AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ

ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮುಂದಿನ ಅಧಿವೇಶನದ ವೇಳೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ
ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಘೋಷಣೆ
TV9 Web
| Edited By: |

Updated on:Sep 04, 2021 | 2:15 PM

Share

ಬೆಂಗಳೂರು: ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮುಂದಿನ ಅಧಿವೇಶನದ ವೇಳೆ ಸರ್ಕಾರ ಸದನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲೂ ಸಹ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ.

ಲಾಟರಿ ಹೊರತುಪಡಿಸಿ, ಕಂಪ್ಯೂಟರ್ ಮತ್ತು ಮೊಬೈಲ್ ‌ಸೇರಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಹಣದ ವ್ಯವಹಾರ ನಡೆಸುವ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಸರ್ಕಾರದ ಚಿಂತನೆ ನಡೆಸಿದೆ.

ಪಂಚಾಯತ್ ರಾಜ್ ಡಿಲಿಮಿಟೇಷನ್ ಆ್ಯಕ್ಟ್‌ಗೆ ತಿದ್ದುಪಡಿಗೆ ಸಹ ಸಂಪುಟ ನಿರ್ಧರಿಸಿದೆ. ಅಗತ್ಯ ಬಿದ್ದರೆ ಮಾತ್ರ ಡಿಲಿಮಿಟೇಷನ್ ಕಮಿಷನ್ ರಚನೆ ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ವೀಕೆಂಡ್​ ಕರ್ಫ್ಯೂ ತೆಗೆಯಲು ಕೆಲ ಸಚಿವರಿಂದ ಸಲಹೆ ಕೇಳಿಬಂದಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಹೇಳಿದ ಸಚಿವ ಮಾಧುಸ್ವಾಮಿ ಅವರು ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರವಾಗಿ ನಾಳೆ ಭಾನುವಾರ ತಜ್ಞರ ಜತೆ ಸಭೆ ನಡೆಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಸಚಿವ ಸಂಪುಟ ಸಭೆ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಕಟಿಸಿದ ಕ್ಯಾಬಿನೆಟ್​ ನಿರ್ಣಯಗಳು ಹೀಗಿವೆ:

ರಾಜ್ಯ ಬೀಜ ನಿಗಮಕ್ಕೆ 10 ಕೋಟಿ ಸಾಲದ ಕ್ಯಾಷ್ ಕ್ರೆಡಿಟ್ ಸೌಲಭ್ಯ 20 ಕೋಟಿಗೆ ಹೆಚ್ಚಳಕ್ಕೆ ಸಂಪುಟದಲ್ಲಿ ಅನುಮತಿ. ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ 98.5 ರೂ. ಕೋಟಿ ರೂ. ಕೋಟಿ ರಿಲೀಸ್‌ಗೆ ಸಚಿವ ಸಂಪುಟ ಅನುಮೋದನೆ. ಹೇಮಾವತಿ ನಾಲೆಯಿಂದ 26 ಕೆರೆಗೆ ನೀರು ಬಿಡುವ ಯೋಜನೆಗೆ ಅಸ್ತು.

ಬಂಡವಾಳ ಹೂಡಿಕೆಗೆ ಸಮಾಲೋಚಕ ಪಾಲುದಾರರಾಗಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸೇವೆ 12 ತಿಂಗಳು ಮುಂದುವರಿಕೆ. ಕೊವಿಡ್ ಹಿನ್ನೆಲೆ ಕಳೆದ ವರ್ಷ ಮುಂದೂಡಿದ್ದ ಹೂಡಿಕೆದಾರರ ಸಮಾವೇಶ ಈ ವರ್ಷ ನಡೆಯಲಿದೆ.

ಮೈಸೂರು ಅರಮನೆಯಲ್ಲಿ ಪೇಂಟ್ ಮತ್ತು ಫೋಟೋ ಸೆಷನ್ ಸಂಬಂಧ ಲೋಕಾಯುಕ್ತದಲ್ಲಿ 2 ಕೇಸ್ ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ಅಷ್ಟೊಂದು ತೀವ್ರತೆ ಇಲ್ಲವೆಂಬ ಕಾರಣ ಎರಡೂ ಪ್ರಕರಣಗಳನ್ನು ಡ್ರಾಪ್ ಮಾಡಲು ಸಂಪುಟದಲ್ಲಿ ತೀರ್ಮಾನ. ಫ್ಲ್ಯಾಷ್ ಇಲ್ಲದೆ ಫೋಟೋ ಶೂಟ್‌ಗೆ ಅವಕಾಶ ಇದೆ. ಹಾಗಾಗಿ ಮೈಸೂರು ಅರಮನೆ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಇದ್ದ ಪ್ರಕರಣ ತಿರಸ್ಕರಿಸಲು ಸಂಪುಟದಲ್ಲಿ ತೀರ್ಮಾನ.

(karnataka government to ban online gambling games says minister madhuswamy after cabinet meeting)

Published On - 1:51 pm, Sat, 4 September 21