ಟ್ವಿಟರ್​ನಲ್ಲಿ ಭಾಷೆ ಜಗಳ; ಆಟೋ ಚಾಲಕನ ಬಗ್ಗೆ ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಂಡ ಅನ್ಯಭಾಷಿಗ

| Updated By: ಆಯೇಷಾ ಬಾನು

Updated on: Jul 27, 2023 | 3:29 PM

ಬಿಹಾರಿ ವ್ಯಕ್ತಿ ಆಟೋ ಚಾಲಕನ ಬಗ್ಗೆ ಕಲ್ಪಿತ ಕತೆ ಕಟ್ಟಿ ಈಗ ಸರ್ಯಾಗಿ ತಗ್ಲಾಕೊಂಡಿದ್ದಾನೆ. ಸದ್ಯ ಈಗ ಟ್ವಿಟರ್​ನಲ್ಲಿ ನೆಟ್ಟಿಗರು ಈ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಭಾಷೆ ಜಗಳ; ಆಟೋ ಚಾಲಕನ ಬಗ್ಗೆ ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಂಡ ಅನ್ಯಭಾಷಿಗ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ 27: ನೀವು ಇಲ್ಲಿ ಭಿಕ್ಷೆ ಬೇಡಲು ಬಂದಿದ್ದೀರಿ ಎಂದು ಅನ್ಯಭಾಷಿಕರ ಕುರಿತು ಆಟೋ ಹಿಂದೆ ಬರೆದ ಸಾಲುಗಳು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ವಿನಿಮಯವಾಗಿದ್ದವು. ಇದರ ನಡುವೆ ಇಲ್ಲೊಬ್ಬ ಬಿಹಾರಿ ವ್ಯಕ್ತಿ ಆಟೋ ಚಾಲಕನ(Auto Driver) ಬಗ್ಗೆ ಕಲ್ಪಿತ ಕತೆ ಕಟ್ಟಿ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಈಗ ತಗ್ಲಾಕೊಂಡಿರುವ ಅನ್ಯಭಾಷಿಗ ಪ್ರತೀಕ್​ಗೆ  ಫುಲ್​ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅನ್ಯಭಾಷಿಗ ಪ್ರತೀಕ್ ಎಂಬುವವರು ತನ್ನ ಟ್ವಿಟರ್​ನಲ್ಲಿ ಕನ್ನಡ ಗೊತ್ತಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕನ ವರ್ತನೆ ಬಗ್ಗೆ ಸುಳ್ಳು ಆರೋಪ ಮಾಡಿ ಟ್ವೀಟ್ ಮಾಡಿದ್ದರು. ಆದ್ರೆ ಪ್ರತೀಕ್ ಟ್ವೀಟ್ ಮಾಡವಾಗ ಫೇಸ್​ಬುಕ್​ನಲ್ಲಿನ ಫೋಟೋ ಕದ್ದು ಅದರಲ್ಲಿರುವ ಆಟೋ ಚಾಲಕನ ಬಗ್ಗೆ ಆರೋಪ ಮಾಡಿದ್ದಾರೆ. ಈ ಟ್ವೀಟ್​ಗೆ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ. ಬಿಟ್ಟಿ ಬಿಲ್ಡಪ್ ತೆಗೆದುಕೊಳ್ಳಲು ಹೋಗಿ ಪ್ರತೀಕ್ ಎಂಬುವವರು ನೆಟ್ಟಿಗರ ಬಳಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ನೀವು ಇಲ್ಲಿ ಭಿಕ್ಷೆ ಬೇಡಲು ಬಂದಿದ್ದೀರಿ: ಅನ್ಯಭಾಷಿಕರ ಕುರಿತು ಆಟೋ ಹಿಂದೆ ಬರೆದ ಸಾಲು ವೈರಲ್​

ಪ್ರತೀಕ್ ಆರ್ಯನ್ ಮಾಡಿದ ಟ್ವೀಟ್ ಏನು?

ಬೆಂಗಳೂರು ನಿಲ್ದಾಣದಲ್ಲಿ, ನನ್ನ ಸ್ಥಳಕ್ಕೆ ನನ್ನನ್ನು ಬಿಡಲು ನಾನು ಈ ಆಟೋ ಡ್ರೈವರ್‌ಗೆ ಕೇಳಿದೆ” ಆದರೆ ಅವರು ಹಿಂದಿ ಅರ್ಥವಾಗುತ್ತಿಲ್ಲ ಎಂದು ಉತ್ತರಿಸಿದರು ಮತ್ತು ಕನ್ನಡದಲ್ಲಿ ಮಾತನಾಡಲು ನನ್ನನ್ನು ಕೇಳಿದರು. ಹಾಗಾಗಿ, ನಾನು ಗೂಗಲ್ ತೆರೆದು, ಕನ್ನಡದಲ್ಲಿ “TMKC” ಎಂದು ಹುಡುಕಿದೆ, ಅವನಿಗೆ ಉತ್ತರಿಸಿದೆ ಮತ್ತು ಇನ್ನೊಂದು ಆಟೋವನ್ನು ಹಿಡಿದೆ ಅವನು ನನ್ನನ್ನು ನನ್ನ ಸ್ಥಳಕ್ಕೆ ಡ್ರಾಪ್ ಮಾಡಿದ ಎಂದು ಬರೆದು ಆಟೋ ಚಾಲಕನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಟ್ವೀಟ್​ಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತೀಕ್ ಅವರು ಆಟೋ ಪಕ್ಕದಲ್ಲಿ ನಿಂತಿರುವ ಆಟೋ ಚಾಲಕನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಟೋ ಚಾಲಕ ನಿಮ್ಮ ಫೋಟೋಗೆ ಫೋಸ್ ಕೊಟ್ಟು ಹೋದನಾ ಎಂದು ನೆಟ್ಟಿಗರು ತಿರುಗೇಟು ಕೊಟ್ಟಿದ್ದಾರೆ.

ಈ ಟ್ವೀಟ್ ಒಂದು ಸುಳ್ಳು ಕತೆ. ಫೇಸ್ ಬುಕ್ ಪೇಜ್​ನಲ್ಲಿರುವ ಫೋಟೋ ಕದ್ದು ಟ್ವೀಟ್ ಮಾಡಿದ್ದಾರೆ ಅಂತ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ತರ ಕೆಟ್ಟ ಭಾಷೆಯಲ್ಲಿ ಬೈದ್ರೆ ಯಾವ ಆಟೋ ಡ್ರೈವರ್ ಸುಮ್ನೆ ಇರಲ್ಲ. ಎಲ್ಲದಕ್ಕಿಂತ ಜಾಸ್ತಿ ಬೈಸಿಕೊಂಡು ಈ ತರಹ ಯಾರು ಫೋಟೋಗೆ ಪೋಸ್ ಕೊಡಲ್ಲ. ಇದೊಂದು ಸುಳ್ಳು ಕತೆ, ಸುಳ್ಳು ಸುಳ್ಳು ಹೇಳಿ ಮಂಗ ಮಾಡಬೇಡ ಅಂತ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ