ನೂರು ರೂ ವಿಚಾರಕ್ಕೆ ಕೊಲೆ: ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸಿದ ಯಶವಂತಪುರ ಸಂಚಾರ ಪೊಲೀಸರು

Yeshwanthpur traffic police: ಮೂರು ತಿಂಗಳ ಬಳಿಕ ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ಟ್ವಿಸ್ಟ್ ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಯಶವಂತಪುರ ಸಂಚಾರ ಪೊಲೀಸರು CDR , CCTV ಪ್ರಯೋಜನದಿಂದ ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೂರು ರೂ ವಿಚಾರಕ್ಕೆ ಕೊಲೆ: ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸಿದ ಯಶವಂತಪುರ ಸಂಚಾರ ಪೊಲೀಸರು
ಸಾಂಕೇತಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 17, 2021 | 12:31 PM

ಬೆಂಗಳೂರು: ಬೆಂಗಳೂರಿನಲ್ಲಿ 100 ರೂಪಾಯಿ ವಿಚಾರಕ್ಕೆ ಕೊಲೆಯಲ್ಲಿ ಅಂತ್ಯವಾಗಿದ್ದು, ಮೂರು ತಿಂಗಳ ಬಳಿಕ ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ಟ್ವಿಸ್ಟ್ ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಯಶವಂತಪುರ ಸಂಚಾರ ಪೊಲೀಸರು CDR , CCTV ಪ್ರಯೋಜನದಿಂದ ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 17 ರಂದು ಪತ್ರೀಕ್ ಮತ್ತು ಸಮಿಷ್ ಎಂಬಿಬ್ಬರ ನಡುವೆ ಗಲಾಟೆ ನಡೆದಿತ್ತು. ಅದರಲ್ಲಿ 31 ವರ್ಷದ ಪತ್ರೀಕ್ ಯಾದವ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಮತ್ತಿಕೆರೆ ಬಳಿ ತೂಕ ಹಾಕುವ ತಕ್ಕಡಿಯ ಬಟ್ ನಿಂದ ಪತ್ರೀಕ್ ಯಾದವ್ ತಲೆಗೆ ಸಮಿಷ್ ಹಲ್ಲೆ ಮಾಡಿದ್ದ. ಹಲ್ಲೆ ಬಳಿಕ ವಾಪಸ್ಸು ಮನೆಗೆ ಬಂದ ಪತ್ರೀಕ್ ಗೆ ತ್ರೀವವಾಗಿ ತಲೆ ನೋವು ಕಾಣಿಸಿಕೊಂಡಾಗ ನಿಮಾನ್ಸ್ ಆಸ್ಪತ್ರೆ ಬಳಿಕ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮನೆಯವರು ಕೇಳಿದ್ದಕ್ಕೆ ಮತ್ತಿಕೆರೆ ಬಳಿ ಸೆಲ್ಫ್​​ ಆಕ್ಸಿಡೆಂಟ್ ಆಗಿತ್ತು ಎಂದಿದ್ದ ಪತ್ರೀಕ್ ಯಾದವ್. ಅದರೊಂದಿಗೆ, ಸ್ನೇಹಿತರ ಜತೆ ಗಲಾಟೆ ಆಗಿರುವುದನ್ನು ಪತ್ರೀಕ್ ಯಾದವ್ ತನ್ನ ಮನೆಯವರ ಬಳಿ ಮುಚ್ಚಿಟ್ಟಿದ್ದ.

ಆದರೆ ಅಕ್ಟೋಬರ್ 20 ರಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರತೀಕ್ ಯಾದವ್ ಕೊನೆಯುಸಿರೆಳೆದಿದ್ದ. ಆಸ್ಪತ್ರೆಯ ವತಿಯಿಂದ ಯಶವಂತಪುರ ಸಂಚಾರ ಪೊಲೀಸರಿಗೆ ‌ಅಪಘಾತವಾದ ಬಗ್ಗೆ ಮಾಹಿತಿ ರವಾನೆಯಾಗಿತ್ತು. ಯಶವಂತಪುರ ಸಂಚಾರ ಪೊಲೀಸರು ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡರು. ಬಳಿಕ ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಿಸಿಟಿವಿ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿಕೊಂಡರು. ಅದರೆ ಮೃತಪಟ್ಟ ಪತ್ರೀಕ್ ಯಾದವ್ ಹೇಳಿದ್ದಂತೆ ಆ ಸ್ಥಳದಲ್ಲಿ ಅಕ್ಟೋಬರ್ 17 ರಂದು ಯಾವುದೇ ಅಪಘಾತ ನಡೆದಿಲ್ಲ. ಇತ್ತ‌ ಮರಣೋತ್ತರ ಪರೀಕ್ಷೆ ನಡೆಸುವಾಗ ಸಹ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ತ್ರೀವವಾಗಿ, ಬಲವಾದ ವಸ್ತುವಿನಿಂದ ಹಲ್ಲೆಯಾಗಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ‌ ಪಶ್ಚಿಮ ಸಂಚಾರಿ ವಿಭಾಗ ಡಿಸಿಪಿ ಕುಲದೀಪ್ ಜೈನ್ ಅವರು ತನಿಖೆಗೆ ಆದೇಶ ಮಾಡಿದ್ದರು. ಎರಡು ದಿನಗಳ ಹಿಂದೆ ಪೊಲೀಸರ ಕೈ ಸೇರಿದ ಪೋಸ್ಟ್ ಮಟರ್ಮ್ ವರದಿಯಲ್ಲಿ ಕೊಲೆ ಎಂಬುದು ದೃಢಪಟ್ಟಿತ್ತು. ಅದರಂತೆ ಯಶವಂತಪುರ ಪೊಲೀಸರು ಕೊಲೆ ಪ್ರಕರಣವನ್ನು ಕೊಡಿಗೆಹಳ್ಳಿ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ. ಇದೀಗ, ಕೋಡಿಗೇಹಳ್ಳಿ ಪೊಲೀಸರಿಂದ ಆರೋಪಿ ಸಮೀಷ್ ಬಂಧನವಾಗಿದೆ. ಅದು ಮಟನ್ ಅಂಗಡಿಯಲ್ಲಿ ನಡೆದಿದ್ದ ಗಲಾಟೆಯಾಗಿದ್ದು, ನೂರು ರೂಪಾಯಿ ವಿಚಾರಕ್ಕೆ ಹಲ್ಲೆ ನಡೆಸಿದ್ದ ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

Published On - 12:09 pm, Fri, 17 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್