ಬೆಂಗಳೂರು, ಡಿ.17: ಸುಳ್ಳಿನ ಗ್ಯಾರಂಟಿಗಳ ಮೇಲೆ ಈ ಸರ್ಕಾರ ನಡೆಯುತ್ತಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಜನ ತೊಳೆದು ಹಾಕಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ರಾಜ್ಯದ ಜನರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ. ನಾವು ಒಂಭತ್ತೂವರೆ ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿದ್ದೇವೆ. ಕಾಂಗ್ರೆಸ್ ನಾಯಕರು ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು. ಸರ್ಕಾರ ಬಿಲ್ ತಪ್ಪಿಸುವುದಕ್ಕೋಸ್ಕರ ವಿದ್ಯುತ್ ಕಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ಒಂಭತ್ತೂವರೆ ಕೋಟಿ ಜನರಿಗೆ ನಾವು ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಿದ್ದೇವೆ. ಇದರ ಬೆಲೆ 1718 ರೂ. ಆಗುತ್ತೆ. ಆದರೆ ಉಜ್ವಲ ಯೋಜನೆಯಡಿ ನಾವು 603 ರೂ. ಗೆ ಕೊಡ್ತಾ ಇದ್ದೀವಿ. ಉಚಿತ ವಿದ್ಯುತ್ ಅಂತ ಘೋಷಣೆ ಮಾಡಿದ್ರು. ಸರ್ಕಾರ ಬಿಲ್ ತುಂಪಿಸುವುದಕ್ಕೋಸ್ಕರ ವಿದ್ಯುತ್ ಕಟ್ ಮಾಡ್ತಾ ಇದ್ದಾರೆ. ಆಯುಷ್ಮಾನ್ ಆರೋಗ್ಯ ಭಾರತ ಕಾರ್ಡ್ ಮೊತ್ತವನ್ನು ಹೆಚ್ಚಿಸುವ ಚಿಂತನೆ ಇದೆ. ಈಗಿರುವ 5 ಲಕ್ಷದ ಮೊತ್ತವನ್ನ ಹೆಚ್ಚಳ ಮಾಡುವ ಚಿಂತನೆ ಇದೆ. ತುಷ್ಟೀಕರಣದ ರಾಜಕಾರಣ ಪರಿಣಾಮ ಮುಂದೆ ಪ್ರತ್ಯೇಕವಾದ, ಭಯೋತ್ಪಾದನೆಯತ್ತ ಹೋಗುತ್ತೆ. ಟಿಪ್ಪು ಸುಲ್ತಾನ್ ಹೆಸರಿಡುತ್ತೇನೆ ಅಂತ ಹೇಳಿದ್ರು ಆಮೇಲೆ ಸಿಎಂ ಉಲ್ಟಾ ಹೊಡೀತಾರೆ. ಜನರಿಗೆ ಸರಿಯಾಗಿ ವಿದ್ಯುತ್ ಕೊಡ್ತಾ ಇಲ್ಲ. ಸುಳ್ಳಿನ ಗ್ಯಾರೆಂಟಿಗಳ ಮೇಲೆ ಈ ಸರ್ಕಾರ ನಡೆಯುತ್ತಿದೆ. 3 ರಾಜ್ಯಗಳಲ್ಲಿ ಕಾಂಗ್ರೆಸ್ ನ ಜನ ತೊಳೆದು ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ಸಂಸತ್ ಮೇಲಿನ ದಾಳಿಗೆ ನಿರುದ್ಯೋಗ ಸಮಸ್ಯೆ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರದ್ದು ಚೈಲ್ಡೀಶ್ ಹೇಳಿಕೆ. ದೇಶದ ನಿರುದ್ಯೋಗ ಸಮಸ್ಯೆ ಕುರಿತು ಚರ್ಚೆ ಆಗಲಿ ಬೇಡ ಅನ್ನುವುದಿಲ್ಲ. ನಿರುದ್ಯೋಗ ಇದೆ ಅಂತೇಳಿ ಎಂಪಿಯನ್ನೇ ಕೊಲೆ ಮಾಡುತ್ತೇನೆ ಅಂದ್ರೆ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವಾ? ಮೋದಿ ವಿರೋಧಿಸುವ ಭರದಲ್ಲಿ ದೇಶದ್ರೋಹಿಗಳ ಸಮರ್ಥನೆ ಮಾಡಿಕೊಳ್ತೀರಾ? ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಖರ್ಗೆ, ಸೋನಿಯಾ ಸ್ಪಷ್ಟನೆ ಕೊಡಬೇಕು. ನಿರುದ್ಯೋಗ ಬಗ್ಗೆ ಚರ್ಚೆ ಮಾಡಲಿ, ಅದಕ್ಕೆ ಉತ್ತರ ಕೊಡಲು ನಾವು ಸಿದ್ಧ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ಓಡಾಡಿದ್ದರೆ ಕಾಂಗ್ರೆಸ್ ಸೋಲುತ್ತಿತ್ತು. ಮೋದಿ ಜನಪ್ರಿಯತೆಯಿಂದ ನಾವು ಎಲ್ಲಾ ಕಡೆ ಗೆದ್ದಿದ್ದೇವೆ ಎಂದರು.
ಇದನ್ನೂ ಓದಿ: ರಾಯಚೂರು: ಪೂಜೆ ವೇಳೆ ಪ್ರಜ್ವಲಿಸಿದ ಜ್ಯೋತಿ, ಅಯ್ಯಪ್ಪ ಸ್ವಾಮಿಯ ಪವಾಡ ಎನ್ನುತ್ತಿರುವ ಮಾಲಾಧಾರಿಗಳು
ವಿಕಸಿತ ಭಾರತ ಸಂಕಲ್ಪ ಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಜೋಶಿ, ಮೋದಿ ಗ್ಯಾರೆಂಟಿ ಅಂತ ನಾವು ಹೆಸರಿಟ್ಟಿಲ್ಲ. ವಿಕಸಿತ ಭಾರತ ಸಂಕಲ್ಪ ಅಂತ ಜಾರ್ಖಂಡ್ ನಲ್ಲಿ ಸ್ಥಾಪನೆ ಆಯ್ತು. ನಮ್ಮ ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಮುಗಿದಿದೆ. ಇತಿಹಾಸ ಹೊಂದಿರುವ ದೇಶ ನಮ್ಮ ಭಾರತ. ಭಾರತದ ಅಂದಿನ ರಾಜರು ಇತಿಹಾಸದ ಬಗ್ಗೆ ಸುಳ್ಳು ಬರೆದಿದ್ದಾರೆ. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿದೆ. ಮೋದಿಯವರು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿ ಮಾಡಲು ಹೊರಟಿದ್ದಾರೆ. ಕಳೆದ 10 ವರ್ಷಗಳಿಂದಲೂ ಈ ಸೇವೆಯಲ್ಲಿ ಇದ್ದಾರೆ. 11 ವರ್ಷಗಳ ಹಿಂದೆ 2009-14ರವರೆಗೆ ಭಾರತದ ಆರ್ಥಿಕ ಸ್ಥಿತಿ ಗಂಭೀರ ಇತ್ತು. ಜಗತ್ತಿನ ಐದು ದುರ್ಬಲ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಇವತ್ತು ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಭಾರತ ನಿಂತಿದೆ. ಇಂಗ್ಲೆಂಡ್ನ ಹಿಂದೆ ಹಾಕಿ ಭಾರತ ಐದನೇ ಸ್ಥಾನದಲ್ಲಿದೆ. ಮೋದಿ ಸ್ವತಃ ಬಡತನ ಅನುಭವಿಸಿದ ವ್ಯಕ್ತಿ. ಮುಂದಿನ 3 ವರ್ಷದಲ್ಲಿ ಭಾರತ ಅಭಿವೃದ್ಧಿ ಹೊಂದಿದ ಮೂರನೇ ರಾಷ್ಟ್ರವಾಗಿ ನಿಲ್ಲುತ್ತೆ ಎಂದು ಮೋದಿ ಹೇಳಿದ್ದಾರೆ ಎಂದು ಜೋಶಿ ತಿಳಿಸಿದರು.
ಮೋದಿಯವರು ಪ್ರತಿ ಕ್ಯಾಬಿನೆಟ್ನಲ್ಲಿ ನಿಮ್ಮ ವಿಭಾಗಕ್ಕೆ ಎಷ್ಟು ಹಣ ಬಿಡುಗಡೆ ಆಗಿದೆ. ಹೆಚ್ಚುವರಿ ಹಣ ಬೇಕು ಅಂದ್ರೆ ಅಭಿವೃದ್ಧಿ ತೋರಿಸಿ. ಹೆಚ್ಚು ದುಡ್ಡನ್ನ ಜನರಿಗಾಗಿ ಖರ್ಚು ಮಾಡಿ ಅಂದಿದ್ದಾರೆ. 145 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಮೂಲಭೂತ ಸೌಕರ್ಯಗಳು ಜನರಿಗೆ ತಲುಪಿಸಲು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇಂದಿರಾ ಗಾಂಧಿ ಅವಧಿಯಲ್ಲಿ ಇಂದಿರಾ ಆವಾಸ್ ಯೋಜನೆ ಇತ್ತು. ಅವರು ಕಳೆದ 55 ವರ್ಷದಲ್ಲಿ 3.50 ಕೋಟಿ ಮನೆ ಕಟ್ಟಿದ್ರು. ಮೋದಿ ಬಂದು 10 ವರ್ಷದಲ್ಲೇ 4 ಕೋಟಿ ಮನೆಗಳನ್ನು ಕಟ್ಟಿದ್ದಾರೆ. ಮೊದಲನೇಯದಾಗಿ ಯೋಜನೆಯ ಲಾಭ ತಲುಪಿಸುವುದುಕ್ಕೋಸ್ಕರ ವಿಕಸನ ವಾಹನ ವ್ಯವಸ್ಥೆ ಮಾಡಲಾಗಿದೆ. ಯಾರಿಗೆ ಸಿಕ್ಕಿಲ್ಲವೋ ಆಗ ಈ ವಾಹನದ ಮೂಲಕ ಮಾಹಿತಿ ತಲುಪುತ್ತದೆ. ಇದು ಮೋದಿ ಗ್ಯಾರೆಂಟಿ ವಾಹನ. ಜನರೇ ಮೋದಿ ಗ್ಯಾರೆಂಟಿ ಗಾಡಿ ಅಂತ ಹೆಸರಿಟ್ಟಿದ್ದಾರೆ. ಯಾರಿಗೆ ಇದು ಸಿಕ್ಕಿದ್ಯೊ ಅವರಿಗೆ ವಿಶ್ವಾಸ ಮೂಡಿಸುವುದು ಸಿಗದೇ ಇರುವವರಿಗೆ ಇದನ್ನ ಪರಿಚಯ ಮಾಡಿಸುವುದು. ನನ್ನ ಬಳಿ ದುಡ್ಡಿದೆ ಅಂತ ಮನೆಯಲ್ಲಿ ಕೂತಿರುವುದಿಲ್ಲ. ಮೂಲಭೂತ ಸೌಕರ್ಯಗಳನ್ನ ಜನರಿಗೇ ಒದಗಿಸುವುದೇ ನಮ್ಮ ಸಂಕಲ್ಪ. ನಾವು ಗ್ಯಾರೆಂಟಿ ಅಂತ ಎಲ್ಲೂ ಹೇಳಿಲ್ಲ ಎಂದರು.
ಜಲಜೀವನ್ ಮಿಷನ್ ಅಡಿಯಲ್ಲಿ 16 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆಯಾಗ್ತಿದೆ. 3.16 ಕೋಟಿ ವೆಚ್ಚ ಮಾಡಲಾಗಿದೆ. ಯಾರಿಗೆ ಯೋಜನೆ ಸಿಕ್ಕಿಲ್ಲ, ಅವರು ಈಗಲೇ ಪಡೆದುಕೊಳ್ಳಬಹುದು. ಎಲ್ಲಾ ನಾಗರೀಕರು ಭಾಗವಹಿಸಬಹುದು. ದೇಶದಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ. ಬಿಜೆಪಿ ಕಚೇರಿ, ಚಿನ್ನಸ್ವಾಮಿ ಕ್ರೀಡಾಂಗಣ, ಹೈದರಾಬಾದ್, ಮುಂಬೈನಲ್ಲಿ ಬಾಂಬ್ ಸ್ಫೋಟ ಆಗಿತ್ತು. ಈಗ ಅಂತ ಘಟನೆಗಳಿಗೆ ಬ್ರೇಕ್ ಹಾಕಲಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದ್ದು ಮೋದಿ ಸರ್ಕಾರ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Sun, 17 December 23