ತಿರುಮಲಶೆಟ್ಟಿಹಳ್ಳಿಯ ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಕೇಸ್​: ಡಾ ಶ್ರೀನಿವಾಸ್ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿರುವ ಎಸ್​​ಪಿಜಿ ಆಸ್ಪತ್ರೆ ಮಾಲೀಕ, ವೈದ್ಯ ಡಾ.ಶ್ರೀನಿವಾಸ್​ರನ್ನು ಪೊಲೀಸರು ಬಂಧಿಸಿದ್ದಾರೆ. ಸಂಪೂರ್ಣ ತನಿಖೆ ನಂತರ ಭ್ರೂಣಹತ್ಯೆಯ ಮತ್ತಷ್ಟು ರಹಸ್ಯ ಬಯಲಾಗಲಿದೆ. ಸದ್ಯ ಆಸ್ಪತ್ರೆ ವೈದ್ಯ ಸೇರಿದಂತೆ ಐವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ತಿರುಮಲಶೆಟ್ಟಿಹಳ್ಳಿಯ ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಕೇಸ್​: ಡಾ ಶ್ರೀನಿವಾಸ್ ಬಂಧನ
ಬಂಧಿತ ಡಾ.ಶ್ರೀನಿವಾಸ್
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2023 | 8:28 PM

ದೇವನಹಳ್ಳಿ, ಡಿಸೆಂಬರ್​ 16: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಎಸ್​ಪಿಜಿ (SPG) ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನಸಂದ್ರ ಗ್ರಾಮದಲ್ಲಿ ಅಡಗಿದ್ದ ಎಸ್​ಪಿಜಿ ಆಸ್ಪತ್ರೆ ಮಾಲೀಕ, ವೈದ್ಯ ಡಾ.ಶ್ರೀನಿವಾಸ್​ರ​ನ್ನು ಪೊಲೀಸರು ಬಂಧಿಸಿದ್ದಾರೆ. ಸಂಪೂರ್ಣ ತನಿಖೆ ನಂತರ ಭ್ರೂಣಹತ್ಯೆಯ ಮತ್ತಷ್ಟು ರಹಸ್ಯ ಬಯಲಾಗಲಿದೆ. ಭ್ರೂಣಹತ್ಯೆ ಮಾಡಿ ಠಾಣಾ ವ್ಯಾಪ್ತಿಯಲ್ಲೆ ಪ್ರಮುಖ ಆರೋಪಿ ಅಡಗಿಕೊಂಡಿದ್ದ. ಆದರೆ ಪೊಲೀಸರಿಗೆ ಬೇರೆಡೆ ಹೋಗಿರುವುದಾಗಿ ಡೈವರ್ಟ್ ಮಾಡಿದ್ದ.

ಡಾ.ಶ್ರೀನಿವಾಸ್​ ಸೇರಿದಂತೆ ಐವರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶ್ರೀನಿವಾಸ್ ಮೊದಲ ಆರೋಪಿಯಾಗಿದ್ದು (ಎ1), ಎ2 ನರ್ಸ್​ ಅನಿತಾ, ಎ3 ನರ್ಸ್​​ ನೇತ್ರಾ, ಎ4 ರೇವತಿ, ಎ5 ರಾಧಿಕಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಪರಿಶೀಲನೆಗೆ ಹೋದಾಗಲೇ ಹೊಸಕೋಟೆಯಲ್ಲಿ ಭ್ರೂಣ ಹತ್ಯೆ ಪತ್ತೆ: ಎಸ್​​ಪಿಜಿ ಆಸ್ಪತ್ರೆ ಸೀಜ್, ರೋಗಿಗಳು ಶಿಫ್ಟ್

ಮೈಸೂರು, ಮಂಡ್ಯದಲ್ಲಷ್ಟೇ ಅಲ್ಲದೇ ಬೆಂಗಳೂರಿನ ಮಡಿಲಲ್ಲೇ ಭ್ರೂಣ ಹತ್ಯೆ ಕೃತ್ಯ ನಡೆದಿತ್ತು. ಹೆಣ್ಣು ಅನ್ನೋ ಒಂದೇ ಒಂದು ಕಾರಣಕ್ಕೆ ಗರ್ಭದಲ್ಲೇ ಶಿಶುಗಳನ್ನ ಹೊಸಕಿ ಹಾಕಿದ್ದರು. ಎಸ್​ಪಿಜಿ ಆಸ್ಪತ್ರೆಯಲ್ಲೇ ನಡೆದಿದ್ದ ರಕ್ತಸಿಕ್ತ ದಂಧೆ ಬೆಚ್ಚಿ ಬೀಳುವಂತಿತ್ತು.

ಒಂದಲ್ಲ, ಎರಡಲ್ಲ, 14 ಹೆಣ್ಣು ಭ್ರೂಣಗಳ ಹತ್ಯೆ ಮಾಡಿರುವುದು ಬಯಲಾಗಿದೆ. ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿ ಬಳಿಯ ಎಸ್​​​ಪಿಜಿ ಆಸ್ಪತ್ರೆಯಲ್ಲಿ ಅಬಾರ್ಷನ್ ವೇಳೆ ರೆಡ್ ಹ್ಯಾಂಡ್ ಆಗಿ ವೈದ್ಯರು ಸಿಕ್ಕಿಬಿದ್ದಿದ್ದರು. ಇನ್ನು ಬಂಧಿತ ನಾಲ್ವರನ್ನ ಸುದೀರ್ಘ ವಿಚಾರಣೆ ನಡೆಸಿ ಹಲವು ಮಾಹಿತಿ ಪಡೆದಿರುವ ಪೊಲೀಸರು ಹೊಸಕೋಟೆಯ ಜೆೆಎಂಎಫ್‌ಸಿಗೆ ಹಾಜರುಪಡಿಸಿದ್ದರು. ನಾಲ್ವರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು. ಹೀಗಾಗಿ ಸ್ಟಾಪ್ ನರ್ಸಗಳಾದ ಅನಿತಾ, ನೇತ್ರ ಮತ್ತು ಸಿಬ್ಬಂದಿ ರಾಧಿಕಾ ಮತ್ತು ರೇವತಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಭ್ರೂಣಹತ್ಯೆ ವೇಳೆ ವೈದ್ಯನಿಗೆ ನೆರವು

ಹೆಣ್ಣು ಭ್ರೂಣಹತ್ಯೆ ವೇಳೆ ಈ ನಾಲ್ವರು ವೈದ್ಯರಿಗೆ ನೆರವಾಗಿದ್ದರು ಅನ್ನೋದು ತನಿಖೆಯಲ್ಲಿ ಬಯಲಾಗಿದೆ.  ಮೆಡಿಕಲ್ ಆ್ಯಕ್ಟ್​ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಂಜುನಾಥ್ ಎಸ್‌ಪಿಜಿ ಆಸ್ಪತ್ರೆ ವಿರುದ್ಧ ಮತ್ತೊಂದು ಕೇಸ್‌ ದಾಖಲಿಸಿದ್ದಾರೆ. ನೋಂದಣಿಯಾಗ ಮಷಿನ್‌ ಹೊಂದಿರೋ ಸಂಬಂಧ ಕೇಸ್‌ ದಾಖಲಿಸಿದ್ದು ಆಸ್ಪತ್ರೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಹೊಸಕೋಟೆ: SPG ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ, ಎಫ್​ಐಆರ್ ದಾಖಲು

ಖಾಸಗಿ ಕ್ಲಿನಿಕ್​ನಲ್ಲಿ ಅಕ್ರಮ ಸ್ಕ್ಯಾನಿಂಗ್ ಮಿಷ‌ನ್ ಪತ್ತೆ ಆಗಿದ್ದವು. ಕೆಪಿಎಂಇ ಆಕ್ಟ್ ಪಾಲನೆ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಮಿಷನ್ ಪತ್ತೆಯಾಗಿದ್ದವು. ಸ್ಕ್ಯಾನಿಂಗ್ ಮಿಷನ್ ಹಿನ್ನೆಲೆ ಹುಡುಕಿ ಹೊರಟಾಗ ಭ್ರೂಣ ಹತ್ಯೆ ಬಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.