Video: ಭೂ ವೀಕ್ಷಣಾ ಉಪಗ್ರಹ ಸೇರಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಎಲ್ಲ ಮೂರೂ ಉಪಗ್ರಹಗಳನ್ನೂ ಯಶಸ್ವಿಯಾಗಿ ಆಯಾ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಉಡಾವಣಾ ನಿರ್ದೇಶಕರು ಘೋಷಿಸಿದರು.

Video: ಭೂ ವೀಕ್ಷಣಾ ಉಪಗ್ರಹ ಸೇರಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
ನಭಕ್ಕೆ ಏರಿದ ಭೂ ವೀಕ್ಷಣಾ ಉಪಗ್ರಹ
Follow us
TV9 Web
| Updated By: Lakshmi Hegde

Updated on:Feb 14, 2022 | 8:45 AM

ಭಾರತದ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ-ISRO) ಈ ವರ್ಷದ ಮೊದಲ ಭೂ ವೀಕ್ಷಣಾ ಉಪಗ್ರಹವನ್ನು(ಇಒಎಸ್​ 04) ಇಂದು ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿತು. ಶ್ರೀಹರಿಕೋಟಾದ ಸತೀಶ್​ ಧವನ್​ ಉಡ್ಡಯನ ಕೇಂದ್ರದ ಮೊದಲ ಉಡ್ಡಯನ ನೆಲೆಯಿಂದ ಪೋಲಾರ್​ ಉಪಗ್ರಹ ಉಡಾವಣಾ ವಾಹಕ (PSLV C52)ದ ಮೂಲಕ ಇಒಎಸ್​-04 ಮತ್ತು ಇತರ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದ್ದು, ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ.

ಇಂದು ಇಒಎಸ್​-04 ಭೂ ವೀಕ್ಷಣಾ ಉಪಗ್ರಹದೊಟ್ಟಿಗೆ ನಭಕ್ಕೆ ಏರಿದ ಉಪಗ್ರಹಗಳು  INSPIRESat ಮತ್ತು INSAT-2DT. ಇದರಲ್ಲಿ INSPIRESat  ಎಂಬುದು ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹವಾಗಿದ್ದರೆ, INSAT-2DT ಒಂದು ಡಬ್​ ಮಾಡಲಾದ ಬಾಹ್ಯಾಕಾಶ ನೌಕೆ. ಇಒಎಸ್​-04 ಭೂ ವೀಕ್ಷಣಾ ಉಪಗ್ರಹ 1710 ಕೆಜಿ ತೂಕವಿದ್ದು, ಇದನ್ನು ಪಿಎಸ್​ಎಲ್​ವಿ ಸಿ52ವಾಹಕವು 529 ಕಿಮೀ ಕಕ್ಷೆಯ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸಿದೆ. ಇಒಎಸ್​-04 ಒಂದು ರಾಡಾರ್​ ಇಮೇಜಿಂಗ್ ಉಪಗ್ರಹವಾಗಿದ್ದು, ಯಾವುದೇ ರೀತಿಯ ವಾತಾವರಣವಿದ್ದರೂ, ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ, ಪ್ರವಾಹ ನಕ್ಷೆ ಅಪ್ಲಿಕೇಶನ್​​ಗಳಿಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಇಂದು ಭೂವೀಕ್ಷಣಾ ಉಪಗ್ರಹ 04 ಸೇರಿ ಒಟ್ಟು ಮೂರು ಉಪಗ್ರಹಗಳು ನಭಕ್ಕೆ ಏರುತ್ತಿದ್ದಂತೆ ಉಡ್ಡಯನ ಕೇಂದ್ರದಲ್ಲಿದ್ದವರೆಲ್ಲ ಹರ್ಷೋದ್ಘಾರ ಮಾಡಿದ್ದಾರೆ. ಎಲ್ಲ ಮೂರೂ ಉಪಗ್ರಹಗಳನ್ನೂ ಯಶಸ್ವಿಯಾಗಿ ಆಯಾ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಉಡಾವಣಾ ನಿರ್ದೇಶಕರು ಘೋಷಿಸಿದರು. ನಂತರ, ಪಿಎಸ್​ಎಲ್​​ವಿ ಸಿ 52ರ ಮಿಷನ್​​ ಯಶಸ್ವಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್​.ಸೋಮನಾಥ್​ ತಿಳಿಸಿದ್ದಾರೆ.

ಇದನ್ನೂ ಓದಿ: ಜಯನಗರ: ಕದ್ದ ಬೈಕಿನಲ್ಲೇ ಹೋಟೆಲಿಂದ ಎರಡೂವರೆ ಲಕ್ಷ ಹಣವನ್ನೂ ಕದ್ದು ಪರಾರಿಯಾದರು ಕಿರಾತಕರು!

Published On - 8:40 am, Mon, 14 February 22

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ