ಬೆಂಗಳೂರು: ಆಗಸ್ಟ್ 27 ರಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ; ಇಲ್ಲಿದೆ ಡಿಟೇಲ್ಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 7:09 PM

ಕೆ.ಆರ್.ಪುರಂನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮತ್ತು ಕೆಂಗೇರಿಯಿಂದ ಚೆಲ್ಲಘಟ್ಟ ಮೆಟ್ರೋ ಮಾರ್ಗದ ಸೇಫ್ಟಿ ಟೆಸ್ಟ್ ಮಾಡಲಾಗುತ್ತಿದ್ದು ಈ ಹಿನ್ನಲೆ ಈ ಕೆಳಕಂಡ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.

ಬೆಂಗಳೂರು: ಆಗಸ್ಟ್ 27 ರಂದು ನೇರಳೆ ಮಾರ್ಗದಲ್ಲಿ ಮೆಟ್ರೋ  ಸಂಚಾರ ವ್ಯತ್ಯಯ; ಇಲ್ಲಿದೆ ಡಿಟೇಲ್ಸ್
ನಮ್ಮ ಮೆಟ್ರೋ
Follow us on

ಬೆಂಗಳೂರು, ಆ.25: ಭಾನುವಾರ(ಆ.27) ನಮ್ಮ ಮೆಟ್ರೋ (Metro) ಸಂಚಾರದಲ್ಲಿ ಬದಲಾವಣೆ ಆಗಲಿದೆ. ಹೌದು, ಸೇಫ್ಟಿ ಟೆಸ್ಟ್​ ಹಿನ್ನೆಲೆ ನೇರಳೆ ಮಾರ್ಗದಲ್ಲಿ (Purple Line)ಸಂಚಾರ ವ್ಯತ್ಯಯವಾಗಲಿದೆ. ಕೆ.ಆರ್.ಪುರಂನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮತ್ತು ಕೆಂಗೇರಿಯಿಂದ ಚೆಲ್ಲಘಟ್ಟ ಮೆಟ್ರೋ ಮಾರ್ಗದಲ್ಲಿ ಸೇಫ್ಟಿ ಟೆಸ್ಟ್ ಮಾಡಲಾಗುತ್ತಿದ್ದು, ಈ ಹಿನ್ನಲೆ ಈ ಕೆಳಕಂಡ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.

1) ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣಗಳ ನಡುವೆ ಮೆಟ್ರೋ ಸ್ಥಗಿತವಾಗಲಿದೆ.

2) ಬೈಯ್ಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ನಿಲ್ದಾಣಗಳ ನಡುವೆ ಸ್ಥಗಿತ

3)ವೈಟ್​ಫೀಲ್ಡ್-ಕೆ.ಆರ್.ಪುರಂ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತ

ಈ ಮಾರ್ಗಗಳಲ್ಲಿ ಭಾನುವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಮೆಟ್ರೋ ಸಂಚಾರ ಸ್ಥಗಿತವಾಗಲಿದ್ದು, ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳಿರದೆ, ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಈ ವೇಳೆ ಕೃಷ್ಣ ರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಂದ ಚೆಲ್ಲಘಟ್ಟ ಮೆಟ್ರೋ ಮಾರ್ಗದಲ್ಲಿ ​ ಭಾನುವಾರ ಬಿಎಮ್​ಆರ್​ಸಿಎಲ್ ವಿವರವಾದ ಸುರಕ್ಷತಾ ಪರೀಕ್ಷೆ ಕೈಗೊಳ್ಳಲಿದೆ. ಇನ್ನು ಮಧ್ಯಾಹ್ನ 1ರ ನಂತರ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಸಂಚಾರವಾಗಲಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Fri, 25 August 23