ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಘ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ

ಇಂದು ಬೆಳ್ಳಂ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೂರ್ವ ದಿಕ್ಕಿನಲ್ಲಿ ಆಕಾಶದಲ್ಲಿ ವಿಚಿತ್ರ ದೃಶ್ಯಗಳು ಕಂಡು ಬಂದಿವೆ. ಲೈಟ್ ಮತ್ತು ಹಾವಿನ ಆಕಾರದ ದೃಶ್ಯಗಳ ದರ್ಶನವಾಗಿದೆ. ಚಿಕ್ಕಬಳ್ಳಾಪುರ, ಗುಡಿಬಂಡೆ, ಚಿಂತಾಮಣಿ ಸೇರಿದಂತೆ ವಿವಿಧೆಡೆ ದೃಶ್ಯ ಕಾಣಸಿಕ್ಕಿದೆ.

ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಘ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ
ಪ್ರೇಮಿಗಳ ದಿನ ಇದೇನು ವಿಚಿತ್ರ ಲೀಲೆ! ಮಾಗ ಮಾಸದ ಸೋಮವಾರ ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿ
Follow us
TV9 Web
| Updated By: ಆಯೇಷಾ ಬಾನು

Updated on:Feb 14, 2022 | 2:31 PM

ಚಿಕ್ಕಬಳ್ಳಾಪುರ: ಇಂದು ನಾಡಿನಾದ್ಯಂತ ಸೋಮ ಪ್ರದೋಷ ವ್ರತ(Pradosh vrat) ಮತ್ತು ಪ್ರೇಮಿಗಳ ದಿನ(Valentine’s Day) ಆಚರಿಸಲಾಗುತ್ತಿದೆ. ಮಾಘ ಮಾಸದ ಸೋಮವಾರ ಹಿನ್ನೆಲೆ ಶಿವ ಭಕ್ತರಿಗೆ ವಿಶೇಷವಾದ ದಿನವಾಗಿದ್ದು ಮತ್ತೊಂದು ಕಡೆ ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇವತ್ತು ಸುದಿನ. ಸದ್ಯ ಈ ಎರಡು ವಿಶೇಷಗಳಿರುವ ಈ ದಿನದಂದು ಆಗಸದಲ್ಲಿ ಹಾವಿನ ಆಕಾರದ ದೃಶ್ಯಾವಳಿಗಳು ಕಂಡು ಬಂದಿದ್ದು ಜನ ಶಾಕ್ ಆಗಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೂರ್ವ ದಿಕ್ಕಿನಲ್ಲಿ ಆಕಾಶದಲ್ಲಿ ವಿಚಿತ್ರ ದೃಶ್ಯಗಳು ಕಂಡು ಬಂದಿವೆ. ಲೈಟ್ ಮತ್ತು ಹಾವಿನ ಆಕಾರದ ದೃಶ್ಯಗಳ ದರ್ಶನವಾಗಿದೆ. ಚಿಕ್ಕಬಳ್ಳಾಪುರ, ಗುಡಿಬಂಡೆ, ಚಿಂತಾಮಣಿ ಸೇರಿದಂತೆ ವಿವಿಧೆಡೆ ದೃಶ್ಯ ಕಾಣಸಿಕ್ಕಿದೆ. ಇದೇ ಸಮಯದಲ್ಲಿ ಬಂದ ವಿಮಾನ ಹಾವಿನ ಆಕಾರ ಕಂಡು ಬೆಳಕು ಹಾಕಿಕೊಂಡು ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಕಾಶದಲ್ಲಿ ವಿಚಿತ್ರವಾಗಿ ವಿವಿಧ ಆಕಾರಗಳನ್ನು ಒಳಗೊಂಡ ಚಿತ್ರ ಮೂಡಿದೆ. ಹಾವಿನ ರೂಪದಲ್ಲಿ ಕಾಣಿಸಿಕೊಂಡ ದೃಶ್ಯದಿಂದ ಜನರು ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video: ಭೂ ವೀಕ್ಷಣಾ ಉಪಗ್ರಹ ಸೇರಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Published On - 8:55 am, Mon, 14 February 22