Namma Metro: ಬೈಯಪ್ಪನಹಳ್ಳಿ – ಕೆಆರ್‌ ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭಿಸಿದ ಮೆಟ್ರೋ; ಆಗಸ್ಟ್ ಅಂತ್ಯದ ವೇಳೆ ಸಿದ್ಧ

1 ನೇ ರೈಲು ಸಂಚಾರ ಪರೀಕ್ಷೆಯು ಸಂಜೆ 6.04 ಕ್ಕೆ ಕೆಆರ್​ ಪುರದಿಂದ ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ನಡೆಯಿತು. ರೈಲು ಮರಳಿ ಕೆಆರ್ ಪುರ ನಿಲ್ದಾಣಕ್ಕೆ ಹಿಂತಿರುಗಿತು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

Namma Metro: ಬೈಯಪ್ಪನಹಳ್ಳಿ - ಕೆಆರ್‌ ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭಿಸಿದ ಮೆಟ್ರೋ; ಆಗಸ್ಟ್ ಅಂತ್ಯದ ವೇಳೆ ಸಿದ್ಧ
ಮೆಟ್ರೋImage Credit source: PTI
Follow us
| Updated By: ಗಣಪತಿ ಶರ್ಮ

Updated on: Jul 27, 2023 | 2:57 PM

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಬೈಯಪ್ಪನಹಳ್ಳಿ – ಕೆಆರ್‌ ಪುರ ಮೆಟ್ರೊ ನಿಲ್ದಾಣಗಳ ನಡುವೆ ಬುಧವಾರ ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ಪ್ರತಿನಿತ್ಯ ವೈಟ್‌ಫೀಲ್ಡ್‌ಗೆ ತೆರಳುವ ಮತ್ತು ಅಲ್ಲಿಂದ ಬರುವ ಜನರಿಗೆ ಭರವಸೆ ಮೂಡಿಸಿದೆ. ಪರ್ಪಲ್ ಲೈನ್‌ನ ಪ್ರಮುಖ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಬುಧವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

1 ನೇ ರೈಲು ಸಂಚಾರ ಪರೀಕ್ಷೆಯು ಸಂಜೆ 6.04 ಕ್ಕೆ ಕೆಆರ್​ ಪುರದಿಂದ ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ನಡೆಯಿತು. ರೈಲು ಮರಳಿ ಕೆಆರ್ ಪುರ ನಿಲ್ದಾಣಕ್ಕೆ ಹಿಂತಿರುಗಿತು ಎಂದು ಬಿಎಂಆರ್​​ಸಿಎಲ್ ಟ್ವೀಟ್ ಮಾಡಿದೆ.

2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು, ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು 13.71 ಕಿಮೀ ವೈಟ್‌ಫೀಲ್ಡ್ (ಕಾಡುಗೋಡಿ) – ಕೃಷ್ಣರಾಜಪುರ (ಕೆಆರ್ ಪುರ) ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಬೈಯಪ್ಪನಹಳ್ಳಿ-ಕೆಆರ್ ಪುರ ನಡುವಣ ಸಂಪರ್ಕ ಇಲ್ಲದ ಕಾರಣ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿತ್ತು.

ಇದನ್ನೂ ಓದಿ: BMRCL: ನಮ್ಮ ಮೆಟ್ರೋದಲ್ಲಿ ಹೃದಯಘಾತದಿಂದ ವ್ಯಕ್ತಿ ಸಾವು; ಬಿಎಂಆರ್​ಸಿಎಲ್ ವಿರುದ್ಧ ಎಫ್​ಐಆರ್ ದಾಖಲು

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ – ಕೆಆರ್ ಪುರ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಿಎಂಆರ್​ಸಿಎಲ್ ಉದ್ದೇಶಿಸಿದೆ. ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಬಹುದು ಎಂದು ಬಿಎಂಆರ್​ಸಿಎಲ್ ನಿರೀಕ್ಷಿಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ