ಭೀಕರ: ದಾಂಡೇಲಿ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದ ನಾಲ್ವರ ಮೇಲೆ ಹತ್ತಿದ ಕಾರು, ಓರ್ವ ಯುವತಿ ಸಾವು
ಬಸ್ ನಿಲ್ದಾಣದಿಂದ ವಾಪಾಸ್ ಬರುವಾಗ ರಸ್ತೆ ದಾಟಿ ಡಿವೈಡರ್ ಮೇಲೆ ಆ ನಾಲ್ವರೂ ಒಟ್ಟುಗೂಡಿ ನಿಂತಿದ್ದರು. ಏಕಾಏಕಿ ಬಂದ ಕಾರು ಆ ನಾಲ್ವರ ಮೇಲೆ ಹತ್ತಿ, ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಬರುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ.
ಕಾರವಾರ: ದಾಂಡೇಲಿ ನಗರದ (dandeli) ಜೆ. ಎನ್. ಎಸ್ ರಸ್ತೆಯ ಡಿವೈಡರ್ (road divider) ಮೇಲೆ ನಿಂತಿದ್ದ ನಾಲ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾವನನ್ನು ಬೆಂಗಳೂರಿಗೆ ಬಿಡಲು ತನ್ನ ಅಕ್ಕನೊಂದಿಗೆ ಬಂದಿದ್ದ ಬಿಂದು ಗುಡಿ ಎಂಬ 24 ವರ್ಷದ ಯುವತಿ ಸಾವಿಗೀಡಾದ ನತದೃಷ್ಟೆ.
ಬಸ್ ನಿಲ್ದಾಣದಿಂದ ವಾಪಾಸ್ ಬರುವಾಗ ರಸ್ತೆ ದಾಟಿ ಡಿವೈಡರ್ ಮೇಲೆ ಆ ನಾಲ್ವರೂ ಒಟ್ಟುಗೂಡಿ ನಿಂತಿದ್ದರು. ಏಕಾಏಕಿ ಬಂದ ಕಾರು ( car accident) ಆ ನಾಲ್ವರ ಮೇಲೆ ಹತ್ತಿ, ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಬರುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ. ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಕರಣ ದಾಂಡೇಲಿ ನಗರ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.
ಏಕಾಏಕಿ ರಸ್ತೆಯಲ್ಲಿ ಕುಸಿದುಬಿದ್ದು 6 ಲಕ್ಷ ರೂಪಾಯಿ ಮೌಲ್ಯದ ಹೋರಿ ಸಾವು ಚಿಕ್ಕಮಗಳೂರು: ಕಳೆದ ವರ್ಷ 6 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದ ಹೋರಿ ಸಾವನ್ನಪ್ಪಿದ(Death) ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿನಕೆರೆ ಬಳಿ ನಡೆದಿದೆ. ಜಾತ್ರೆಗೆ(Fair) ಹೋಗುತ್ತಿದ್ದ ವೇಳೆ 6 ಲಕ್ಷ ರೂಪಾಯಿ ಮೌಲ್ಯದ ಹೋರಿ(OX) ಕುಸಿದುಬಿದ್ದು ಸಾವನ್ನಪ್ಪಿದೆ. ಅಂತರಘಟ್ಟೆ ಜಾತ್ರೆಗೆ ಗಾಡಿಯನ್ನು ಕಟ್ಟಿಕೊಂಡು ಹೋಗುವಾಗ ಹೋರಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ.
ಸತೀಶ್ ಎಂಬುವರಿಗೆ ಸೇರಿದ ಎತ್ತು ಜಾತ್ರೆಗೆ ಹೋಗುವಾಗ ಕುಸಿದು ಬಿದ್ದು ಸಾವನ್ನಪ್ಪಿದೆ. ಜೋಡೆತ್ತುಗಳಿಗೆ ರಾಮ-ಲಕ್ಷ್ಮಣ ಎಂದು ಕುಟುಂಬಸ್ಥರು ಹೆಸರಿಟ್ಟಿದ್ದರು. ಇದೀಗ ರಾಮ ಸಾವನ್ನಪ್ಪಿದೆ. ಸದ್ಯ ಸಾಕು ಪ್ರಾಣಿಯ ಸಾವಿನಿಂದ ಸತೀಶ್ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Honesty at KIAL: ಏರ್‌ಪೋರ್ಟ್ನಲ್ಲಿ ಪ್ರಯಾಣಿಕ ಮರೆತುಹೋಗಿದ್ದ ಹಣದ ಬ್ಯಾಗನ್ನು ವಾಪಸ್ ನೀಡಿ, ಪ್ರಾಮಾಣಿಕತೆ ತೋರಿದ ಸಿಬ್ಬಂದಿ
ಇದನ್ನೂ ಓದಿ: ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಗ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ
Published On - 9:38 am, Mon, 14 February 22