ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?

Mandya Foetus Gender Detection, Murder Case: ಮಂಡ್ಯದಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಬಗ್ಗೆ 2011ರಲ್ಲಿಯೇ ಆರೋಗ್ಯ ಇಲಾಖೆಗೆ ಮಾಹಿತಿ ಇತ್ತು. ಸಭೆಯೊಂದರಲ್ಲಿ ದೊಡ್ಡಜಾಲ ದಂಧೆ ಮಾಡುತ್ತಿರುವ ಬಗ್ಗೆ ಅಧಿಕಾರಿಯೇ ಸಭೆಯಲ್ಲಿಯೇ ಒಪ್ಪಿಕೊಂಡಿದ್ರು. 2021ರ ನವೆಂಬರ್ 6ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಸಭೆಯಲ್ಲಿ ಪುರಸಭೆ ಸದಸ್ಯ ನಂದೀಶ್ ಎಂಬುವವರು ವಿಚಾರ ಪ್ರಸ್ತಾಪ ಮಾಡಿ, ಹೆಣ್ಣು ಮಕ್ಕಳ ಸಂಖ್ಯೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?
ಬಂಧಿತ ಆರೋಪಿಗಳು
Follow us
ಪ್ರಶಾಂತ್​ ಬಿ.
| Updated By: Ganapathi Sharma

Updated on: Nov 27, 2023 | 4:50 PM

ಮಂಡ್ಯ, ನವೆಂಬರ್ 27: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ (Fetus gender detection, murder case) ಬಗ್ಗೆ ಸುಳಿವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಬೈಯಪ್ಪನಹಳ್ಳಿ ಠಾಣೆ ಪೊಲೀಸರು 9 ಜನರನ್ನ ಬಂಧಿಸಿದ್ದಾರೆ. ಈ ಕರಾಳ ದಂಧೆಗೆ ಆರೋಪಿಗಳು ಮಂಡ್ಯ (Mandya) ಜಿಲ್ಲೆಯನ್ನೇ ಅಡ್ಡೆ ಮಾಡಿಕೊಂಡಿದ್ದರು. ವಿಪರ್ಯಾಸ ಎಂದರೇ ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಈ ಕರಾಳ ದಂಧೆ ಬಗ್ಗೆ ಮಾಹಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕುಳಿತಿದ್ದರು.

ಆಲೆಮನೆಯಲ್ಲೇ ನಡೆಯುತ್ತಿತ್ತು ಭ್ರೂಣ ಪತ್ತೆ!

ಪ್ರಕರಣಕ್ಕೆ ಸಂಬಂಧಿಸಿ ಈವರೆಗೂ ಪೊಲೀಸರು 9 ಜನರನ್ನ ಬಂಧಿಸಿದ್ದಾರೆ. ಇನ್ನು ಈ ಕರಾಳ ದಂಧೆಗೆ ಅಡ್ಡೆಯಾಗಿದ್ದೇ ಮಂಡ್ಯ ಜಿಲ್ಲೆ. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಆಲೆಮನೆಯೊಂದರಲ್ಲಿ ಸಣ್ಣದಾದ ಶೆಡ್ ನಿರ್ಮಾಣ ಮಾಡಿ ಹೇಯಕೃತ್ಯವನ್ನ ಕ್ರೂರಿಗಳು ನಡೆಸುತ್ತಿದ್ದರು. ಆಲೆಮನೆಯಲ್ಲಿಯೇ ಎರಡು ವರ್ಷಗಳಲ್ಲಿ 900 ಭ್ರೂಣಲಿಂಗವನ್ನ ಪತ್ತೆ ಮಾಡಿ, ಕರಳುಬಳ್ಳಿಗಳನ್ನ ಕಮರಿಸಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದರು. ಇನ್ನು ಮಂಡ್ಯ ಜಿಲ್ಲೆಯಲ್ಲಿ ಇಂತಹದೊಂದು ಹೇಯಕೃತ್ಯ ನಡೆಯುತ್ತಿರುವ ಸುದ್ದಿಕೇಳಿ ಮಂಡ್ಯ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕರಾಳ ದಂಧೆಗೆ ಮಂಡ್ಯ ಜಿಲ್ಲೆಯೇ ಅಡ್ಡೆಯಾಗಿದ್ರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸ. ಇನ್ನು ಎರಡು ವರ್ಷಗಳ ಕೆಳಗೆ ಈ ಬಗ್ಗೆ ಮಾಹಿತಿ ಇದ್ದರು, ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಬಗ್ಗೆ 2011ರಲ್ಲಿಯೇ ಆರೋಗ್ಯ ಇಲಾಖೆಗೆ ಮಾಹಿತಿ ಇತ್ತು. ಸಭೆಯೊಂದರಲ್ಲಿ ದೊಡ್ಡಜಾಲ ದಂಧೆ ಮಾಡುತ್ತಿರುವ ಬಗ್ಗೆ ಅಧಿಕಾರಿಯೇ ಸಭೆಯಲ್ಲಿಯೇ ಒಪ್ಪಿಕೊಂಡಿದ್ರು. 2021ರ ನವೆಂಬರ್ 6ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಸಭೆಯಲ್ಲಿ ಪುರಸಭೆ ಸದಸ್ಯ ನಂದೀಶ್ ಎಂಬುವವರು ವಿಚಾರ ಪ್ರಸ್ತಾಪ ಮಾಡಿ, ಹೆಣ್ಣು ಮಕ್ಕಳ ಸಂಖ್ಯೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಆಗುತ್ತಿದೆಯಾ, ಹೆಣ್ಣು ಮಕ್ಕಳ ಜನನ ಸಂಖ್ಯೆ ಕುಸಿಯಲು ಕಾರಣವೇನು ಎಂದು ಮಾಹಿತಿ ಕೇಳಿದ್ರು. ಈ ವೇಳೆ ವೈದ್ಯಾಧಿಕಾರಿ ಡಾ.ಮಾರುತಿ ದಂಧೆ ನಡೆಯುತ್ತಿರುವುದನ್ನ ಒಪ್ಪಿಕೊಂಡಿದ್ರು. ಒಂದು ಹೆಣ್ಣು ಮಗು ಇರುವ ಕೆಲವರು ಗರ್ಭಿಣಿಯಾದ್ರೂ ಮಾಹಿತಿ ಕೊಡಲ್ಲ. ಲಿಂಗ ಪತ್ತೆ ಮಾಡುವವರೆಗೂ ಗೌಪ್ಯವಾಗಿ ಇಟ್ಟಿರುತ್ತಾರೆ. ಸ್ಥಳೀಯವಾಗಿರುವ ಆಶಾ ಕಾರ್ಯಕರ್ತರ ಗಮನಕ್ಕೂ ತರುವುದಿಲ್ಲ. ಭ್ರೂಣ ಲಿಂಗ ಪತ್ತೆ ಬಗ್ಗೆ ಮಂಡ್ಯ, ಕೆ.ಆರ್.ಪೇಟೆಯಲ್ಲಿ ದಾಳಿಯಾಗಿತ್ತು. ಇದರಲ್ಲಿ ದೊಡ್ಡ ಜಾಲವೇ ಇದೆ. ನಾನು ತಾಲೂಕು ಆಸ್ಪತ್ರೆ ಅಧಿಕಾರಿ, ನನಗೆ ಆ ಜಾಲದ ಬಗ್ಗೆ ಅಷ್ಟು ಮಾಹಿತಿ ಇಲ್ಲ. ಆದ್ರೆ ದೊಡ್ಡ ಜಾಲ ಇದೆ ಎಂದು ಮಾಹಿತಿ ನೀಡಿದ್ರು.

ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿಯ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣಲಿಂಗ ಪತ್ತೆ ಕರಾಳ ದಂಧೆಯಲ್ಲಿ ಬಾವ-ಬಾಮೈದರು ಭಾಗಿಯಾಗಿದ್ರು. ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ನಿವಾಸಿ ನಯನ್ ಹಾಗೂ ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದ ನಿವಾಸಿ ನವೀನ್ ಈ ದಂಧೆಯ ಸೂತ್ರಧಾರಿಗಳು. ಇನ್ನು ನಯನ್ ಅಕ್ಕನನ್ನೇ ನವೀನ್ ಮದುವೆ ಆಗಿದ್ದ.

ಇನ್ನು ನಯನ್ ಗ್ರಾಮದಲ್ಲಿ ಕಿರಾಣಿ ಅಂಗಡಿ, ವ್ಯವಸಾಯ, ಹಸು ಸಾಕಾಣಿಕೆ ಮಾಡುತ್ತಿದ್ರೆ, ನವೀನ್ ಗ್ರಾಮದಲ್ಲಿ ಕೇಬಲ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಇಬ್ಬರು ಸೇರಿ ಹೆಚ್ಚು ಹಣ ಸಂಪಾದಿಸಲು ಹೇಯಕೃತ್ಯಕ್ಕೆ ಕೈ ಹಾಕಿದ್ದರು. ನವೀನ್ ಸಂಬಂಧಿಕರ ಆಲೆಮನೆಯನ್ನ ಬಾಡಿಗೆ ಪಡೆದು, ಆಲೆಮನೆಯ ಹೆಸರಲ್ಲಿ ಕರಾಳದಂಧೆ ನಡೆಸುತ್ತಿದ್ದರು. ಸ್ಥಳದ ಬಗ್ಗೆ ಅನುಮಾನ ಬರಬಾರದು ಎಂದು ಹೊರ ಜಿಲ್ಲೆಯವರನ್ನೇ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡುತ್ತಿದ್ದರು. ವಾರಕ್ಕೆ ಎರಡು ಮೂರು ಬಾರಿ ಕಾರನಲ್ಲಿ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿ ಕೆಲವೇ ಗಂಟೆಗಳಲ್ಲಿ ಕಳುಹಿಸುತ್ತಿದ್ದರು. ಕಾರಿನಲ್ಲಿ ಬಂದು ಹೋಗುತ್ತಿದ್ದ ಮಹಿಳೆಯರ ಬಗ್ಗೆ ಕೆಲ ಸ್ಥಳೀಯರಿಗೆ ಅನುಮಾನ ಬರಬಾರದು ಎಂದು ಸ್ತ್ರೀಶಕ್ತಿ ಸಂಘ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ರು. ಇನ್ನು ಸ್ಥಳೀಯ ಗರ್ಭೀಣಿಯರ ಸ್ಕ್ಯಾನಿಂಗ್ ಮಾಡುತ್ತಿರಲಿಲ್ಲ. ಸಂಜೆ ವೇಳೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡುತ್ತಿದ್ದರು. ಈ ದಂಧೆಯಲ್ಲಿ ಬ್ಯುಸಿಯಾಗಿದ್ದ ನಯನ್ ಹಣ ಸಂಪಾದನೆ ನಂತರ ಹಸು ನೋಡಿಕೊಳ್ಳಲು, ಮೇವು ತರಲು ಕೂಡ ಆಳುಗಳನ್ನ ಇಟ್ಟುಕೊಂಡಿದ್ದ. ಇನ್ನು ದಂಧೆಯ ಬಗ್ಗೆ ಅನುಮಾನ ಬಾರದು ಎಂದು ಬೆಂಗಳೂರಿನಿಂದ ಹಾಡ್ಯದ ಆಲೆಮನೆಗೆ ಗರ್ಭಿಣಿಯರನ್ನ ಕರೆದು ಬರುವಾಗ ಮೂರು ವಾಹನಗಳನ್ನ ಬದಲಾವಣೆ ಮಾಡುತ್ತಿದ್ದರು. ಬೆಂಗಳೂರಿನಿಂದ ಮಂಡ್ಯದವರೆಗೂ ಒಂದು ವಾಹನ, ಮಂಡ್ಯದಿಂದ ವಿಸಿ ಫಾರ್ಮ್ ವರೆಗೂ ಒಂದು ವಾಹನ, ಅಲ್ಲಿಂದ ಹಾಡ್ಯದವರೆಗೂ ಒಂದು ವಾಹನವನ್ನ ಬಳಸುತ್ತಿದ್ದರು.

ಇದನ್ನೂ ಓದಿ: 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ: 2 ವೈದ್ಯರು ಸೇರಿದಂತೆ 9 ಆರೋಪಿಗಳ ಬಂಧನ

ಒಟ್ಟಾರೆ ಹಣದಾಸೆಗೆ ಭ್ರೂಣಲಿಂಗಪತ್ತೆಯಂತಹ ಹೇಯಕೃತ್ಯವನ್ನ ಎಸಗುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇನ್ನಾದ್ರು ಈ ರೀತಿಯ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆವಹಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್