ಶಿವರಾತ್ರಿಯಂದು ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಕೊಲೆ; ಮೂವರು ಆರೋಪಿಗಳು ಅರೆಸ್ಟ್

| Updated By: ಆಯೇಷಾ ಬಾನು

Updated on: Mar 11, 2024 | 12:09 PM

ಶಿವರಾತ್ರಿಯ ರಾತ್ರಿ ದೇವಸ್ಥಾನದ ಮುಂದೆ ಹಾಕಲಾಗಿದ್ದ ಹಾಡಿಗೆ ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದಕ್ಕೆ ಯುವಕನ ಕೊಲೆಯಾಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶಿವರಾತ್ರಿಯಂದು ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಕೊಲೆ; ಮೂವರು ಆರೋಪಿಗಳು ಅರೆಸ್ಟ್
ಶಿವರಾತ್ರಿಯಂದು ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಕೊಲೆ; ಮೂವರ ಬಂಧನ
Follow us on

ಬೆಂಗಳೂರು, ಮಾರ್ಚ್​.11: ಶಿವರಾತ್ರಿ (Shivratri) ಹಿನ್ನೆಲೆ ದೇವಸ್ಥಾನದ ಮುಂದೆ ಹಾಕಿದ್ದ ಹಾಡಿಗೆ ಕುಣಿಯುತ್ತಿದ್ದ ವೇಳೆ ಮೈ ಟಚ್ ಆಗಿದಕ್ಕೆ ಯುವಕರ ಗುಂಪಿನ ನಡುವೆ ಜಗಳ ಶುರುವಾಗಿದ್ದು ಓರ್ವ ಯುವಕನ ಕೊಲೆಯಾಗಿದೆ (Murder). ಈ ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚೇತನ್, ರಂಗಾ, ಪವನ್ ಬಂಧಿತ ಆರೋಪಿಗಳು. ಯೋಗೇಶ್ (23) ಎರಡು ದಿನದ ಹಿಂದೆ ಕೊಲೆಯಾದ ಯುವಕ.

ಶಿವರಾತ್ರಿಯ ಹಬ್ಬದ ರಾತ್ರಿ ಕೊಲೆಯಾದ ಯುವಕ ಯೋಗೇಶ್, ಶ್ರೀನಗರ ನಿವಾಸಿ. ಈತ ಹನುಮಂತನಗರದ ಬೈಕ್ ಸರ್ವಿಸ್ ನಲ್ಲಿ ಕೆಲಸ ಮಾಡುತಿದ್ದ. ಹಬ್ಬದ ಹಿನ್ನಲೆ ಗಿರಿನಗರದ ದೇವಸ್ಥಾನಕ್ಕೆ ತೆರಳಿದ್ದ ಈತ ಮನೋರಂಜನೆಯ ಕಾರ್ಯಕ್ರಮದಲ್ಲಿ ಯುವಕರ ಜೊತೆ ಓಡಾಡಿಕೊಂಡಿದ್ದ. ಈ ನಡುವೆ ಬರುತಿದ್ದ ಸಾಂಗ್ ಗಳಿಗೆ ಸ್ಟೇಪ್ ಹಾಕಿ ಎಂಜಾಯ್ ಮಾಡಿದ್ದ. ಆದ್ರೆ ಈ ನಡುವೆ ಅಲ್ಲೇ ಬಂದಿದ್ದ ಮತ್ತೊಂದು ಗುಂಪಿನ ಯುವಕರಿಗೆ ಬೈ ಮೀಸ್ ಆಗಿ ಈತನ ಕಾಲು ಟೆಚ್ ಆಗಿತ್ತು. ಅಷ್ಟಕ್ಕೆ ದೇವಸ್ಥಾನದ ಬಳಿಯೇ ಜಗಳ ಶುರುವಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ಒಂದಿಷ್ಟು ಜನ ಜಗಳ ತಣ್ಣಗೆ ಮಾಡಿ ಕಳುಹಿಸಿದ್ದರು. ಆದ್ರೆ ಅದು ಅಷ್ಟಕ್ಕೆ ನಿಂತಿರಲಿಲ್ಲ.

ಇದನ್ನೂ ಓದಿ: ಉತ್ತರ ಪ್ರದೇಶ: ಕತ್ತು ಸೀಳಿದ ಸ್ಥಿತಿಯಲ್ಲಿ ಒಬಿಸಿ ನಾಯಕಿಯ ಶವ ಪತ್ತೆ

ಯಾವಾಗ ಜಗಳವಾಯ್ತೋ ಯುವಕರ ಗುಂಪು ಯೋಗೇಶನ ಟಾರ್ಗೆಟ್ ಮಾಡಿತ್ತು. ಹಬ್ಬದ ಸಂಭ್ರಮ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಮನೆ ಕಡೆ ಹೊರಟಿದ್ದ ಆತನ ಫಾಲೋ ಮಾಡಿ ಬೈಕ್ ನಲ್ಲಿ ತೆರಳುತಿದ್ದ ಯೋಗೇಶನ ಅಡ್ಡಗಟ್ಟಿ ನಾಲ್ವರ ಗುಂಪು ಆತನ ಮೇಲೆ ಹಲ್ಲೆ ಮಾಡಿತ್ತು. ತಪ್ಪಿಸಿಕೊಳ್ಳುವ ಬರದಲ್ಲಿ ಓಡಿದ ಯೋಗೇಶನಿಗೆ ಹೊಟ್ಟೆ ಚಾಕು ಹಾಕಿದ್ದಾರೆ. ಕೊನೆಗೂ ತಪ್ಪಿಸಿಕೊಂಡ ಯೋಗೇಶ್ ಮನೆಯೊಂದರ ಗೇಟ್ ಹಾರಿದ್ದ. ಆದ್ರೆ ಅಷ್ಟೊತ್ತಿಗಾಗಲೇ ಇರಿದ ಹೊಟ್ಟೆ ಭಾಗದಲ್ಲಿ ತೀವ್ರ ರಕ್ತ ಬಂದು ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ತನಿಖೆ ಮಾಡಿದಾಗ ಹತ್ಯೆ ಮಾಡಿರೋದು ತಿಳಿದುಬಂದಿದೆ. ಪ್ರಾಥಮಿಕವಾಗಿ ಹಳೆ ದ್ವೇಷ ಏನು ಕೂಡ ಕಂಡು ಬಂದಿಲ್ಲ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ