AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chinese apps Ban: ಮತ್ತೆ ಚೀನಾದ 54 ಆ್ಯಪ್​ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ; ಬ್ಯೂಟಿ ಕ್ಯಾಮರಾ, ಆ್ಯಪ್​ ಲಾಕ್​​ಗಳೆಲ್ಲ ಇನ್ಮುಂದೆ ಬ್ಯಾನ್​ !

2020ರಲ್ಲಿ ಪಬ್​ ಜೀ, ಟಿಕ್​ಟಾಕ್​, ಶೇರ್​ಇಟ್, ​ಹೀರೋಸ್ ವಾರ್, ಮೇಪೈ, ಏರ್​ಬ್ರಷ್​, ವಿ ಚಾಟ್​, ಹೆಲೋ, ಲೈಕೀ, ಯುಸಿ ನ್ಯೂಸ್​,  ಸ್ನ್ಯಾಕ್​ ವಿಡಿಯೋ, ಅಲಿ ಎಕ್ಸ್​ಪ್ರೆಸ್​, ಅಲಿ ಪೇ ಕ್ಯಾಷಿಯರ್​ ಸೇರಿ ಒಟ್ಟು 118 ಆ್ಯಪ್​ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿತ್ತು.

Chinese apps Ban: ಮತ್ತೆ ಚೀನಾದ 54 ಆ್ಯಪ್​ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ; ಬ್ಯೂಟಿ ಕ್ಯಾಮರಾ, ಆ್ಯಪ್​ ಲಾಕ್​​ಗಳೆಲ್ಲ ಇನ್ಮುಂದೆ ಬ್ಯಾನ್​ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 14, 2022 | 11:12 AM

Share

ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್​​ಗಳನ್ನು (54 Chinese Apps Ban) ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್​ ಆ್ಯಪ್​​ಗಳ (Mobile Apps) ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 54 ಆ್ಯಪ್​​ಗಳನ್ನು ನಿಷೇಧಿಸಲಿದೆ. ಇದೀಗ ನಿಷೇಧಿಸಲ್ಪಟ್ಟ ಆ್ಯಪ್​​ಗಳಲ್ಲಿ, ಬ್ಯೂಟಿ ಕ್ಯಾಮರಾ, ಸ್ವೀಟ್​ ಸೆಲ್ಫೀ ಎಚ್​ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್ (Equalizer & Bass Booster), ಕ್ಯಾಮ್ ಕಾರ್ಡ್ ಫಾರ್​ ಸೇಲ್ಸ್ ಫೋರ್ಸ್​ ಎಂಟ್​, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್​, ಆ್ಯಪ್​ಲಾಕ್​, ಡ್ಯುಯೆಲ್​ ಸ್ಪೇಸ್​ ಲೈಟ್​, Tencent Xriver, Onmyoji Chess, Onmyoji Arena ಗಳು ಕೂಡ ಸೇರಿವೆ.

ಈ ಮೇಲಿನ ಪ್ರಮುಖ ಆ್ಯಪ್​ಗಳು ಸೇರಿ 54 ಚೀನಾದ ಮೊಬೈಲ್ ಅಪ್ಲಿಕೇಶನ್​​ಗಳನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಆ್ಯಪ್​ ಸ್ಟೋರ್​ ಮತ್ತು ಪ್ಲೇ ಸ್ಟೋರ್​​ಗಳಿಗೆ ಸೂಚನೆ ನೀಡಿದೆ. ಇವು ಭಾರತೀಯರ ಮಾಹಿತಿ ರಕ್ಷಣೆ ಸರಿಯಾಗಿ ಮಾಡುತ್ತಿಲ್ಲ. ಈ ಮೂಲಕ ಭಾರತೀಯರ ಭದ್ರತೆಗೆ ಧಕ್ಕೆ ತರುತ್ತಿವೆ. ಹಾಗಾಗಿ ಕೂಡಲ ಈ ಎಲ್ಲ ಆ್ಯಪ್​ಗಳನ್ನೂ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ಕೇಂದ್ರ ಇಲಾಖೆ ಹೇಳಿದೆ.

2020ರಲ್ಲಿ ಪಬ್​ ಜೀ, ಟಿಕ್​ಟಾಕ್​, ಶೇರ್​ಇಟ್, ​ಹೀರೋಸ್ ವಾರ್, ಮೇಪೈ, ಏರ್​ಬ್ರಷ್​, ವಿ ಚಾಟ್​, ಹೆಲೋ, ಲೈಕೀ, ಯುಸಿ ನ್ಯೂಸ್​,  ಸ್ನ್ಯಾಕ್​ ವಿಡಿಯೋ, ಅಲಿ ಎಕ್ಸ್​ಪ್ರೆಸ್​, ಅಲಿ ಪೇ ಕ್ಯಾಷಿಯರ್​ ಸೇರಿ ಒಟ್ಟು 118 ಆ್ಯಪ್​ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿತ್ತು. 2020ರ ಜುಲೈನಿಂದ ಸೆಪ್ಟೆಂಬರ್​ವರೆಗೆ ಹಂತಹಂತವಾಗಿ ಚೀನಾದ ಹಲವು ಮೊಬೈಲ್​ ಅಪ್ಲಿಕೇಶನ್​​ಗಳನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಪಬ್​ ಜಿ ಮತ್ತು ಟಿಕ್​ಟಾಕ್​ ಆ್ಯಪ್​ಗಳನ್ನು ನಿಷೇಧಿಸಿದಾಗ ಭಾರತದ ಬಳಕೆದಾರರಿಗೆ ಸ್ವಲ್ಪ ನಿರಾಸೆಯಾಯಿತಾದರೂ ಚಿನಾದ ಮೇಲಿನ ದ್ವೇಷದಿಂದಾಗಿ ಯಾರೂ ವಿರೋಧ ವ್ಯಕ್ತಪಡಿಸಿಲಿಲ್ಲ. ಆದರೆ ಭಾರತದಲ್ಲಿ ತಮ್ಮ ದೇಶದ ಆ್ಯಪ್​ಗಳನ್ನು ಬ್ಯಾನ್​ ಮಾಡಿದ್ದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ನಿಷೇಧದ ಮೂಲಕ ಭಾರತ ಹೂಡಿಕೆದಾರರ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿತ್ತು.

2020ರ ಜೂನ್​ 15-16ರಂದು ಗಲ್ವಾನ್​ ಕಣಿವೆಯಲ್ಲಿ ಚೀನಾ-ಭಾರತ ಯೋಧರ ನಡುವೆ ಸಂಘರ್ಷ ನಡೆದು, ಭಾರತ ಸೇನೆಯ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಇದು ಚೀನಾ ದ ಪೀಪಲ್ಸ್ ಲಿಬರೇಶನ್​ ಆರ್ಮಿ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಆಕ್ರಮಣವಾಗಿತ್ತು. ಅದಾದ ಮೇಲೆ ಗಡಿಯಲ್ಲಿ ಅದರ ಉಪಟಳ ನಿರಂತರವಾಗಿ ಮುಂದುವರಿದಿದೆ. ಹೀಗೆ ಗಲ್ವಾನ್​ ಸಂಘರ್ಷದ ಬೆನ್ನಲ್ಲೇ ಭಾರತ ಚೀನಾ ವಿರುದ್ಧ ಡಿಜಿಟಲ್​ ಸಮರವನ್ನು ಮುಂದುವರಿಸಿದೆ. ಇಲ್ಲಿಯವರೆಗೆ ಚೀನಾದ 220ಕ್ಕೂ ಅಧಿಕ ಮೊಬೈಲ್​ ಆ್ಯಪ್​​ಗಳನ್ನು ಬ್ಯಾನ್​ ಮಾಡಿದೆ.

ಇದನ್ನೂ ಓದಿ: Online Gaming: ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್​

Published On - 10:51 am, Mon, 14 February 22

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್