ಬೆಂಗಳೂರು: ಕದ್ದ ಬೈಕ್ನಲ್ಲೇ(Bike Theft) ಬಂದು ಮಧ್ಯರಾತ್ರಿ ಹೋಟೆಲ್ ದರೋಡೆ(Hotel Robbery) ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಗರದಲ್ಲಿ ಕಳ್ಳರ ಕೈಚಳಕ ಹೆಚ್ಚಾಗಿದೆ. ಇಬ್ಬರು ಪುಂಡರು ಕದ್ದ ಬೈಕ್ನಲ್ಲೇ ಬಂದು 12 ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಜಯನಗರದ ನೈವೇದ್ಯ ಹೋಟೆಲ್ನಲ್ಲಿ ಕಳ್ಳತನ ಮಾಡಿದ್ದಾರೆ.
ಕದ್ದ ಬೈಕ್ ನಲ್ಲೇ ಬರುವ ಇಬ್ಬರು ಆಸಾಮಿಗಳು ಶೆಟರ್ ಬೀಗ ಒಡೆದು ಹೋಟೆಲ್ ಒಳಗೆ ನುಗ್ತಾರೆ. ಟಾರ್ಚ್ ಹಿಡಿದು ಹೋಟೆಲ್ ಪೂರ್ತಿ ಸರ್ಚ್ ಮಾಡಿ ಹಣ ಇಟ್ಟಿರುವ ಡ್ರಾಯರ್ ಲಾಕ್ ಕಂಬಿ ಯಿಂದ ಆರಾಮಾಗಿ ಮುರಿದು ಕಳ್ಳತನ ಮಾಡಿದ್ದಾರೆ. ಎರಡೂವರೆ ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ವಿದ್ಯಾರ್ಥಿಗಳ ಕಾಲೇಜು ಬ್ಯಾಗ್ನಲ್ಲಿ ಗಾಂಜಾ ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ(College Students) ಬಳಿ ಗಾಂಜಾ(Drugs) ಪತ್ತೆಯಾಗಿದ್ದು ಸ್ಥಳೀಯರು ವಿದ್ಯಾರ್ಥಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿಗಳಿಂದ ಬೈಕ್ ಅಡ್ಡಾದಿಡ್ಡಿ ಚಾಲನೆ ಹಿನ್ನೆಲೆ ಅನುಮಾನ ಬಂದು ವಿದ್ಯಾರ್ಥಿಗಳನ್ನು ಹಿಡಿದು ಸ್ಥಳೀಯರು ವಿಚಾರಿಸಿದಾಗ ಬ್ಯಾಗ್ನಲ್ಲಿ ಗಾಂಜಾ ಪತ್ತೆಯಾಗಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯ ಲೇಔಟ್ಯೊಂದರಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ಗಾಂಜಾ ಪತ್ತೆಯಾಕ್ತಿದ್ದಂತೆ ಹುಡುಗರನ್ನ ಲಾಕ್ ಮಾಡಿ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡ್ತಿದ್ದಾಗಿ ಆರೋಪಿಸಿದ್ದಾರೆ. ಬೈಕ್ನಲ್ಲಿದ್ದ ಕಾಲೇಜು ಬ್ಯಾಗ್ ಒಳಗೆ ಗಾಂಜಾ ಸಾಗಿಸ್ತಿದ್ದ ವಿದ್ಯಾರ್ಥಿಗಳು ಸಿಕ್ಕಿಬಿದಿದ್ದಾರೆ. ಮೊದಲಿಗೆ ವಿದ್ಯಾರ್ಥಿಗಳು ಬೈಕ್ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ಹಿಡಿದು ವಿಚಾರಿಸಿದ್ದಾರೆ. ಕಾಲೇಜು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ 1 ಕೆಜಿ ಗಾಂಜಾ ಪತ್ತೆಯಾಗಿದೆ.
ಬಳಿಕ ಕೂಡಲೇ ಇಬ್ಬರನ್ನೂ ಹಿಡಿದು ವಿದ್ಯಾರ್ಥಿಗಳು ವಾಸವಾಗಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಾಡಿಗೆ ಮನೆಯಲ್ಲಿ ಪೌಡರ್ ರೂಪದ ಮಾದಕವಸ್ತು ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಬ್ಯಾಡರಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳ ದಿನದ ಹೊಸ್ತಿಲಲ್ಲೇ ರಾಖಿ ಸಾವಂತ್ ದಾಂಪತ್ಯ ಅಂತ್ಯ; ಕಾಂಟ್ರವರ್ಸಿ ನಟಿಯ ಗಟ್ಟಿ ನಿರ್ಧಾರ