ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು; ಪೋಷಕರು ಕಂಗಾಲು, 2 ದಿನದ ಬಳಿಕ ಪತ್ತೆ

|

Updated on: Jun 19, 2023 | 7:13 AM

ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು. ಪೊಲೀಸರಿಗೆ ಪೀಕಲಾಟವಾಗಿತ್ತು. ತಂದೆ ಚಾಕಲೇಟ್​ಗೆ ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ.

ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು; ಪೋಷಕರು ಕಂಗಾಲು, 2 ದಿನದ ಬಳಿಕ ಪತ್ತೆ
ಧರ್ಮಸ್ಥಳ
Follow us on

ಬೆಂಗಳೂರು: ಕಾಂಗ್ರೆಸ್​ನ ಶಕ್ತಿ ಯೋಜನೆ(Shakti Yojana) ಘೋಷಣೆಯಾಗುತ್ತಿದ್ದಂತೆ ನಾರಿ ಶಕ್ತಿಗಳೆಲ್ಲ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಉಚಿತ ಬಸ್ ಸೇವೆ(Free Bus Travel For Women Scheme) ಎಂದು ರಾಜ್ಯದ ನಾನಾ ಕಡೆಗಳಿಗೆ ಪ್ರವಾಸ ತೆರಳುತ್ತಿದ್ದಾರೆ. ಕಾಂಗ್ರೆಸ್​ನ(Congress) ಈ ಯೋಜನೆ ಕೆಲವರಿಗೆ ಅನುಕೂಲವಾದ್ರೆ ಮತ್ತಷ್ಟು ಜನರಿಗೆ ಸಂಕಟ ತಂದಿದೆ. ಹೆಂಡತಿ ಮನೆಯಲ್ಲಿರುತ್ತಿಲ್ಲ, ಅಡುಗೆ ಮಾಡುತ್ತಿಲ್ಲ, ಬಸ್​ಗಳಲ್ಲಿ ನಮಗೆ ಸೀಟು ಸಿಗುತ್ತಿಲ್ಲ ಎಂದು ಕೆಲ ಪುರುಷರು ಬೇಸರ ಹೊರ ಹಾಕಿದ್ರೆ, ಮತ್ತೊಂದೆಡೆ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ(Children Missing) ಎಂದು ಪೋಷಕರೊಬ್ಬರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು. ಪೊಲೀಸರಿಗೆ ಪೀಕಲಾಟವಾಗಿತ್ತು. ಅದು ಹೇಗಂದ್ರೆ ತಂದೆ ಚಾಕಲೇಟ್​ಗೆ ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ. ಇಬ್ಬರು‌ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಮಕ್ಕಳು ಕಾಣುತ್ತಿಲ್ಲ ಎಂದು ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ತಂದೆ-ತಾಯಿ ಮೇಲಿನ ಕೋಪಕ್ಕೆ ಈ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನ ‘ಶಕ್ತಿ’ ಜನರನ್ನ ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ: ಶಕ್ತಿ ಯೋಜನೆ ಯಶಸ್ಸಿನ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತು

ಹೌದು ಅಕ್ಕ-ತಂಗಿಯರಿಬ್ಬರು ತಂದೆಗೆ ಚಾಕಲೇಟ್​ಗೆ ಹಣ ಕೊಡುವಂತೆ ಕೇಳಿದ್ದಾರೆ. ತಂದೆ ಹಣ ಕೊಡದೆ ಮಕ್ಕಳ ಮೇಲೆ ರೇಗಾಡಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಪುತ್ರಿಯರು ಬಸ್ ಹತ್ತಿ ಫ್ರೀಯಾಗಿ ಧರ್ಮಸ್ಥಳಕ್ಕೆ ಪ್ರಯಾಣಿಸಿದ್ದಾರೆ. ಕೋಣನಕುಂಟೆಯಿಂದ ಧರ್ಮಸ್ಥಳಕ್ಕೆ ಹೋಗಿದ್ದಾರೆ.

ಈ ವಿಚಾರ ತಿಳಿಯದ ಪೋಷಕರು ಭಯಭೀತರಾಗಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಹೋದರಿಯರ ಹುಡುಕಾಟ ನಡೆಸಿದ ಪೊಲೀಸರು, ಮಕ್ಕಳು ನಾಪತ್ತೆಯಾದ ಎರಡು‌ ದಿನದ ಬಳಿಕ ಅಂದ್ರೆ ಜೂನ್ 18 ರಂದು ಧರ್ಮಸ್ಥಳದಲ್ಲಿ ಸಹೋದರಿಯರಿಬ್ಬರನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಮಕ್ಕಳ ಪತ್ತೆಯಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:12 am, Mon, 19 June 23