ಮಂಡ್ಯದಲ್ಲಿ ಭ್ರೂಣಲಿಂಗ ಹತ್ಯೆ ಕೇಸ್: ಸ್ಯ್ಕಾನಿಂಗ್ ಸೆಂಟರ್ಗೆ ಬೀಗ ಜಡಿದ ಅಧಿಕಾರಿಗಳು
ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಜಿಲ್ಲೆಯಲ್ಲಿ ಕಾರ್ಯಾಚರಣೆಗಿಳಿದಿರುವ ಅಧಿಕಾರಿಗಳು ತಜ್ಞ ವೈದ್ಯರಿಲ್ಲದೇ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿದ್ದ ಹಿನ್ನೆಲೆ ಕೆ.ಆರ್ ಪೇಟೆಯ ನಾವಿ ಸ್ಕ್ಯಾನಿಂಗ್ ಸೆಂಟರ್ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮಂಡ್ಯ, ಡಿಸೆಂಬರ್ 05: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ (Female Feticide) ಪ್ರಕರಣ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟಸ್ವಾಮಿ ಹಾಗೂ ಪಾಂಡವಪುರ ಎಸಿ ನಂದೀಶ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದ್ದು, ತಜ್ಞ ವೈದ್ಯರಿಲ್ಲದೇ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿದ್ದ ಹಿನ್ನೆಲೆ ಕೆ.ಆರ್ ಪೇಟೆಯ ನಾವಿ ಸ್ಕ್ಯಾನಿಂಗ್ ಸೆಂಟರ್ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಆಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ
ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಪತ್ತೆಹಚ್ಚಿದ ಆಲೆಮನೆಯಲ್ಲಿ ಲಿಂಗ ಪತ್ತೆ ಮಾತ್ರವಲ್ಲದೇ ಹೆಣ್ಣು ಭ್ರೂಣ ಹತ್ಯೆ ಕೂಡ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಿಗೆ ಬಂದಿತ್ತು. ಆರೋಪಿ ನವೀನ್ಗೆ ಸಂಬಂಧಿ ಜಾಗ ಇದಾಗಿತ್ತು. ಕಬ್ಬಿನಗದ್ದರೆ ಒಳಭಾಗದ ಅಲೆಮನೆ ಪಕ್ಕಸಲ್ಲಿ ಭ್ರೂಣ ಪತ್ತೆ ಜೊತೆ ಹೆಣ್ಣು ಭ್ರೂಣ ಹತ್ಯೆ ಕೂಡ ನಡೆಯುತ್ತಿತ್ತು. ಸಣ್ಣ ಸುಳಿವೂ ಬಿಡದೆ ಆಲೆಮನೆಯಲ್ಲಿ ಕಳೆದ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿತ್ತು.
ಇದನ್ನೂ ಓದಿ: ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?
ಮಂಡ್ಯದ ಆರೋಗ್ಯಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಗಂಭೀರ ಆರೋಪ ಮಾಡಿದ್ದರು. ಭ್ರೂಣ ಹತ್ಯೆ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. 100 ಗಂಡು ಮಕ್ಕಳಾದ್ದರೆ, 60 ಹೆಣ್ಣ ಮಕ್ಕಳಿದ್ದಾರೆ. 2021ರಲ್ಲೇ ನನಗೆ ಮಾಹಿತಿ ಇತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಮಂಡ್ಯದ ನರ್ಸಿಂಗ್ ಹೊಂಗಳಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದರು. ಇದರಲ್ಲಿ ಏಜೆಂಟ್ಗಳ ದೊಡ್ಡ ತಂಡವೇ ಇದೆ ಎಂದಿದ್ದರು.
ಇದನ್ನೂ ಓದಿ: ಮಂಡ್ಯದಲ್ಲಿ ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಗೊತ್ತಾ? ಎಳೆಎಳೆಯಾಗಿ ಬಿಚ್ಚಿಟ್ಟ ಪುರಸಭೆ ಸದಸ್ಯ
ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಬೈಯಪ್ಪನಹಳ್ಳಿ ಠಾಣೆ ಪೊಲೀಸರು 9 ಜನರನ್ನ ಬಂಧಿಸಲಾಗಿದೆ. ಈ ಕರಾಳ ದಂಧೆಗೆ ಆರೋಪಿಗಳು ಮಂಡ್ಯ ಜಿಲ್ಲೆಯನ್ನೇ ಅಡ್ಡೆ ಮಾಡಿಕೊಂಡಿದ್ದರು. ವಿಪರ್ಯಾಸ ಎಂದರೇ ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಈ ಕರಾಳ ದಂಧೆ ಬಗ್ಗೆ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕುಳಿತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.