
ಬೆಂಗಳೂರು, ಅಕ್ಟೋಬರ್ 28: ಭಾರತದ ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರು ಕಳೆದ ಕೆಲ ದಶಕಗಳಿಂದ ಅಗಾಧವಾಗಿ ಬೆಳವಣಿಗೆ ಕಂಡಿದೆ. ಜಾಗತಿಕ ಮಟ್ಟದ ಬಹಳಷ್ಟು ಕೈಗಾರಿಕೆಗಳು, ಸ್ಟಾರ್ಟಪ್ಗಳು, ಸಾಫ್ಟ್ವೇರ್ ಕಂಪನಿಗಳು, ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿವೆ. ಅಂತೆಯೇ, ನಗರದ ರಿಯಲ್ ಎಸ್ಟೇಟ್ ಕೂಡ ಅತ್ಯಾಕರ್ಷಕ ಎನಿಸಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಎಲ್ಲಾ ವರ್ಗದ ಜನರ ಅಗತ್ಯಗಳನ್ನು ಪೂರೈಸಬಲ್ಲಷ್ಟು ವಿಸ್ತೃತ ಮತ್ತು ವಿಶಾಲವಾಗಿದೆ. ಇದನ್ನು ಕನ್ನಡಿ ಹಿಡಿದಂತೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ (TV9 Sweet Home Real Estate Expo) ಪ್ರತೀ ವರ್ಷ ನಡೆಯುತ್ತಾ ಬಂದಿದೆ. ಈ ವರ್ಷದ ಎಕ್ಸ್ಪೋ ಮುಂದಿನ ತಿಂಗಳು (ನವೆಂಬರ್ 2025) ನಡೆಯಲಿದೆ.
ಅಶ್ವಸೂರ್ಯ ಪ್ರಸ್ತುತಪಡಿಸುವ ಈ ಬಾರಿಯ ಟಿವಿ9 ಕನ್ನಡ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಬೆಂಗಳೂರಿನ ಎಲ್ಲೆಡೆ ಇರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳ ವಿವರ ಒಂದೇ ವೇದಿಕೆಯಲ್ಲಿ ಸಿಗುತ್ತದೆ. ಎಲ್ಲಾ ವರ್ಗದ ಜನರ ಅಗತ್ಯಗಳಿಗೆ ತಕ್ಕಂತಹ ನೆಲ ಮತ್ತು ಮನೆಗಳನ್ನು ಅನ್ವೇಷಿಸಬಹುದು. ಐಷಾರಾಮಿ ವಿಲ್ಲಾಗಳು, ಉನ್ನತ ದರ್ಜೆಯ ಅಪಾರ್ಟ್ಮೆಂಟ್ಗಳಿಂದ ಹಿಡಿದು, ಫಾರ್ಮ್ಲ್ಯಾಂಡ್ಗಳು, ನಿವೇಶನಗಳು, ಅಗ್ಗದ ಫ್ಲ್ಯಾಟ್ಗಳನ್ನು ಬುಕ್ ಮಾಡುವ ಅವಕಾಶವನ್ನು ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಒದಗಿಸುತ್ತಿದೆ.
ಈ ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಪ್ರಾಜೆಕ್ಟ್ಗಳನ್ನು ಒಂದೇ ವೇದಿಕೆಯಲ್ಲಿ ಗಮನಿಸಬಹುದು. ವಿಶ್ವಾಸಾರ್ಹ ಪ್ರಾಪರ್ಟಿ ಕನ್ಸಲ್ಟೆಂಟ್ಗಳು, ಲೀಗಲ್ ಅಡ್ವೈಸರ್ಗಳು, ಔದ್ಯಮಿಕ ಪರಿಣಿತರಿಂದ ಸಲಹೆಗಳನ್ನು ಪಡೆಯಬಹುದು.
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್ಪೋದಲ್ಲಿ ವಿವಿಧ ಪ್ರಾಜೆಕ್ಟ್ಗಳಲ್ಲಿ ವಿಶೇಷ ಡಿಸ್ಕೌಂಟ್ಗಳು, ಸುಲಭ ಪಾವತಿ ಆಯ್ಕೆಗಳು, ಎಕ್ಸ್ಕ್ಲೂಸಿವ್ ಡೀಲ್ಗಳು ಲಭ್ಯ ಇರುತ್ತವೆ.
ಟಿವಿ9 ಕನ್ನಡ ಸ್ವೀಟ್ ಹೋಮ್ ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಎಕ್ಸ್ಪೋ ಆಯೋಜಿಸುತ್ತಾ ಬಂದಿದೆ. ದಕ್ಷಿಣ ಭಾರತದ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಎಕ್ಸ್ಪೋಗಳಲ್ಲಿ ಒಂದೆನಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್ಗಳು ಮತ್ತು ಖರೀದಿದಾರರ ಮಧ್ಯೆ ಇದು ಒಂದು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.