ಸ್ಯಾಂಡಲ್ವುಡ್ ನಟ, ನಟಿಯರಿಗೆ ಡ್ರಗ್ ಪೆಡ್ಲರ್ ಜೊತೆ ನಂಟು; ಸಿಸಿಬಿ ತನಿಖೆ ವೇಳೆ ವಿಚಾರ ಬಯಲಿಗೆ
ಇತ್ತೀಚೆಗಷ್ಟೇ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಆರೋಪಿ ಜೊತೆ ಸ್ಯಾಂಡಲ್ವುಡ್ ನಟ-ನಟಿಯರಿಗೆ ನಂಟು ಹೊಂದಿರುವ ವಿಚಾರ ಬಯಲಿಗೆ ಬಂದಿದೆ. ಎರಡು ಮೂರು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ಹೆಸರು ಕೇಳಿಬಂದಿತ್ತು. ಪ್ರಕರಣದಲ್ಲಿ ಕೆಲವು ನಟ-ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.
ಬೆಂಗಳೂರು, ಡಿ.17: ಎರಡು ಮೂರು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ (Drugs Case) ಸ್ಯಾಂಡಲ್ವುಡ್ (Sandalwood) ನಟ-ನಟಿಯರ ಹೆಸರು ಕೇಳಿಬಂದಿತ್ತು. ಪ್ರಕರಣದಲ್ಲಿ ಕೆಲವು ನಟ-ನಟಿಯರನ್ನು ಸಿಸಿಬಿ (CCB) ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ಕನ್ನಡದ ಕಿರುತೆರೆ, ಚಲನಚಿತ್ರ ನಟ ನಟಿಯರಿಗೆ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿರುವುದು ಸಿಸಿಬಿ ತನಿಖೆ ವೇಳೆ ಬಯಲಿಗೆ ಬಂದಿದೆ.
ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜಾಗುತ್ತಿದೆ. ಈ ನಡುವೆ ವಿದೇಶದಿಂದ ನಗರಕ್ಕೆ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಅದರಂತೆ ಹದ್ದಿನ ಕಣ್ಣಿಟ್ಟಿರುವ ಸಿಸಿಬಿ ಪೊಲೀಸರು, ಇತ್ತೀಚೆಗೆ 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಆಫ್ರಿಕಾ ಮೂಲದ ಆರೋಪಿ ಲಿಯೋನಾರ್ಡ್ ಎಂಬಾತನನ್ನು ಬಂಧಿಸಿದ್ದರು.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನಶೆ ಏರಿಸಲು 100 ಕೋಟಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ! ಸ್ಪೆಷಲ್ ಡ್ರೈವ್ಗೆ ಸಜ್ಜಾದ ನಗರ ಪೊಲೀಸರು
ಸದ್ಯ, ಆರೋಪಿಯನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ನಟ, ನಟಿಯರ ನಂಟು ಬಯಲಿಗೆ ಬಂದಿದೆ. ಆದರೆ, ಡ್ರಗ್ಸ್ ಸೇವನೆ ಮಾಡುತ್ತಿರುವವರ ಪತ್ತೆಗೆ ಮುಂದಾಗದ ಪೊಲೀಸರು, ಬುಡದಿಂದಲೇ ಮಾದಕ ಜಾಲವನ್ನು ಕಿತ್ತು ಹಾಕುವ ಪ್ರಯತ್ನದಲ್ಲಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ