ಬೆಂಗಳೂರಿನ ಈ ಪಬ್​ ಪೂರ್ಣ ಕನ್ನಡಮಯ, ಇಲ್ಲಿ ಕುಡಿತವಷ್ಟೇ ಅಲ್ಲ, ಕನ್ನಡ ಪಾಠವೂ ಇದೆ!

| Updated By: Ganapathi Sharma

Updated on: May 27, 2024 | 7:37 AM

ಬೆಂಗಳೂರಿನ ಬಿಇಎಲ್ ರಸ್ತೆಯಲ್ಲೊಂದು ವಿಶಿಷ್ಟವಾದ ಪಬ್ ಇದೆ. ಶೇಷವೇನೆಂದರೆ, ಇದು ಸಂಪೂರ್ಣ ಕನ್ನಡಮಯವಾಗಿದೆ. ಈ ಪಬ್​ನಲ್ಲಿರುವ ಮೆನು, ಪ್ಲೇ ಮಾಡುವ ಹಾಡು ಹೀಗೆ ಎಲ್ಲವೂ ಕನ್ನಡ. ಗ್ರಾಹಕರಲ್ಲಿ ಕನ್ನಡ ಪ್ರೇಮ ಮೂಡಿಸುವ ಸಿಲಿಕಾನ್ ಸಿಟಿಯ ವಿಭಿನ್ನ ಪಬ್ ಬಗ್ಗೆ ಇಲ್ಲಿದೆ ಪೂರ್ಣ ವಿವರ.

ಬೆಂಗಳೂರಿನ ಈ ಪಬ್​ ಪೂರ್ಣ ಕನ್ನಡಮಯ, ಇಲ್ಲಿ ಕುಡಿತವಷ್ಟೇ ಅಲ್ಲ, ಕನ್ನಡ ಪಾಠವೂ ಇದೆ!
ಬೆಂಗಳೂರಿನ ಈ ಪಬ್​ ಪೂರ್ಣ ಕನ್ನಡಮಯ, ಇಲ್ಲಿ ಕುಡಿತವಷ್ಟೇ ಅಲ್ಲ, ಕನ್ನಡ ಪಾಠವೂ ಇದೆ!
Follow us on

ಬೆಂಗಳೂರು, ಮೇ 27: ಬೆಂಗಳೂರಿನ ಯಾವ ಪಬ್​​ನಲ್ಲಿ (Bengaluru Pub) ನೋಡಿದರೂ ಇಂಗ್ಲಿಷ್ ಹಾಡುಗಳದ್ದೇ ಹವಾ ಇರುತ್ತದೆ. ಪಬ್​ಗಳು ಹೆಚ್ಚಾಗಿ ಇಂಗ್ಲಿಷ್​​ಮಯವಾಗಿರುತ್ತವೆ. ಬೆಂಗಳೂರಿನ ಒಂದಷ್ಟು ಪ್ರದೇಶಗಳನ್ನು ಹೊರತುಪಡಿಸಿದರೆ, ಹೈಫೈ ಹಾಗೂ ಐಟಿಬಿಟಿ ಪ್ರದೇಶಗಳಲ್ಲಂತೂ ಕನ್ನಡ (Kannada) ಬರುವವವರನ್ನು ಹುಡುಕಿ ಮಾತನಾಡುವ ಪರಿಸ್ಥಿತಿ ಇದೆ. ಹೋಟೆಲ್, ರೆಸ್ಟೋರೆಂಟ್, ಪಬ್​​ಗಳಲ್ಲಿಯು ಇದೇ ಪರಿಸ್ಥಿತಿ ಇದೆ. ಈ ಮಧ್ಯೆ ನಗರದ ಒಂದು ಪಬ್​​ನಲ್ಲಿ ಕನ್ನಡದ (Kannada Pub) ಸೊಬಗೇ ಮೇಳೈಸುತ್ತಿದೆ ಎಂದರೆ ನೀವು ನಂಬಲೇಬೇಕು.

ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿ ಒಂದು ಕನ್ನಡ ಪಬ್ ಇದ್ದು ಇದರಲ್ಲಿ ಕನ್ನಡ ವರ್ಣಮಾಲೆ, ಕನ್ನಡ ಹೋರಾಟಗಾರು, ಕನ್ನಡ ಸಿನಿಮಾ ಕಲಾವಿದರು, ಕನ್ನಡದ ಖ್ಯಾತ ಉದ್ಯಮಿಗಳ ಪೋಟೋಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕನ್ನಡ ವರ್ಣಮಾಲೆಗಳನ್ನು ಕೂಡ ಪಬ್​​​ನಲ್ಲಿ ಹಾಕಿದ್ದು, ನೋಡುಗರನ್ನು ಸೆಳೆಯುತ್ತಿವೆ.‌

ಕನ್ನಡ ಹಾಡುಗಳಿಗಷ್ಟೇ ಅವಕಾಶ!

ಈ ಪಬ್​​ನಲ್ಲಿ ಕನ್ನಡ ಹಾಡುಗಳಷ್ಟೇ ಪ್ಲೇ ಆಗಲಿದ್ದು, ಕನ್ನಡ ಬಾರದೇ ಇರುವವರಿಗೂ ಕನ್ನಡ ಕಲಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.‌ ಬೆಂಗಳೂರಿನಲ್ಲಿ ಇತ್ತೀಚಿಗೆ ಯಾವ ಪಬ್ ನೋಡಿದರೂ ಇಂಗ್ಲಿಷ್ ಹಾಡುಗಳನ್ನೇ ಹಾಕಿರುತ್ತಾರೆ.‌ ಜೊತೆಗೆ ಪಬ್​​​ಗಳಲ್ಲಿ ಕನ್ನಡ ಮಾತನಾಡುವರು ಸಿಗುವುದು ಕೂಡ ಇಲ್ಲ.‌ ಇವೆಲ್ಲವನ್ನು ಗಮನಿಸಿ ಕನ್ನಡ ಪಬ್ ಒಪನ್ ಮಾಡಲಾಯಿತು. ಇಲ್ಲಿ‌ ಊಟದ ಮೆನುವಿನಿಂದ ಹಿಡಿದು ಎಲ್ಲವೂ ಕನ್ನಡದಲ್ಲೇ ಇವೆ. ಸಪ್ಲೈಯರ್​​ಗಳನ್ನು ಕೂಡ ಕನ್ನಡ ಮಾತನಾಡುವವರನ್ನೇ ನೇಮಿಸಿದ್ದೇವೆ.‌ ಅಲ್ಲದೇ ಕನ್ನಡ ಹಾಡುಗಾರರ, ಹಾಡುಗಳ ಮೂಲಕ ಇಲ್ಲಿ ಪ್ರತಿದಿನ ಬಂದಂತಹ ಜನರನ್ನು ರಂಜಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪಬ್ ಮಾಲೀಕ ಸಂತೋಷ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೋಟೆಲ್​ಗಳಲ್ಲಿ ನೈಟ್ರೋಜನ್ ಆ್ಯಸಿಡ್ ಪಾನ್ ಬ್ಯಾನ್, ಸರ್ಕಾರಕ್ಕೆ‌ ಪತ್ರ

ಬೆಂಗಳೂರು ಅಡ್ಡ ಪಬ್​ನಲ್ಲಿ ಕನ್ನಡ ವರ್ಣಮಾಲೆ

‌ಬೆಂಗಳೂರಿನಲ್ಲಿ ಕನ್ನಡ ಕೇಳುವುದೇ ಕಷ್ಟವಾಗಿ ಹೋಗಿದೆ.‌ ಎಷ್ಟೇ ವರ್ಷಗಳು ಕಳೆದರೂ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಅನ್ನೋದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.‌ ಸದ್ಯ ಕನ್ನಡ ಪ್ರೇಮದ ಪಬ್ ಆರಂಭಿಸಿರುವುದರಿಂದ ತುಂಬಾ ಖುಷಿಯಾಗುತ್ತಿದೆ.‌ ಎಲ್ಲಿ ನೋಡಿದರೂ ಕನ್ನಡ ವರ್ಣಮಾಲೆಗಳೇ ಕಾಣಿಸುತ್ತಾ ಇವೆ.‌ ಅಲ್ಲದೇ ಮೆನು ಕೂಡ ಕನ್ನಡದಲ್ಲಿಯೇ ಕೊಡುತ್ತಾರೆ ಎಂದು ಗ್ರಾಹಕರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ