AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಾಕ್ಷಿ ಸಿನ್ಹಾಗೆ ಕೈಕೊಡುತ್ತಲೇ ಇದೆ ಅದೃಷ್ಟ; ಸಿನಿಮಾವನ್ನೇ ಅರ್ಧಕ್ಕೆ ಕೈಬಿಟ್ಟ ನೆಟ್​​ಫ್ಲಿಕ್ಸ್

‘ಬುಲ್​ಬುಲ್​ ತರಂಗ’ ಹೆಸರಿನ ಸಿನಿಮಾವನ್ನು ನೆಟ್​ಫ್ಲಿಕ್ಸ್​ ನಿರ್ಮಾಣ ಮಾಡುತ್ತಿತ್ತು. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು.

ಸೋನಾಕ್ಷಿ ಸಿನ್ಹಾಗೆ ಕೈಕೊಡುತ್ತಲೇ ಇದೆ ಅದೃಷ್ಟ; ಸಿನಿಮಾವನ್ನೇ ಅರ್ಧಕ್ಕೆ ಕೈಬಿಟ್ಟ ನೆಟ್​​ಫ್ಲಿಕ್ಸ್
ಸೋನಾಕ್ಷಿ ಸಿನ್ಹಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 27, 2021 | 4:23 PM

Share

ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಬಾಲಿವುಡ್​ಗೆ ಪರಿಚಯಿಸಿದ್ದು ಸಲ್ಮಾನ್​ ಖಾನ್​. ಅವರ ನಟನೆಯ ಮೊದಲ ಸಿನಿಮಾ ‘ದಬಾಂಗ್​’ ಚಿತ್ರ ಸಖತ್​ ಹಿಟ್​ ಆಗಿತ್ತು. ನಂತರ ಹಲವು ಸ್ಟಾರ್​ಗಳ ಜತೆ ತೆರೆ ಹಂಚಿಕೊಂಡು ಹೆಸರು ಮಾಡಿದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಕೈ ಹಿಡಿಯುತ್ತಿಲ್ಲ. ಒಪ್ಪಿಕೊಂಡ ಚಿತ್ರಗಳೆಲ್ಲವೂ ಫ್ಲಾಪ್​ ಆಗುತ್ತಿವೆ. ಈಗ ಅವರು ಒಪ್ಪಿಕೊಂಡಿದ್ದ ಸಿನಿಮಾವನ್ನು ನೆಟ್​ಫ್ಲಿಕ್ಸ್​ ಅರ್ಧಕ್ಕೆ ಕೈಬಿಟ್ಟಿದೆ.

‘ಬುಲ್​ಬುಲ್​ ತರಂಗ​’ ಹೆಸರಿನ ಸಿನಿಮಾವನ್ನು ನೆಟ್​ಫ್ಲಿಕ್ಸ್​ ನಿರ್ಮಾಣ ಮಾಡುತ್ತಿತ್ತು. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಸಿನಿಮಾದ ಕೆಲ ದೃಶ್ಯಗಳ ಶೂಟಿಂಗ್​ ಕೂಡ ನಡೆದಿತ್ತು. ಆದರೆ, ಈಗ ಸಿನಿಮಾವನ್ನು ನೆಟ್​ಫ್ಲಿಕ್ಸ್​ ಅರ್ಧಕ್ಕೆ ಕೈ ಬಿಟ್ಟಿದೆ. ಸೋನಾಕ್ಷಿ ಕೈಯಲ್ಲಿ ಇರುವ ಎರಡು ಸಿನಿಮಾಗಳ ಪೈಕಿ ಒಂದು ಸಿನಿಮಾ ಅರ್ಧಕ್ಕೆ ನಿಂತಂತಾಗಿದೆ.

ಮತ್ತೊಂದು ವರದಿ ಪ್ರಕಾರ ಸೋನಾಕ್ಷಿ ಸಿನ್ಹಾ ಅವರೇ ಚಿತ್ರತಂಡದ ಜತೆ ಮನಸ್ತಾಪ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಹೊರ ಹೋಗಿದ್ದರಿಂದ ಬೇರೆಯರವರನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ನಿರಾಕರಿಸಿದೆ. ರಾಜ್​ ಬಬ್ಬರ್​, ಸುಷ್ಮಿತಾ ಮುಖರ್ಜಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಶ್ರೀ ನಾರಾಯಣ್​ ಸಿಂಗ್​ ಈ ಸಿನಿಮಾ ನಿರ್ದೇಶನ ಮಾಡಬೇಕಿತ್ತು.

ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್​ ಸಿನ್ಹಾ ಮಗಳು ಸೋನಾಕ್ಷಿ. ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್​ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ. ‘ನಮಗೆ ಬಂದ ಸಿನಿಮಾ ಬೇರೆಯವರ ಕೈ ಸೇರುವುದು ಸರ್ವೇ ಸಾಮಾನ್ಯ. ಸ್ಟಾರ್​ ನಟರ ಮಕ್ಕಳೂ ಸಿನಿಮಾ ಆಫರ್​ ಕಳೆದುಕೊಂಡ ಉದಾಹರಣೆ ಇದೆ. ಆದರೆ, ಅವರು ಹೋಗಿ ಎಲ್ಲರ ಎದುರು ಅತ್ತಿಲ್ಲ. ಈ ರೀತಿ ಎಲ್ಲರಿಗೂ ಆಗುತ್ತದೆ. ಇದು ಜೀವನ. ಅದನ್ನು ಎದುರಿಸಿ’ ಎಂದು ಸೋನಾಕ್ಷಿ ಇತ್ತೀಚೆಗೆ ಕಿವಿಮಾತು ಹೇಳಿದ್ದರು.

ಇದನ್ನೂ ಓದಿ: ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?

ಕೋಟಿಕೋಟಿ ವಂಚನೆ ಆರೋಪಿಯ ಜತೆ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ರೊಮ್ಯಾನ್ಸ್​; ಫೋಟೋ ಲೀಕ್​