ಬೆಂಗಳೂರಿನ ಪೊಲೀಸ್ ತಿಮ್ಮಯ್ಯ ಸರ್ಕಲ್‌ ಬಳಿ ಧರೆಗುರುಳಿದ ಮರ; ಮರದಡಿ ಇದ್ದ ತಂದೆ-ಮಗ ಅದೃಷ್ಟವಶಾತ್ ಪಾರು

| Updated By: guruganesh bhat

Updated on: Aug 05, 2021 | 11:11 PM

Bengaluru Traffic: ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಧರೆಗುರುಳಿದ ಮರದ ತೆರವು ಕಾರ್ಯವನ್ನು ಆರಂಭಿಸಿದ್ದಾರೆ. ಘಟನೆಯಿಂದ ವಿಧಾನಸೌಧ- ರಾಜಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಬೆಂಗಳೂರಿನ ಪೊಲೀಸ್ ತಿಮ್ಮಯ್ಯ ಸರ್ಕಲ್‌ ಬಳಿ ಧರೆಗುರುಳಿದ ಮರ; ಮರದಡಿ ಇದ್ದ ತಂದೆ-ಮಗ ಅದೃಷ್ಟವಶಾತ್ ಪಾರು
ಮರದ ಅಡಿಗಾದ ಬೈಕ್​ನ್ನು ಹೊತೆಗೆಯುತ್ತಿರುವುದು
Follow us on

ಬೆಂಗಳೂರು: ನಗರದ ಪೊಲೀಸ್ ತಿಮ್ಮಯ್ಯ ಸರ್ಕಲ್‌ ಬಳಿಯ ಬೃಹತ್ ಮರವೊಂದು ಧರೆಗುರುಳಿದ್ದು, ಮರದ ಕೆಳಗೆ ಇದ್ದ ತಂದೆ-ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದ ಕೆಳಗೆ ನಿಲ್ಲಿಸಿದ್ದ ಎರಡು ದ್ವಿಚಕ್ರವಾಹನಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪೊಲೀಸ್ ಜೀಪ್ನಲ್ಲಿಯೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಧರೆಗುರುಳಿದ ಮರದ ತೆರವು ಕಾರ್ಯವನ್ನು ಆರಂಭಿಸಿದ್ದಾರೆ. ಘಟನೆಯಿಂದ ವಿಧಾನಸೌಧ- ರಾಜಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಮರ ಬಿದ್ದಿರುವ ಚಿತ್ರಣ

ಹಾಸನ: ಒಂದೇ ಕಾಲೇಜಿನ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊವಿಡ್ ದೃಢ
ಹಾಸನಜಿಲ್ಲೆಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೇರಳದಿಂದ ಬಂದಿದ್ದ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊವಿಡ್ ಟೆಸ್ಟ್ ಮಾಡಿದಾಗ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಕ್ವಾರಂಟೈನ್ ಮಾಡಲಾಗಿದೆ. ವಿದ್ಯಾರ್ಥಿನಿಯರನ್ನು ಕ್ವಾರಂಟೈನ್ ಮಾಡಿರುವ ಲಾಡ್ಜ್ ಸೀಲ್ಡೌನ್ ಮಾಡಲಾಗಿದೆ. ಜಿಲ್ಲೆಗೆ ಸೋಂಕಿನ 3ನೇ ಅಲೆ ಕಾಲಿಟ್ಟಿದೆಯೇ ಎಂಬ ಭೀತಿ ಹಾಸನ ಜಿಲ್ಲೆಯ ಸಾರ್ವಜನಿಕರಿಗೆ ಹುಟ್ಟಿದೆ.

ಕರ್ನಾಟಕದಲ್ಲಿ ಗುರುವಾರ ಒಂದೇ ದಿನ 1785 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. 25 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 1651 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಜಿಲ್ಲೆಗಳಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ ಒಟ್ಟು 29,13,512 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 28,52,368 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 24,414 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಒಟ್ಟು 36,705 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದಿನ ಸೋಂಕು ಖಚಿತ ಪ್ರಕರಣದ ಸರಾಸರಿ ಶೇ 1.10 ಇದೆ.

ಬೆಂಗಳೂರು ನಗರದಲ್ಲಿ ಗುರುವಾರ 414 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,29,340 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 15,901 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ 8560 ಸಕ್ರಿಯ ಪ್ರಕರಣಗಳಿವೆ. ಇಂದು 554 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದ ಒಟ್ಟು 1785 ಮಂದಿಯಲ್ಲಿ ಗುರುವಾರ ಕೊರೊನಾ ಸೋಂಕು ದೃಢಪಟ್ಟಿತ್ತು. ಬಾಗಲಕೋಟೆ, ಬಳ್ಳಾರಿ 6, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 40, ಬೆಂಗಳೂರು ನಗರ 414, ಬೀದರ್ 1, ಚಾಮರಾಜನಗರ 44, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 97, ಚಿತ್ರದುರ್ಗ 26, ದಕ್ಷಿಣ ಕನ್ನಡ 337, ದಾವಣಗೆರೆ, ಧಾರವಾಡ 10, ಗದಗ 5, ಹಾಸನ 125, ಹಾವೇರಿ 3, ಕಲಬುರಗಿ 9, ಕೊಡಗು 100, ಕೋಲಾರ 57, ಕೊಪ್ಪಳ 7, ಮಂಡ್ಯ 46, ಮೈಸೂರು 105, ರಾಯಚೂರು 7, ರಾಮನಗರ 8, ಶಿವಮೊಗ್ಗ 35, ತುಮಕೂರು 49, ಉಡುಪಿ 134, ಉತ್ತರ ಕನ್ನಡ 60, ವಿಜಯಪುರ 5.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಳಗಾವಿ 3, ಬೆಂಗಳೂರು ನಗರ 5, ಕೋಲಾರ, ದಕ್ಷಿಣ ಕನ್ನಡ 3, ಮಂಡ್ಯ, ರಾಯಚೂರು, ಉಡುಪಿ 2, ಗದಗ, ಹಾವೇರಿ, ಕೊಡಗು, ಕೊಪ್ಪಳ, ಉತ್ತರ ಕನ್ನಡ 1.

ಇದನ್ನೂ ಓದಿ: 

ಎಚ್ಚೆತ್ತ ಬೆಂಗಳೂರು ಪೊಲೀಸರು: ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ 678 ವಿದೇಶಿಗರು; 27 ಮಂದಿಯ ಗಡಿಪಾರು ಪ್ರಕ್ರಿಯೆ ಶುರು 

ರೌಡಿಶೀಟರ್ಸ್​ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು; 18 ಜನ ವಶಕ್ಕೆ

(Tree fallen near Bengaluru Police Thimmaiah Circle father and son under the tree was fortunate escape)

Published On - 5:06 pm, Thu, 5 August 21