AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ

Omicron: ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಅದಾದ ಬಳಿಕ ಹಾಂಗ್​ಕಾಂಗ್​​ನಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ. ಇಸ್ರೇಲ್​ನಲ್ಲಿ ಒಂದು ಮತ್ತು ಬೆಲ್ಜಿಯಂನಲ್ಲಿ ಒಂದು ಒಮೊಕ್ರಾನ್​ ಪ್ರಕರಣಗಳು ದಾಖಲಾಗಿವೆ. 

ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Nov 27, 2021 | 12:47 PM

Share

ಕೊರೊನಾ ಒಂದು ಹಂತದಲ್ಲಿ ಕಡಿಮೆಯಾಯಿತು ಎಂದು ಸ್ವಲ್ಪ ಮಟ್ಟಿಗೆ ನಿರಾಳವಾಗುವ ಹೊತ್ತಲ್ಲೇ ಇನ್ನೊಂದು ರೂಪಾಂತರಿ ಶಾಕ್​ ಎದುರಾಗಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾದಲ್ಲಿ ಮೊದಲು ಪತ್ತೆಯಾದ ಕೊರೊನಾದ ಹೊಸ ತಳಿ B.1.1.529ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್​ ಎಂದು ಹೆಸರಿಟ್ಟಿದೆ. ಇಲ್ಲಿಯವರೆಗೆ ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಎನಿಸಿಕೊಂಡಿದ್ದ ಡೆಲ್ಟಾಕ್ಕಿಂತಲೂ ವೇಗವಾಗಿ ಹಡುವ ಈ ಒಮಿಕ್ರಾನ್​ ವಿಶ್ವದಾದ್ಯಂತ ಆತಂಕ ಮೂಡಿಸಿದೆ.  

ಇನ್ನು ಇದೀಗ ಪತ್ತೆಯಾದ ಒಮಿಕ್ರಾನ್​ ಅಥವಾ B.1.1.529 ವೈರಾಣು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆದರೆ ಕೊರೊನಾದ ಈ ಹೊಸ ತಳಿ ಎಷ್ಟರ ಮಟ್ಟಿಗೆ ಅಪಾಯ ತರಬಲ್ಲದು. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ, ಸಾವಿನ ಪ್ರಮಾಣವನ್ನುಎಷ್ಟರಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ಹೇಳಲು ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆರೋಗ್ಯ ತಜ್ಞರಂತೂ ಇದನ್ನು ಸೂಪರ್ ಸ್ಟ್ರೇನ್​ ಎಂದೇ ಕರೆಯುತ್ತಿದ್ದು, ಒಮಿಕ್ರಾನ್​ 30ಕ್ಕೂ ಹೆಚ್ಚು ರೂಪಾಂತಗಳನ್ನು ಒಳಗೊಂಡಿದೆ. ಇದು ಕೊರೊನಾದ ಉಳಿದೆಲ್ಲ ಹೊಸ ತಳಿಗಳಿಗಿಂತ ಹೆಚ್ಚು ಮತ್ತು ಡೆಲ್ಟಾಕ್ಕಿಂತಲೂ ಎರಡು ಪಟ್ಟು ಅಧಿಕ ಎಂದು ಹೇಳಲಾಗಿದೆ.

ಒಮಿಕ್ರಾನ್​ ಬಗೆಗಿರುವ ಆತಂಕಗಳು  ಒಮಿಕ್ರಾನ್​​ನ ಸ್ಪೈಕ್​ ಪ್ರೊಟಿನ್​​ನಲ್ಲಿರುವ 32 ರೂಪಾಂತರಗಳಿಂದಾಗಿ ಇದು ಲಸಿಕೆಯ ದಕ್ಷತೆಯನ್ನು ಶೇ.40ಕ್ಕೆ ಇಳಿಸುತ್ತದೆ. ಒಮಿಕ್ರಾನ್​ನಲ್ಲಿರುವ ಆರ್​203ಕೆ ಮತ್ತು ಜಿ204ಆರ್​ ಎಂಬ ರೂಪಾಂತರಗಳು ವೈರಸ್​ ವೇಗವಾಗಿ ಹರಡಲು ಕಾರಣವಾಗುತ್ತವೆ ಎಂದು ಯುಕೆ ಮೂಲದ ಆರೋಗ್ಯ ತಜ್ಞರು ಹೇಳಿದ್ದಾಗಿ ಡೇಲಿಮೇಲ್​ ವರದಿ ಮಾಡಿದೆ. ಹಾಗೇ, ಎಚ್​655ವೈ, ಎನ್​679ಕೆ ಮತ್ತು ಪಿ681ಎಚ್​​ ರೂಪಾಂತರು ಒಮಿಕ್ರಾನ್​ ವೈರಾಣುಗಳು ಮನುಷ್ಯರ ಜೀವಕೋಶಗಳನ್ನು ಸುಲಭವಾಗಿ ನುಸುಳಲು ಸಹಾಯ ಮಾಡುತ್ತವೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಲಸಿಕೆ ಹಾಕಿದರೂ ಈ ಒಮಿಕ್ರಾನ್​ಗಳಿಂದ ಅವರುಗಳ ದಕ್ಷತೆಯೇ ಕಡಿಮೆಯಾಗುತ್ತದೆ. ಇದೇ ಬಹುದೊಡ್ಡ ಆತಂಕವಾಗಿ ಪರಿಣಮಿಸಿದೆ.

ಎಲ್ಲೆಲ್ಲಿ ಕಾಣಿಸಿಕೊಂಡಿದೆ? ಒಮಿಕ್ರಾನ್​ ಮೊದಲು ಕಾಣಿಸಿಕೊಂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಅದಾದ ಬಳಿಕ ಹಾಂಗ್​ಕಾಂಗ್​​ನಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ. ಇಸ್ರೇಲ್​ನಲ್ಲಿ ಒಂದು ಮತ್ತು ಬೆಲ್ಜಿಯಂನಲ್ಲಿ ಒಂದು ಒಮೊಕ್ರಾನ್​ ಪ್ರಕರಣಗಳು ದಾಖಲಾಗಿವೆ.  ಅಂದಹಾಗೆ ಈ ಹಾಂಗ್​ಕಾಂಗ್​​ನಲ್ಲಿ ಸೋಂಕಿಗೆ ತುತ್ತಾದವರಲ್ಲಿ ಒಬ್ಬರು, ದಕ್ಷಿಣಾಫ್ರಿಕಾದಲ್ಲಿ ಕಾಣಿಸಿಕೊಂಡ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಸಾರಿಗೆ ನೌಕರರು; 3 ತಿಂಗಳಿನಿಂದ ಸರಿಯಾದ ಸಂಬಳವಿಲ್ಲದೇ ದುಸ್ತರಗೊಂಡಿದೆ ಬದುಕು

Follow Us
TV9 Web
TV9 Web

TV9 Kannada

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?