AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Gaming: ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್​

Karnataka HC on Banning Online Gaming: ನಿಷೇಧ ಪ್ರಶ್ನಿಸಿದ್ದ ಅರ್ಜಿ ಕುರಿತು ಇಂದು ಕೋರ್ಟ್ ತೀರ್ಪು ನೀಡಿದೆ. ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸರ್ಕಾರದ ಆದೇಶವನ್ನು ರದ್ದು ಪಡಿಸಿದೆ.

Online Gaming: ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್​
Follow us
TV9 Web
| Updated By: Digi Tech Desk

Updated on:Feb 14, 2022 | 11:49 AM

ಬೆಂಗಳೂರು: ಕರ್ನಾಟಕದಲ್ಲಿ ಆನ್​ಲೈನ್​ ಗೇಮಿಂಗ್​ಗೆ (Online Game) ಇಂದು (ಫೆ.14) ಹೈಕೋರ್ಟ್ (High Court)​ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ ಆನ್​ಲೈನ್​ ಗೇಮಿಂಗ್ ನಿಷೇಧವಾಗಿತ್ತು. ನಿಷೇಧ ಪ್ರಶ್ನಿಸಿದ್ದ ಅರ್ಜಿ ಕುರಿತು ಇಂದು ಕೋರ್ಟ್ ತೀರ್ಪು ನೀಡಿದೆ. ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಸರ್ಕಾರದ ಆದೇಶವನ್ನು ರದ್ದು ಪಡಿಸಿದೆ. ಸರ್ಕಾರದ ಕ್ರಮ ಸಂವಿಧಾನ ಬದ್ದವಾಗಿಲ್ಲ. ಆನ್​ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನ ಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ. ಆದರೆ ಈಗಿನ ಆದೇಶ ಕಾನೂನುಬಾಹಿರ ಎಂದು  ಹೈಕೋರ್ಟ್ ತಿಳಿಸಿದೆ.

ಕರ್ನಾಟಕ ಸರ್ಕಾರ ಆನ್​ಲೈನ್ ಗೇಮ್​ ಬ್ಯಾನ್ ಮಾಡಿ ಈ ಹಿಂದೆ ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮವನ್ನು ಗೇಮಿಂಗ್ ಕಂಪನಿಗಳು ಕೋರ್ಟ್​ಗೆ ಪ್ರಶ್ನಿಸಿದ್ದವು. ನಿಷೇಧ ಪ್ರಶ್ನಿಸಿದ್ದ ಅರ್ಜಿ ಕುರಿತು ಇಂದು ತೀರ್ಪು ಹೊರ ಬಿದ್ದಿದೆ. ನ್ಯಾಯಮೂರ್ತಿ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ರ ಪೀಠ ಆನ್​ಲೈನ್​ ಗೇಮ್​ಗೆ ಗ್ರೀನ್ ಸಿಗ್ನಲ್ ನೀಡಿದೆ.

ಸರ್ಕಾರ ಅಕ್ಟೋಬರ್ 10ರಿಂದ ಆನ್‌ಲೈನ್  ಗೇಮ್​ನ ಬ್ಯಾನ್ ಮಾಡಿ, ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್​ಜಿ (Gamezy) ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ (Fantasy gamess) ಆಪ್​ಗಳನ್ನು ಸ್ಥಗಿತಗೊಳಿಸಿತ್ತು.

2021 ಸೆಪ್ಟೆಂಬರ್ 04ಕ್ಕೆ ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಸರ್ಕಾರ ತೀರ್ಮಾನಿಸಿತ್ತು. ಈ ಸಂಬಂಧ ಮುಂದಿನ ಅಧಿವೇಶನದ ವೇಳೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ ಸಿ ಮಾಧುಸ್ವಾಮಿ ಅಂದು ಹೇಳಿದ್ದರು. ಆದರೆ, ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಒಂದು ರಾಜ್ಯ ಇಂತಹ ಕಠಿಣ ನಿಲುವನ್ನು ತೆಗೆದುಕೊಂಡ ಕೂಡಲೇ ಅದನ್ನು ಮಟ್ಟ ಹಾಕುವುದು ವಾಸ್ತವವಾಗಿ ಸಾಧ್ಯವೇ? ಬರೀ ಕರ್ನಾಟಕದಲ್ಲಿ ಆನ್​ಲೈನ್​​ ಗ್ಯಾಂಬ್ಲಿಂಗ್​ ನಿಷೇಧಿಸುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಪ್ರಶ್ನೆಗಳು ಎದ್ದಿದ್ದವು.

ಇದನ್ನೂ ಓದಿ

ಭೀಕರ: ದಾಂಡೇಲಿ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು, ಓರ್ವ ಯುವತಿ ಸಾವು

ಬೆಳಂ ಬೆಳಿಗ್ಗೆ ನಂದಿಗಿರಿಧಾಮಕ್ಕೆ ಬಂದ ಪ್ರವಾಸಿಗರು; ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರೇಮಿಗಳು

Published On - 11:05 am, Mon, 14 February 22