ಗೋವಾ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದ ಕರವೇ! ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮನೆಗಳಿಗೆ ಮುತ್ತಿಗೆ

ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಕಾವೇರಿಗಾಗಿ ನಮ್ಮ ನೀರು ನಮ್ಮ ಹಕ್ಕು ಅಂತಾ ಪಾದಯಾತ್ರೆ ಮಾಡುತ್ತಾರೆ. ಗೋವಾದಲ್ಲಿ ಕಾಂಗ್ರೆಸ್ ಮಹದಾಯಿಯನ್ನ ಅವರಿಗೆ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಇಬ್ಭಗೆಯ ನೀತಿ ಅನುಸರಿಸ್ತಿದೆ.

ಗೋವಾ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದ ಕರವೇ! ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮನೆಗಳಿಗೆ ಮುತ್ತಿಗೆ
ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು
Follow us
TV9 Web
| Updated By: sandhya thejappa

Updated on:Feb 14, 2022 | 2:52 PM

ಬೆಂಗಳೂರು: ಮಹದಾಯಿ (Mahadayi) ನೀರು ಕರ್ನಾಟಕಕ್ಕೆ ಬಿಡಲ್ಲವೆಂದು ಪ್ರಣಾಳಿಕೆ ನೀಡಿದ್ದ ಗೋವಾ ಕಾಂಗ್ರೆಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದೆ. ಅಲ್ಲದೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮನೆಗಳಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸ, ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಿದ್ದ ಕರವೇ ಕಾರ್ಯಕರ್ತರು, ಕಾವೇರಿ ನೀರಿಗಾಗಿ ನಮ್ಮ ನೀರು ನಮ್ಮ ಹಕ್ಕು ಅಂತಾರೆ. ಆದರೆ ಮಹದಾಯಿ ವಿಚಾರದಲ್ಲೇಕೆ ಈ ನಿಲುವು ಇಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಕಾವೇರಿಗಾಗಿ ನಮ್ಮ ನೀರು ನಮ್ಮ ಹಕ್ಕು ಅಂತಾ ಪಾದಯಾತ್ರೆ ಮಾಡುತ್ತಾರೆ. ಗೋವಾದಲ್ಲಿ ಕಾಂಗ್ರೆಸ್ ಮಹದಾಯಿಯನ್ನ ಅವರಿಗೆ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಇಬ್ಭಗೆಯ ನೀತಿ ಅನುಸರಿಸ್ತಿದೆ ಅಂತಾ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗೆ ಮುಂದಾಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಮತ್ತು ಮಹಿಳಾ ಕನ್ನಡಪರ ಹೋರಾಟಗಾರ್ತಿಯರ ನಡುವೆ ಮಾತಿನ ಚಕಮಕಿ ನಡೆಯಿತು. ಹೊಯ್ಸಳ ವಾಹನದ ಮುಂದೆ ರೋಡ್ ಮೇಲೆ ಮಲಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ಚಿಕ್ಕಮಗಳೂರು: ಏಕಾಏಕಿ ರಸ್ತೆಯಲ್ಲಿ ಕುಸಿದುಬಿದ್ದು 6 ಲಕ್ಷ ರೂಪಾಯಿ ಮೌಲ್ಯದ ಹೋರಿ ಸಾವು

Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು, ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಿಸಿದರು!

Published On - 12:05 pm, Mon, 14 February 22