ನಕಲಿ ಚಿನ್ನದ ನಾಣ್ಯ ಮಾರಾಟ: 1 ಕೆಜಿ ನಾಣ್ಯವನ್ನು 11 ಲಕ್ಷ ರೂ.ಗೆ ನೀಡಿ ರೈತರಿಬ್ಬರಿಗೆ ವಂಚನೆ

| Updated By: Pavitra Bhat Jigalemane

Updated on: Dec 17, 2021 | 12:51 PM

ಮೂವರು ವಂಚಕರು 1 ಕೆಜಿ ಚಿನ್ನದ ನಾಣ್ಯಗಳನ್ನು 11 ಲಕ್ಷರೂ.ಗೆ ಮಾರಾಟ ಮಾಡಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ರೈತರನ್ನು ವಂಚಿಸಿದ್ದಾರೆ.

ನಕಲಿ ಚಿನ್ನದ ನಾಣ್ಯ ಮಾರಾಟ: 1 ಕೆಜಿ ನಾಣ್ಯವನ್ನು 11 ಲಕ್ಷ ರೂ.ಗೆ ನೀಡಿ ರೈತರಿಬ್ಬರಿಗೆ ವಂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟಮಾಡಿ ಇಬ್ಬರು ರೈತರಿಗೆ 11 ಲಕ್ಷ ರೂ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂವರು ವಂಚಕರು 1 ಕೆಜಿ ಚಿನ್ನದ ನಾಣ್ಯಗಳನ್ನು 11 ಲಕ್ಷರೂ.ಗೆ ಮಾರಾಟ ಮಾಡಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ರೈತರನ್ನು ವಂಚಿಸಿದ್ದಾರೆ. ಗಾಳಪ್ಪ (50), ರಾಜಣ್ಣ ವಂಚನೆಗೆ ಒಳಗಾದ ರೈತರು. ಈ ಕುರಿತು ಗಾಳಪ್ಪ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ. 

ಮೆಜೆಸ್ಟಿಕ್​ನಲ್ಲಿ ನಿಂತಿದ್ದಾಗ ದಿನಗೂಲಿ ಕಾರ್ಮಿಕರ ಸೋಗಿನಲ್ಲಿ ಬಂದ ಮೂವರು ನಾವು ಕೆಲಸ ಮಾಡುತ್ತಿದ್ದ ಜಾಗದಲ್ಲಿ 4 ಕೆಜಿ ಚಿನ್ನದ ನಾಣ್ಯಗಳು ದೊರೆತಿವೆ ಅದರಲ್ಲಿ ಒಂದು ಕೆಜಿ ನಾಣ್ಯಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ನಿಮಗೆ ಕೊಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಾಣ್ಯಗಳನ್ನು ಹತ್ತಿರದ ಅಕ್ಕಸಾಲಿಗನ ಅಂಗಡಿಯಲ್ಲಿ ತೋರಿಸಿದಾಗ ಅದು ಅಸಲಿ ಚಿನ್ನದ ನಾಣ್ಯಗಳು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಳಪ್ಪ ಎನ್ನುವವರು ಉಳಿತಾಯ ಮಾಡಿದ್ದ 7 ಲಕ್ಷ ರೂಗಳನ್ನು ಹಾಗೂ ಸ್ನೇಹಿತ ರಾಜಣ್ಣನ ಬಳಿ 4 ಲಕ್ಷ ರೂಗಳನ್ನು ತೆಗೆದುಕೊಂಡು ವಂಚಕರಿಗೆ ನೀಡಿದ್ದಾರೆ.

ಬಳಿಕ ವಂಚಕರು ಬಟ್ಟೆಯಲ್ಲಿ ಸುತ್ತಿ ಚಿನ್ನದ ನಾಣ್ಯಗಳನ್ನು ನೀಡಿದ್ದಾರೆ. ನಾಣ್ಯಗಳಿರುವ ಬಟ್ಟೆಯ ಗಂಟನ್ನು ಪಡೆದ ಬಳಿಕ ರೈತರಿಬ್ಬರು ಹತ್ತಿರದ ತುಳಸಿ ಪಾರ್ಕ್​ನಲ್ಲಿ ಹೋಗಿ ನೋಡಿದಾಗ ಅದರಲ್ಲಿ ನಕಲಿ ನಾಣ್ಯಗಳಿರುವುದು ತಿಳಿದುಬಂದಿದೆ. ಈ ಕುರಿತು ಗಾಳಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:

ನೂರು ರೂ ವಿಚಾರಕ್ಕೆ ಕೊಲೆ: ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸಿದ ಯಶವಂತಪುರ ಸಂಚಾರ ಪೊಲೀಸರು

Coronavirus: ಲಂಡನ್, ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 6 ಜನರಿಗೆ ಕೊರೊನಾ ಸೋಂಕು

Published On - 12:46 pm, Fri, 17 December 21