ಸಮವಸ್ತ್ರ ಸಂಘರ್ಷ: ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ಮುಂದುವರಿಕೆ; ಏನಾಗಲಿದೆ ತೀರ್ಪು, ಜನತೆ ಚಿತ್ತ ಹೈಕೋರ್ಟ್​ನತ್ತ

ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹಕ್ಕಿನ ವಿವಾದ ಮುಗಿಯುವ ಹಂತಕ್ಕೆ ಬಂದಿದೆ. ಇವತ್ತು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ಅದು ಕೂಡ 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ಆಗಲಿದೆ.

ಸಮವಸ್ತ್ರ ಸಂಘರ್ಷ: ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ಮುಂದುವರಿಕೆ; ಏನಾಗಲಿದೆ ತೀರ್ಪು, ಜನತೆ ಚಿತ್ತ ಹೈಕೋರ್ಟ್​ನತ್ತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 14, 2022 | 11:50 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಶಾಲೆಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಈಗ ಮತ್ತೆ ಹಿಜಾಬ್ ವಿವಾದದಿಂದಾಗಿ ಶಾಲೆಗಳಿಂದ ದೂರ ಉಳಿಯುವಂತಾಗಿದೆ. ಸದ್ಯ ಸರ್ಕಾರ ಇಂದಿನಿಂದ ಮತ್ತೆ ಶಾಲೆಗಳನ್ನು ತೆರೆಯಲು ಅವಕಾಶ ನೀಡದೆ. ಇಂತಹ ಸಮಯದಲ್ಲೇ ಸಮವಸ್ತ್ರ ಸಮರ ಕುರಿತು ಇವತ್ತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಭಾರಿ ಕುತೂಹಲ ಕರಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಮವಸ್ತ್ರ ಸಂಘರ್ಷ ಇವತ್ತು ನ್ಯಾಯದೇಗುಲದ ಮುಂದೆ ಬರ್ತಿದೆ. ಹಾಗಾದ್ರೆ, ಕೋರ್ಟ್‌ನಲ್ಲಿ ಏನಾಗುತ್ತೆ? ವಿದ್ಯಾರ್ಥಿನಿಯರ ವಾದವೇನಿದೆ? ಈ ಮಧ್ಯೆ ಸರ್ಕಾರಕ್ಕೆ ಎದುರಾಗಿರೋ ಸವಾಲೇನು? ಸಿದ್ದಮಾಡ್ಕೊಂಡಿರೋ ಪ್ರತ್ಯಾಸ್ತ್ರವೇನು? ಎಲ್ಲದರ ರಿಪೋರ್ಟ್ ಇಲ್ಲಿದೆ.

ಇವತ್ತು ಹೈಕೋರ್ಟ್ನಲ್ಲಿ ವಿಚಾರಣೆ ಮುಂದುವರಿಕೆ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹಕ್ಕಿನ ವಿವಾದ ಮುಗಿಯುವ ಹಂತಕ್ಕೆ ಬಂದಿದೆ. ಇವತ್ತು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ಅದು ಕೂಡ 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ಆಗಲಿದೆ. ಇವತ್ತು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡೋ ಸಾಧ್ಯತೆ ಇದೆ. ಅದು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ಪ್ರಶ್ನೆ ಕೇಳಿದ್ರೆ ಸರ್ಕಾರ ಕೈಗೊಂಡ ಕ್ರಮದ‌ ಬಗ್ಗೆ ಎಜಿ ವಿವರಣೆ ಕೊಡಲಿದ್ದಾರೆ.

ಅಂತಿಮ ತೀರ್ಪಿಗಾಗಿ ವಾದ ಮಂಡನೆ? ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಇವತ್ತು ವಾದ ಮುಂದುವರಿಸಲಿದ್ದಾರೆ. ಅಲ್ದೆ, ತರಗತಿಯೊಳಗೆ ಹಿಜಾಬ್ ಧರಿಸುವುದು ಧಾರ್ಮಿಕ ಅಗತ್ಯತೆಯೇ? ಧಾರ್ಮಿಕ ಆಚರಣೆಯ ಮೂಲ ಅಂಶ ಎಂದು ಮನವರಿಕೆಗೆ ಯತ್ನಿಸಲು ಮುಂದಾಗೋ ಸಾಧ್ಯತೆ ಇದೆ. ಇನ್ನು, ಎರಡೂ ಕಡೆಯಿಂದ್ಲೂ ಶಿರೂರು ಮಠ ಕೇಸ್ ಉಲ್ಲೇಖ ಮಾಡಬಹುದು. ಅಲ್ದೆ, ಯಾವುದು ಅತ್ಯಗತ್ಯ ಆಚರಣೆ. ಯಾವುದು ಅಲ್ಲ ಎಂದು ವಿಶ್ಲೇಷಣೆ ಮಾಡಬಹುದು. ಜೊತೆಗೆ ಖುರಾನ್ನಲ್ಲಿ ಯಾವುದು ಕಡ್ಡಾಯ ಆಚರಣೆ, ಯಾವುದಲ್ಲ ಅಂತಾ ಎಜಿ ವಾದ ಮಂಡಿಸುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ರಾಜ್ಯ ಸರ್ಕಾರ ವಿವರವಾದ ಆಕ್ಷೇಪಣೆ ಸಲ್ಲಿಸಿದೆ.

ಇವತ್ತೇ ವಾದ ಮಂಡನೆ ಪೂರ್ಣವಾಗೋದು ಡೌಟ್ ಇನ್ನು, ಇವತ್ತೇ ವಾದಮಂಡನೆ ಪೂರ್ಣ ವಾಗುವ ಸಾಧ್ಯತೆ ಇಲ್ಲ. ಯಾಕಂದ್ರೆ, ಹಲವು ಅರ್ಜಿಗಳಿರುವುದರಿಂದ‌ ವಾದಮಂಡನೆ ಪೂರ್ಣಗೊಳಿಸಲು ಕೆಲ ದಿನ ಬೇಕು. ಅದ್ರಲ್ಲೂ ಎಲ್ಲರ ವಾದ ಕೇಳಿದ‌ ನಂತರವೇ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ. ಒಟ್ಟಾರೆ, ಒಂದ್ಕಡೆ ಶಾಲೆ ಓಪನ್ ಆಗಿದ್ದು ಮತ್ತೊಂದ್ಕಡೆ ಸದನ ಕದನ ಇದೆ. ಈ ನಡುವೆ ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ಹೀಗಾಗಿ ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ.

ಇದನ್ನೂ ಓದಿ: Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು, ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಿಸಿದರು!

Published On - 10:28 am, Mon, 14 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್