AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ರದ್ದತಿಗೆ ಹೆಚ್​ಡಿ ಕುಮಾರಸ್ವಾಮಿ ಆಗ್ರಹ; ಇದು ಹೆಚ್ಚು ಕಡಿಮೆ ತಿಳಿವಳಿಕೆ ಎಂದ ಸಚಿವ ಅಶ್ವತ್ಥ್ ನಾರಾಯಣ

ಸೊರಬದ ವಿದ್ಯಾರ್ಥಿನಿ ಆತ್ಮಹತ್ಯೆ ದುಃಖಕರ ವಿಷಯ. ವಿದ್ಯಾರ್ಥಿಗಳ ಮೆರಿಟ್ ಹೆಚ್ಚಿಸಲು ಕೆಲಸ ಮಾಡಬೇಕು. ನೀಟ್ನಿಂದ ಇಂದು ಬಡವರಿಗೆ ಅನುಕೂಲವಾಗಿದೆ. ಸರ್ಕಾರಿ ಕಾಲೇಜು, ಗ್ರಾಮೀಣ ವಿದ್ಯಾರ್ಥಿಗಳಿಗೆ ರ್ಯಾಕಿಂಗ್ ಬರಬೇಕು.

ನೀಟ್ ರದ್ದತಿಗೆ ಹೆಚ್​ಡಿ ಕುಮಾರಸ್ವಾಮಿ ಆಗ್ರಹ; ಇದು ಹೆಚ್ಚು ಕಡಿಮೆ ತಿಳಿವಳಿಕೆ ಎಂದ ಸಚಿವ ಅಶ್ವತ್ಥ್ ನಾರಾಯಣ
ಅಶ್ವತ್ಥ್ ನಾರಾಯಣ
TV9 Web
| Edited By: |

Updated on: Nov 27, 2021 | 5:54 PM

Share

ಬೆಂಗಳೂರು: ನೀಟ್ ರದ್ದತಿಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ (Ashwath Narayan), ಇದು ಹೆಚ್ಚು ಕಡಿಮೆ ತಿಳಿವಳಿಕೆ ಕೊರತೆ ಅಂತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ನೀಟ್ ಬರದಂತೆ ತಡೆಯಲು ಬಹಳಷ್ಟು ಶಕ್ತಿಗಳು ಯತ್ನಿಸಿದ್ದವು. ಇಂದು ನೀಟ್ನಿಂದಾಗಿ ಮೆರಿಟ್ ಇಲ್ಲದೆ ಸೀಟ್ ಸಿಗಲ್ಲ. ನೀಟ್ ಜನಪರ ಮತ್ತು ವಿದ್ಯಾರ್ಥಿಗಳ ಪರವಾಗಿ ಇದೆ ಎಂದು ಅಶ್ವತ್ಥ್ ಅಭಿಪ್ರಾಯಪಟ್ಟರು.

ಸೊರಬದ ವಿದ್ಯಾರ್ಥಿನಿ ಆತ್ಮಹತ್ಯೆ ದುಃಖಕರ ವಿಷಯ. ವಿದ್ಯಾರ್ಥಿಗಳ ಮೆರಿಟ್ ಹೆಚ್ಚಿಸಲು ಕೆಲಸ ಮಾಡಬೇಕು. ನೀಟ್​ನಿಂದ ಇಂದು ಬಡವರಿಗೆ ಅನುಕೂಲವಾಗಿದೆ. ಸರ್ಕಾರಿ ಕಾಲೇಜು, ಗ್ರಾಮೀಣ ವಿದ್ಯಾರ್ಥಿಗಳಿಗೆ ರ್ಯಾಕಿಂಗ್ ಬರಬೇಕು. ಮೊದಲು ಯುಪಿಎಸ್​ಸಿಯಲ್ಲಿ ರಾಜ್ಯದವರು ಕಡಿಮೆ ಇರುತ್ತಿದ್ದರು. ಈಗ ಅದನ್ನು ಬಗೆಹರಿಸಿಕೊಂಡಿಲ್ವಾ? ಹಾಗಂತ ಯುಪಿಎಸ್​ಸಿ ಪರೀಕ್ಷೆ ಬೇಡ ಎಂದು ಹೇಳಲು ಆಗುತ್ತಾ? ಅಂತ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ಪ್ರಶ್ನಿಸಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಸಚಿವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಕುರಿತ ಬಿಜೆಪಿ ಪ್ರಸ್ತಾಪವನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಅಶ್ವತ್ಥ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅಂಥ ವಿಚಾರದಲ್ಲಿ ಸ್ಪಷ್ಟತೆ ಇದ್ರೆ ವರಿಷ್ಠರು ಚರ್ಚಿಸುತ್ತಾರೆ. ಅಂತಹ ಪ್ರಸ್ತಾಪವನ್ನ ಯಾರೂ ಕೂಡ ವ್ಯಕ್ತಪಡಿಸಿಲ್ಲ. ನಮ್ಮವರು ಯಾರೂ ಚರ್ಚಿಸಿಲ್ಲ, ಹೇಳಿಕೆ ಕೊಟ್ಟಿರಬಹುದು. ಅವರ ನಿಜವಾದ ಉದ್ದೇಶಗಳು ಏನಿದೆ ನೋಡೋಣ ಅಂತ ತಿಳಿಸಿದರು.

ಇದನ್ನೂ ಓದಿ

ಒಮಿಕ್ರಾನ್ ಭೀತಿ; ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮ ಸಡಿಲಿಕೆ ಬಗ್ಗೆ ಪರಿಶೀಲಿಸಲು ಮೋದಿ ಸೂಚನೆ

ಸೋನಾಕ್ಷಿ ಸಿನ್ಹಾಗೆ ಕೈಕೊಡುತ್ತಲೇ ಇದೆ ಅದೃಷ್ಟ; ಸಿನಿಮಾವನ್ನೇ ಅರ್ಧಕ್ಕೆ ಕೈಬಿಟ್ಟ ನೆಟ್​​ಫ್ಲಿಕ್ಸ್