ಪರಿಶೀಲನೆಗೆ ಹೋದಾಗಲೇ ಹೊಸಕೋಟೆಯಲ್ಲಿ ಭ್ರೂಣ ಹತ್ಯೆ ಪತ್ತೆ: ಎಸ್​​ಪಿಜಿ ಆಸ್ಪತ್ರೆ ಸೀಜ್, ರೋಗಿಗಳು ಶಿಫ್ಟ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯಲ್ಲಿ ಮೈಸೂರು ಮಾದರಿಯಲ್ಲಿ ಮತ್ತೊಂದು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದಾಖಲಾತಿ ಪರಿಶೀಲನೆಗೆ ಬಂದಿದ್ದ ‌ವೇಳೆ ಲೈವ್​ನಲ್ಲಿ ಭ್ರೂಣ ಹತ್ಯೆ ಪತ್ತೆ ಆಗಿದೆ. ಆಸ್ಪತ್ರೆಯಲ್ಲಿ 5 ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿ ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪರಿಶೀಲನೆಗೆ ಹೋದಾಗಲೇ ಹೊಸಕೋಟೆಯಲ್ಲಿ ಭ್ರೂಣ ಹತ್ಯೆ ಪತ್ತೆ: ಎಸ್​​ಪಿಜಿ ಆಸ್ಪತ್ರೆ ಸೀಜ್, ರೋಗಿಗಳು ಶಿಫ್ಟ್
ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 13, 2023 | 9:39 PM

ದೇವನಹಳ್ಳಿ, ಡಿಸೆಂಬರ್​​ 13: ಮೈಸೂರು ಮಾದರಿಯಲ್ಲಿ ಮತ್ತೊಂದು ಭ್ರೂಣ ಹತ್ಯೆ ಪ್ರಕರಣ (Foeticide) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಬಳಿ ಬೆಳಕಿಗೆ ಬಂದಿದೆ.  ವೈದ್ಯ ಶ್ರೀನಿವಾಸ್​ಗೆ ಸೇರಿದ SPG ಆಸ್ಪತ್ರೆ, ಡಯಾಗ್ನೋಸ್ಟಿಕ್ ಸೆಂಟರ್​ನಲ್ಲಿ ದಾಖಲಾತಿ ಪರಿಶೀಲನೆಗೆ ಬಂದಿದ್ದ ‌ವೇಳೆ ಲೈವ್​ನಲ್ಲಿ ಭ್ರೂಣ ಹತ್ಯೆ ಪತ್ತೆ ಆಗಿದೆ. ಆಸ್ಪತ್ರೆಯಲ್ಲಿ 5 ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿ ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಕಳೆದ 1 ವಾರದಿಂದ ಆಸ್ಪತ್ರೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಹಲವು ದಾಖಲೆಗಳ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಅನುಮಾನ ಬಂದಿದ್ದರಿಂದ ಹೀಗಾಗಿ ಇಂದು ಮತ್ತೊಮ್ಮೆ ಪರಿಶೀಲನೆಗೆ ಅಧಿಕಾರಿಗಳ ತಂಡ ಆಗಮಿಸಿದೆ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಒಳಪ್ರವೇಶಿಸುತ್ತಿದ್ದಂತೆ ಈ ವೇಳೆ ಗರ್ಭಪಾತ ಮಾಡಿಸಿಕೊಂಡು ಮಹಿಳೆ ಹೊರಬಂದಿದ್ದಾಳೆ.

ಇದನ್ನೂ ಓದಿ: ಮಂಡ್ಯದಲ್ಲಿ ಭ್ರೂಣಲಿಂಗ ಹತ್ಯೆ ಕೇಸ್​: ಸ್ಯ್ಕಾನಿಂಗ್ ಸೆಂಟರ್​ಗೆ ಬೀಗ ಜಡಿದ ಅಧಿಕಾರಿಗಳು

ಕೂಡಲೇ ಅಲರ್ಟ್ ಆದ ಅಧಿಕಾರಿಗಳಿಂದ ಮತ್ತಷ್ಟು ತೀವ್ರ ತನಿಖೆ ಮಾಡಲಾಗಿದ್ದು, ಸ್ಥಳಕ್ಕೆ ರಾಜ್ಯ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ವಿವೇಕ್ ದೊರೆ ಹಾಗೂ ಶ್ರೀನಿವಾಸ್ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿನ ಸಂಪೂರ್ಣ ದಾಖಲೆ ಪರಿಶೀಲಿಸಿದ್ದಾರೆ.

ಅಕ್ರಮ ಸ್ಕ್ಯಾನಿಂಗ್ ಮಿಷ‌ನ್ ಪತ್ತೆ

2 ದಿನದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ‌ನೇತೃತ್ವದಲ್ಲಿ ದಾಳಿ ಮಾಡಿದ್ದು, ಖಾಸಗಿ ಕ್ಲಿನಿಕ್​ನಲ್ಲಿ ಅಕ್ರಮ ಸ್ಕ್ಯಾನಿಂಗ್ ಮಿಷ‌ನ್ ಪತ್ತೆ ಆಗಿದೆ. ಕೆಪಿಎಂಇ ಆಕ್ಟ್ ಪಾಲನೆ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಮಿಷನ್ ಪತ್ತೆಯಾಗಿದೆ. ಸ್ಕ್ಯಾನಿಂಗ್ ಮಿಷನ್ ಹಿನ್ನೆಲೆ ಹುಡುಕಿ ಹೊರಟಾಗ ಭ್ರೂಣ ಹತ್ಯೆ ಬಯಲಾಗಿದೆ.

ಇದನ್ನೂ ಓದಿ: ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿ ನಟರಾಜ್ ಬೆಂಗಳೂರಿನಲ್ಲಿ ನೇಣುಬಿಗಿದು ಆತ್ಮಹತ್ಯೆ

ರಿಜಿಸ್ಟರ್ ಮಾಡಿಸದೆ‌ ಅಕ್ರಮವಾಗಿ ಸ್ಕ್ಯಾನಿಂಗ್ ಮಿಷನ್ ಇಟ್ಟುಕೊಂಡಿದ್ದರು. ಹೀಗಾಗಿ ಸ್ಕ್ಯಾನ್ ಬಗ್ಗೆ ಇಂದು ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದರು. ಈ ವೇಳೆ ಆಪರೇಷನ್ ಥಿಯೇಟರ್​ನಲ್ಲಿ 16 ವಾರದ ಹೆಣ್ಣು ಭ್ರೂಣ ಪತ್ತೆಯಾಗಿದೆ. ಬೆಳಗ್ಗೆಯಷ್ಟೇ ಭ್ರೂಣಹತ್ಯೆ ಮಾಡಿ ಕವರನಲ್ಲಿ ಸುತ್ತಿಟ್ಟಿದ್ದಾರೆ. ಹೀಗಾಗಿ ಭ್ರೂಣವನ್ನ ವಶಪಡಿಸಿಕೊಂಡು ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಿಂದ ದೂರು ನೀಡಲಾಗಿದೆ.

ಸೀಜ್ ಮಾಡಲು ಸಿದ್ಧತೆ

ಭ್ರೂಣ ಹತ್ಯೆ ಹಿನ್ನೆಲೆ ಎಸ್​ಪಿಜಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆಸ್ಪತ್ರೆ ಸೀಜ್ ಮಾಡಲು ತಯಾರಿ ಮಾಡಲಾಗುತ್ತಿದೆ. ಸದ್ಯ ಎಸ್​ಪಿಜಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಅವರಿಗೆ ಬೇಕಾದ ಆಸ್ಪತ್ರೆಗಳಿಗೆ ಸಿಬ್ಬಂದಿ ಕಳಿಹಿಸಿದ್ದಾರೆ. ಮಕ್ಕಳ ಜೊತೆ ಆಟೋ, ಬೈಕ್​ನಲ್ಲಿ ರೋಗಿಗಳು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಭ್ರೂಣ ಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆ ವೈದ್ಯ ಶ್ರೀನಿವಾಸ್ ಪರಾರಿ ಆಗಿದ್ದಾರೆ.

DHO ಸುನೀಲ್ ಕುಮಾರ್ ಹೇಳಿದ್ದಿಷ್ಟು

ಟಿವಿ9ಗೆ ಬೆಂಗಳೂರು ಗ್ರಾಮಾಂತರ DHO ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಎಸ್​ಪಿಜಿ ಆಸ್ಪತ್ರೆಯಲ್ಲಿ ಅನಧಿಕೃತ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವಿತ್ತು. ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆಪರೇಷನ್ ಥಿಯೇಟರ್​ನಲ್ಲಿ ಗಾರ್ಬೇಜ್​ ಜೊತೆ ಭ್ರೂಣವಿತ್ತು. ಒಟಿಯಲ್ಲಿ ಸಿಕ್ಕ ಭ್ರೂಣವನ್ನು ಆರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದು 16ರಿಂದ 20 ವಾರಗಳ ಭ್ರೂಣ ಎಂಬ ಪ್ರಾಥಮಿಕ ಮಾಹಿತಿಯಿದೆ. ಎಸ್​ಪಿಜಿ ಆಸ್ಪತ್ರೆ ಮುಖ್ಯಸ್ಥ, ವೈದ್ಯ ಡಾ.ಶ್ರೀನಿವಾಸ್ ನಾಪತ್ತೆಯಾಗಿದ್ದಾರೆ. ಪತ್ತೆಗಾಗಿ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿಗೆ ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:35 pm, Wed, 13 December 23