ಪ್ರಾಣಿಪ್ರಿಯರೇ ಸೋನಾಕ್ಷಿ ಸಿನ್ಹಾಳ ‘ಗಬ್ರು’ ನೋಡಿದ್ದೀರಾ?
‘ಅದು ಯಾರಾದರೂ ಸರಿ ಅವರ ಮುಖದಲ್ಲಿ ಒಂದೆಳೆಯಾದರೂ ನಗುವನ್ನರಳಿಸುವ ಪ್ರಯತ್ನವನ್ನು ಗಬ್ರು ಮಾಡುತ್ತಿದ್ದಾನೆ’ ಎಂಬ ಸಾಲಿನೊಂದಿಗೆ ಈ ಹಿಂದೆ ಸೋನಾಕ್ಷಿ ಪೋಸ್ಟ್ ಮಾಡಿದ್ದರು.
ಇಡೀ ಜಗತ್ತೇ ಕೊರೋನಾ ಸಂಕಷ್ಟದಲ್ಲಿ ಮುಳುಗಿದ್ದರೂ ಸಾಮಾಜಿಕ ಜಾಳತಾಣದ ಕಿಟಕಿಯ ಮೂಲಕವೇ ತಮ್ಮ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನವನ್ನು ನಟನಟಿಯರು ಮಾಡುತ್ತಲೇ ಇದ್ದಾರೆ. ಈ ಪೈಕಿ ಸದ್ಯಕ್ಕೆ ಸುದ್ದಿ ಮಾಡುತ್ತಿರುವುದು ದಬಾಂಗ್-3 ನಾಯಕಿ ಸೋನಾಕ್ಷಿ ಸಿನ್ಹಾ ಮತ್ತು ಅವರ ಮನೆಯ ನಾಯಿ ತೆಗೆಸಿಕೊಂಡ ಫೋಟೋ.
ಹೌದು, ಲಾಕ್ಡೌನ್ ಸ್ಟಾರ್ಟ್ ಆದ ನಂತರದಲ್ಲಿ ಸಾಕಷ್ಟು ನಟ-ನಟಿಯರು ತಾವು ಮನೆಯಲ್ಲಿ ಏನು ಮಾಡುತ್ತಿದ್ದೇವೆ ಎನ್ನುವ ಪಿನ್ ಟು ಪಿನ್ ಅಪ್ಡೇಟ್ ಕೊಡುತ್ತಿದ್ದಾರೆ. ಕೆಲವರು ಮನೆಯಲ್ಲಿ ಮಾಡುವ ರುಚಿರುಚಿಯಾದ ಅಡುಗೆ ಫೋಟೋ ಹಾಕಿಕೊಂಡರೆ ಇನ್ನೂ ಕೆಲವರು ಯೋಗಾಸನದ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಅದೇ ರೀತಿ ನಟಿ ಸೋನಾಕ್ಷಿ ತಮ್ಮ ಮನೆಯ ಮುದ್ದಿನ ನಾಯಿ ಚಿತ್ರ ಅಪ್ಲೋಡ್ ಮಾಡಿದ್ದಾರೆ.
‘ಅದು ಯಾರಾದರೂ ಸರಿ ಅವರ ಮುಖದಲ್ಲಿ ಒಂದೆಳೆಯಾದರೂ ನಗುವನ್ನರಳಿಸುವ ಪ್ರಯತ್ನವನ್ನು ಗಬ್ರು ಮಾಡುತ್ತಿದ್ದಾನೆ’ ಎಂಬ ಸಾಲಿನೊಂದಿಗೆ ಈ ಹಿಂದೆ ಸೋನಾಕ್ಷಿ ಪೋಸ್ಟ್ ಮಾಡಿದ್ದರು. ಈಗ ಸೋನಾಕ್ಷಿ ಗಬ್ರು ಜೊತೆ ಇರುವ ಹೊಸ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಪರಸ್ಪರ ಕಣ್ಣೋಟವೇ ಜೀವಾಳ. ಹೀಗಾಗಿ ಇದು ಏಕಕಾಲಕ್ಕೆ ಸಿನಿಪ್ರಿಯರೊಂದಿಗೆ ಪ್ರಾಣಿಪ್ರಿಯರ ಗಮನವನ್ನೂ ಸೆಳೆದು ಲಕ್ಷಾಂತರ ಲೈಕುಗಳನ್ನು ಗಳಿಸಿದೆ.
View this post on Instagram
ಸಿನಿಮಾ ವಿಚಾರಕ್ಕೆ ಬರೋದಾದರೆ ಸೋನಾಕ್ಷಿ ಸಿನ್ಹಾ ಈಗ ಮೊದಲಿನಷ್ಟು ಮಾರುಕಟ್ಟೆ ಉಳಿಸಿಕೊಂಡಿಲ್ಲ. ಸಲ್ಮಾನ್ ಖಾನ್ ನಟನೆಯ ದಬಾಂಗ್ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಪ್ಲಾಫ್ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಸದ್ಯ, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಸೋನಾಕ್ಷಿ ನಟಿಸುತ್ತಿದ್ದಾರೆ. ಸಲ್ಮಾನ್-ಸುದೀಪ್ ಒಟ್ಟಾಗಿ ಕಾಣಿಸಿಕೊಂಡಿದ್ದ ದಬಾಂಗ್-3 ಅವರ ಕೊನೆಯ ಚಿತ್ರ. ಈ ಸಿನಿಮಾ ಅಂದುಕೊಂಡಷ್ಟು ಮಟ್ಟಿಗೆ ಹಿಟ್ ಆಗಿಲ್ಲ.