ಬೆಂಗಳೂರು: ಕೊರೊನಾ ಸೋಂಕಿನಿಂದ ಸಂಭವಿಸಿದ ಸಾವು ನೋವಿನ ಕತೆಗಳನ್ನು ಇನ್ನೂ ಪೂರ್ಣವಾಗಿ ನಾವು ಮರೆತಿಲ್ಲ. ಕೊವಿಡ್19 ಸೋಂಕು ತೀವ್ರವಾಗಿ ಬಾಧಿಸಿದ್ದ ಸಂದರ್ಭದಲ್ಲಿ ಎದುರಾದ ಸಂಕಟಗಳು ಒಂದೆರಡಲ್ಲ. ಇಲ್ಲಿ ಇದೀಗ ಅಂತಹದೊಂದು ವಿಷಾದನೀಯ ಮಾಹಿತಿ ಲಭ್ಯವಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟ ಇಬ್ಬರ ಮೃತದೇಹಗಳನ್ನ ಕೊಂಡೊಯ್ಯಲು ಸಂಬಂಧಿಕರು ಇನ್ನೂ ಆಸ್ಪತ್ರೆಗೆ ಬಂದಿಲ್ಲ. ಒಂದು ವರ್ಷದಿಂದ ಶವಾಗಾರದಲ್ಲಿರುವ ಇಬ್ಬರ ಮೃತದೇಹವನ್ನು ಕೊಂಡೊಯ್ಯಲು ಯಾರೂ ಬಂದಿಲ್ಲ.
ಕೊವಿಡ್ನಿಂದ ಮೃತಪಟ್ಟವರ ಶವಗಳು ಆಸ್ಪತ್ರೆಯಲ್ಲಿದೆ. ವರ್ಷ ಕಳೆದರೂ ಶವ ಪಡೆಯಲು ಸಂಬಂಧಿಕರು ಬಂದಿಲ್ಲ. ರಾಜಾಜಿನಗರದ ESI ಆಸ್ಪತ್ರೆ ಶವಾಗಾರದಲ್ಲಿರುವ ಶವಗಳು ಅನಾತವಾಗಿವೆ. ಸಂಬಂಧಿಕರು ಬಾರದ ಹಿನ್ನೆಲೆ ಅಂತ್ಯಸಂಸ್ಕಾರ ಮಾಡಲು ಇದೀಗ ಸ್ವತಃ ESI ಆಸ್ಪತ್ರೆ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಕಾಲದ ಜನಜೀವನದ ಸ್ಥಿತಿಗತಿಗಳಿಗೆ ಈ ಘಟನೆಯೂ ಒಂದು ಕೈಗನ್ನಡಿಯಾಗಿದೆ.
ಮೃತಪಟ್ಟವರಿಗೆ ಕೊರೊನಾ ಲಸಿಕೆ ಎರಡನೇ ಡೋಸ್ ಸರ್ಟಿಫಿಕೇಟ್! ಆರೋಗ್ಯ ಅಧಿಕಾರಗಳ ಯಡವಟ್ಟು
ಮೃತ ಪಟ್ಟವರಿಗೆ, ಎರಡನೇ ಡೋಸ್ ಪಡೆಯದಿದ್ದವರಿಗೆ ಎರಡನೇ ಡೋಸ್ ಲಸಿಕೆ ಸಕ್ಸಸ್ ಸರ್ಟಿಫಿಕೇಟ್ ಮೊಬೈಲ್ ಮೂಲಕ ಬಂದು, ಆರೋಗ್ಯ ಅಧಿಕಾರಗಳ ಯಡವಟ್ಟು ಪ್ರದರ್ಶಿಸಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗಡಚಿಂತಿ ಗ್ರಾಮದಲ್ಲಿ ನಡೆದಿದೆ. ಕಳೆದ ಐದು ತಿಂಗಳ ಹಿಂದೆ ಮೃತಪಟ್ಟ ದೇವೆಂದ್ರಪ್ಪ ಭೀಮಪ್ಪ ಅಬ್ಬಿಗೇರಿ ಎಂಬವರಿಗೆ ಕೋವಿಡ್ ಲಸಿಕೆ ಸಕ್ಸಸ್ ಎಂದು ಪ್ರಮಾಣಪತ್ರ ಕಳುಹಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆ ಮೃತಪಟ್ಟ ದೇವೇಂದ್ರಪ್ಪ ಹಾಗೂ ಮೊದಲನೇ ಡೋಸ್ ಲಸಿಕೆ ಪಡೆದ ಲಲಿತಾ ಅಬ್ಬಿಗೇರಿಗೂ ಎರಡನೇ ಡೋಸ್ ಲಸಕೆ ಸಕ್ಸಸ್ ಎಂದು ಹೇಳಿ ಸಂದೇಶ ಕಳುಹಿಸಲಾಗಿದೆ.
ಮಾಲಗತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಯಡವಟ್ಟು ಆಗಿದೆ. ಸಂಬಂಧಿಕರ ಮೊಬೈಲ್ ನಂಬರ್ಗೆ ಎರಡನೇ ಡೋಸ್ ಸಕ್ಸಸ್ ಎಂದು ಮೆಸೆಜ್ ಬಂದಿದೆ. ಈ ಸಂದೇಶ ನೋಡಿ ಸಂಬಂಧಿಕರು ಶಾಕ್ ಆಗಿದ್ದಾರೆ. ಕೊವಿಡ್ ವ್ಯಾಕ್ಸಿನೇಷನ್ನಲ್ಲೂ ಆರೋಗ್ಯ ಅಧಿಕಾರಿಗಳ ಯಡವಟ್ಟು ಎಂಬ ಬಗ್ಗೆ ಅಸಮಾಧಾನ ಉಂಟಾಗಿದೆ.
ವೈರಸ್ ಅಪಾಯದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ: ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ
ಒಮಿಕ್ರಾನ್ ವೈರಸ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸಭೆ ಹಿನ್ನೆಲೆ ಬೆಂಗಳೂರಿನಲ್ಲಿ ಸಚಿವ ಹಾಗೂ ರಾಜ್ಯ ಕೊವಿಡ್ ಟಾಸ್ಕ್ಫೋರ್ಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ವೈರಸ್ ಅಪಾಯದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಲಾಗುತ್ತದೆ. ಚರ್ಚೆ ಬಳಿಕ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆ. ಜನರ ರಕ್ಷಣೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಶಾಲಾ- ಕಾಲೇಜು ಬಗ್ಗೆ ತಕ್ಷಣದ ಕ್ರಮ ಇಲ್ಲ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ಬಗ್ಗೆ ತಜ್ಞರಿಂದ ಮತ್ತಷ್ಟು ಅಭಿಪ್ರಾಯ ಪಡೀತೇವೆ ಎಂದು ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದೇಶಕ್ಕೀಗ ಒಮಿಕ್ರಾನ್ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ
ಇದನ್ನೂ ಓದಿ: CM Basavaraj Bommai: ರಾಜ್ಯದಲ್ಲಿ ಹೆಚ್ಚಾದ ಕೊರೊನಾ ಸೋಂಕು; ಇಂದು ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ
Published On - 4:37 pm, Sat, 27 November 21