಅಪರಾಧಿ ಹಿಂದುವಾದರೂ ಮುಸ್ಲಿಮ್ ಆದರೂ.

‘ಮುಸ್ಲಿಮರೊಳಗೂ ಜಾತಿ ಇದೆ…’

ಹೈದರಾಬಾದಿನ ನಾಗರಾಜು ಎಂಬ ಯುವಕನ ಹತ್ಯೆಯು, ‘ಮುಸ್ಲಿಂ ಸಮುದಾಯದ ಒಳಗೂ ಜಾತಿ ಇದೆ’ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಹಾಗಂತ, ಈ ಚರ್ಚೆಯನ್ನು ಇಸ್ಲಾಮೊಫೋಬಿಯಾ ಎಂದು ಮುಸ್ಲಿಮರು ಸಾರಾಸಗಟು ತಿರಸ್ಕರಿಸಬೇಕಿಲ್ಲ.

ಸೈಯದ್, ಶೇಖ್, ಪಠಾಣ, ಪಿಂಜಾರ, ನದಾಫ್, ಪೆಂಡಾರ್, ಭಾಗವಾನ್, ಅತ್ತಾರ, ಬುನಕರ್, ಲೋಹಾರ್, ಚಪ್ಪರಬಂದ್, ನಾಲಬಂದ್, ಜಾತಕಾರ್, ದರ್ವೇಶ್, ಕಸಾಯಿ, ನಾವಿ, ಖಾನ್ ಇತ್ಯಾದಿಗಳೆಲ್ಲಾ ಏನು? ಮುಸ್ಲಿಂ ಸಮುದಾಯದೊಳಗಿನ ಜಾತಿಗಳೇ ಇವು? ಅಲ್ಲ ಎಂದಾದರೆ ಮತ್ತೂ ಕೆಲವು ಪ್ರಶ್ನೆಗಳಿವೆ. ಈ ಸಂಬೋಧೀತರ ನಡುವೆ ಸಂಬಂಧಗಳು ಹೇಗಿವೆ? ವೈವಾಹಿಕ ಸಂಬಂಧ ಇದೆಯೇ? ಪರಸ್ಪರ ಒಟ್ಟು ಸೇರುತ್ತಾರೆಯೇ? ಮಸೀದಿಗಳಲ್ಲಿ ತರತಮ ಇದೆಯೇ? ಒಂದೇ ಪ್ರದೇಶದಲ್ಲಿ ಎಲ್ಲ ಸಂಬೋಧಿತರು ಒಟ್ಟಾಗಿ ಬದುಕುತ್ತಿದ್ದಾರೆಯೇ? ಸಮಾನತೆಯ ಪಾಠ ಹೇಳಿ ಕೊಡುವುದರಲ್ಲಿ ಮದ್ರಸಗಳ ಪಾತ್ರ ಬಹುದೊಡ್ಡದು. ಇಲ್ಲಿ ಅವುಗಳ ಪರಿಸ್ಥಿತಿ ಏನು? ಅಂದಹಾಗೆ, ಈಗ ನಡೆಯುತ್ತಿರುವ ಚರ್ಚೆ, ಕೇಳಿಬರುತ್ತಿರುವ ಆರೋಪ ಮತ್ತು ಜಿಜ್ಞಾಸೆಗಳನ್ನು ಮುಸ್ಲಿಂ ಸಮುದಾಯ ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಕೇಳಿಬಂದಿರುವ ಆರೋಪಗಳ ಬಗ್ಗೆ ಅಧ್ಯಯನಕ್ಕೆ ಏರ್ಪಾಡು ಮಾಡಬೇಕು.

ಇದನ್ನೂ ಓದಿ : Basava Jayanti 2022: ನಿಮ್ಮ ಟೈಮ್​ಲೈನ್; ‘ಆನೀ ಬಿಜ್ಜಳಂಗೆ ಅಂಜುವೆನೆ?’ ಪ್ರಭುತ್ವವನ್ನು ಎದುರು ಹಾಕಿಕೊಂಡ ಬಸವಣ್ಣ

ಈಗಾಗಲೇ ನಡೆದಿರುವ ಅಧ್ಯಯನಾತ್ಮಕ ಬರಹಗಳ ಮೇಲೆ ಅವಲೋಕನ ನಡೆಯಬೇಕು. ಒಂದು ವೇಳೆ ಸಣ್ಣ ಮಟ್ಟದಲ್ಲಾದರೂ ಶ್ರೇಷ್ಠತೆಯ ವ್ಯಸನ ನುಸುಳಿರುವ ಸಂದೇಹಗಳು ಗಮನಕ್ಕೆ ಬಂದರೆ ಅದರ ನಿವಾರಣೆಗಾಗಿ ಮತ್ತು ಸಮಾನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ತಕ್ಷಣವೇ ಮುಸ್ಲಿಂ ಸಂಘಟನೆಗಳು ಜಾಗೃತಿ ಕಾರ್ಯಕ್ರಮವನ್ನು ಅಭಿಯಾನ ರೂಪದಲ್ಲಿ ಹಮ್ಮಿಕೊಳ್ಳಬೇಕು. ದಶಕಗಳ ಹಿಂದೆ ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ವರದಕ್ಷಿಣೆಯ ವಿರುದ್ಧ ಮುಸ್ಲಿಂ ಸಮುದಾಯದ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡವು. ಇವತ್ತು ಅದರ ಫಲಿತಾಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಹಾಗಂತ, ಇಸ್ಲಾಮಿನಲ್ಲಿ ವರದಕ್ಷಿಣೆಯ ಪರಿಕಲ್ಪನೆಯೇ ಇಲ್ಲ. ಆದರೂ ಅದು ಮುಸ್ಲಿಮರೊಳಗೆ ನುಸುಳಿಕೊಂಡಿತ್ತು. ಹಾಗೆಯೇ ಇಸ್ಲಾಮಿನಲ್ಲಿ ಜಾತಿವ್ಯವಸ್ಥೆ ಇಲ್ಲ. ಮನುಷ್ಯರ ನಡುವೆ ಶ್ರೇಷ್ಠ-ಕನಿಷ್ಠ ಎಂಬ ವಿಂಗಡಣೆಗೆ ಜಾಗವೇ ಇಲ್ಲ. ಸಮಾನತೆ ಎಂಬುದು ಈ ಜಗತ್ತಿಗೆ ಇಸ್ಲಾಮಿನ ಬಹುದೊಡ್ಡ ಕೊಡುಗೆ. ಅರಬನಿಗೆ ಅರಬೇತರರಿಗಿಂತ, ಕರಿಯರಿಗೆ ಬಿಳಿಯರಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಮನುಷ್ಯರೆಂಬ ನೆಲೆಯಲ್ಲಿ ಯಾವ ಶ್ರೇಷ್ಠತೆಯೂ ಇಲ್ಲ ಎಂದು ಪ್ರವಾದಿ ಮುಹಮ್ಮದ್ ಬೋಧಿಸಿದ್ದು ಮಾತ್ರ ಅಲ್ಲ ಅಂತಹದ್ದೊಂದು ಸಮಾಜವನ್ನು ಕಟ್ಟಿ ಬೆಳೆಸಿದರು. ಆದ್ದರಿಂದ, ತಂಗಿ ಸುಲ್ತಾನಳ ಪರ ನಿಲ್ಲುವುದರ ಜೊತೆಗೇ ಜಾತಿ ಶ್ರೇಷ್ಠತೆಯ ವ್ಯಸನವು ಈ ಸಮಾನತೆಯ ಧರ್ಮವನ್ನು ಸೋಂಕದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

*

ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

Published On - 7:41 am, Sat, 7 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ