ಬೆಂಗಳೂರು: ಯಾಕೋ ಬೆಂಗಳೂರು ಪೊಲೀಸರ ಟೈಮು ಚೆನ್ನಾಗಿಲ್ಲ ಅಂತಾ ಕಾಣುತ್ತೆ. ಕೊರೊನಾ ಕಾಲಿಟ್ಟಿದ್ದೇ ಇಟ್ಟಿದ್ದು, ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ ಅವರ ಸ್ಥಿತಿ. ಕೆಲಸ ಮಾಡದಿದ್ರೂ ಅತಂಕ ಮಾಡಿದ್ರೂ ಭಯ ಎನ್ನುವಂತಾಗಿದೆ ಖಾಕಿಗಳ ಪರಿಸ್ಥಿತಿ.
ಹೌದು ರಾಜಧಾನಿ ಬೆಂಗಳೂರಿನ ಪೊಲೀಸರ ಸ್ಥಿತಿ ಯಾರಿಗೂ ಬೇಡ ಅನ್ನುವಂತಿದೆ. ನಂದಿನಿ ಲೇಔಟ್‌ನಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಅವರ ಗಂಟಲು ದ್ರವವನ್ನು ಜೂನ್ 23ರಂದು ಕೊರೊನಾ ಟೆಸ್ಟ್‌ಗಾಗಿ ಲ್ಯಾಬ್‌ಗೆ ಕಳಿಸಲಾಗಿತ್ತು. ಇದೀಗ ಆ ಆರೋಪಿಗಳಿಬ್ಬರ ದ್ರವ ಪರೀಕ್ಷೆಯ ರಿಸಲ್ಟ್ ಬಂದಿದ್ದು, ಇಬ್ಬರೂ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ.
ಹೀಗಾಗಿ ಈ ಆರೋಪಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ನಂದಿನಿ ಲೇಔಟ್ ಠಾಣೆಯ 10 ಜನ ಪೊಲೀಸರನ್ನ ಕ್ವಾರಂಟೈನ್ ಮಾಡಲಾಗಿದೆ. ಹಾಗೇನೇ ನಂದಿನಿ ಲೇಔಟ್ ಠಾಣೆಯನ್ನ ಸೀಲ್‌ಡೌನ್ ಮಾಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
Published On - 7:49 pm, Fri, 26 June 20