AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು, ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಿಸಿದರು!

ಇದುವರೆಗೂ ನಿರ್ದಿಷ್ಟ ವಿದ್ಯಾರ್ಥಿನಿಯರಲ್ಲಿ ಮಾತ್ರ ಕಂಡುಬಂದಿದ್ದ ಹಿಜಾಬು ಧಾರಣೆ ಪ್ರವೃತ್ತಿ ಇದೀಗ ಶಾಲಾ ಶಿಕ್ಷಕಿಯರಲ್ಲೂ ಕಂಡುಬಂದಿದೆ. ಮಾದರಿ ನಡುವಳಿಕೆಯಿಂದ ವಿದ್ಯಾರ್ಥಿನಿಯರಿಗೆ ತಿಳಿಯಹೇಳಬೇಕಿದ್ದ ಶಿಕ್ಷಕಿಯರೇ ಹಿಜಾಬು ಧರಿಸಿ, ಶಾಲೆಗೆ ಬಂದಿದ್ದಾರೆ.

Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು, ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಿಸಿದರು!
Hijab Row what next? ಅನ್ನೋರಿಗೆ ಶಾಕ್​ ಕೊಟ್ಟ ಶಿಕ್ಷಕಿಯರು! ಮಾದರಿಯಾಗಬೇಕಿದ್ದ ಶಿಕ್ಷಕಿಯರೇ ಸ್ವತಃ ಹಿಜಾಬು ಧರಸಿದರು!
Follow us
TV9 Web
| Updated By: ಆಯೇಷಾ ಬಾನು

Updated on:Feb 14, 2022 | 1:03 PM

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​ ಧಾರಣೆ (Hijab Row) ಮಧ್ಯೆ ಮತ್ತೊಂದು ಆತಂಕಕಕಾರಿ ಬೆಳವಣಿಗೆ ಕಂಡುಬಂದಿದೆ. ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್​ ಧರಿಸುವ ವಿಷಯದಲ್ಲಿ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿ, ವಿಸ್ತೃತ ಪೀಠದ ಆದೇಶದವರೆಗೂ ಯಾರೂ ಧಾರ್ಮಿಕ ದಿರಿಸು ಹಾಕಿಕೊಂಡು ಶಾಲಾ ಕಾಲೇಜಿಗೆ ಬರುವಂತಿಲ್ಲ ಎಂದು ಹೇಳಿದೆ.

ಆದರೆ ಇದುವರೆಗೂ ನಿರ್ದಿಷ್ಟ ವಿದ್ಯಾರ್ಥಿನಿಯರಲ್ಲಿ ಮಾತ್ರ ಕಂಡುಬಂದಿದ್ದ ಈ ಪ್ರವೃತ್ತಿ ಇದೀಗ ಶಾಲಾ ಶಿಕ್ಷಕಿಯರಲ್ಲೂ (woman teacher) ಕಂಡುಬಂದಿದೆ. ಮಾದರಿ ನಡುವಳಿಕೆಯಿಂದ ವಿದ್ಯಾರ್ಥಿನಿಯರಿಗೆ ತಿಳಿಯ ಹೇಳಬೇಕಿದ್ದ ಶಿಕ್ಷಕಿಯರೇ ಹಿಜಾಬು ಧರಿಸಿ, ಶಾಲೆಗೆ ಬಂದಿದ್ದಾರೆ. ಮಂಡ್ಯ ಮತ್ತು ಕಲಬುರಗಿ ನಗರದಲ್ಲಿ (mandya and kalaburagi) ಈ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ. ಇದೂ ಸಾಲದು ಅಂತಾ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಟೋಪಿ ಧರಿಸಿ ಶಾಲಾ ಕೊಠಡಿಯೊಳಕ್ಕೆ ಬಂದಿದ್ದಾರೆ.

ಭಾರತದ ನಕ್ಷೆ ಬಿಡಸುತ್ತಿರೋ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಕೊಪ್ಪಳದ ಉರ್ದು ಶಾಲೆಯಲ್ಲಿ ತರಗತಿಯೊಳಕ್ಕೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಕ್ಲಾಸ್ ಇಲ್ಲದ ಹಿನ್ನೆಲೆಯಲ್ಲಿ ಸದರಿ ವಿದ್ಯಾರ್ಥಿನಿಯರು ಭಾರತದ ನಕ್ಷೆ ಬಿಡಿಸುತ್ತಿದ್ದಾರೆ. ಬಿಳಿ ಹಾಳೆಯಲ್ಲಿ ಭಾರತದ ನಕ್ಷೆ ಬಿಡಿಸಿ ಕೇಸರಿ, ಬಿಳಿ, ಹಸಿರು ಬಣ್ಣ ತುಂಬಿಸುತ್ತಿದ್ದಾರೆ.

ಹಿಜಾಬ್ ಧರಿಸಿ ಬಂದ ಶಾಸಕಿ ಖನೀಜ್ ಫಾತಿಮಾ: ವಿಧಾನಸೌಧದಲ್ಲಿ ಯಾವುದೇ ಡ್ರೆಸ್​ ಕೋಡ್​ ಇಲ್ಲ! ಈ ಹಿಂದೆ ಸವಾಲು ರೂಪದಲ್ಲಿ ಘೋಷಣೆ ಮಾಡಿದ್ದ ಶಾಸಕಿ ಖನೀಜ್ ಫಾತಿಮಾ ಹಿಜಾಬ್ ಧರಿಸಿ ವಿಧಾನಸಭೆಗೆ ಆಗಮಿಸಿದ್ದಾರೆ. ಖನೀಜ್ ಫಾತಿಮಾ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ. ಖನೀಜ್ ಫಾತಿಮಾ ಈ ಹಿಂದೆಯೂ ಹಿಜಾಬ್ ಧರಿಸಿ ಬರುತ್ತಿದ್ದರು. ವಿಧಾನಸೌಧದಲ್ಲಿ ಯಾವುದೇ ಡ್ರೆಸ್​ ಕೋಡ್ ಆಚರಣೆ, ನಿಯಮಾವಳಿ​ ಇಲ್ಲ ಎಂಬುದು ಗಮನಾರ್ಹ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹ ತಮ್ಮ ರಾಜ್ಯದಲ್ಲಿ ಆಚರಣೆಯಲ್ಲಿರುವ ಸಂಪ್ರದಾಯಕ್ಕೆ ಅನುಗುಣವಾಗಿ ವಿಶಿಷ್ಟ ಟೋಪಿ ಧರಿಸಿ ಬಂದಿದ್ದು, ಜಂಟಿ ಅಧಿವೇಶನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಹಿಜಾಬ್ ಧರಿಸಿ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿನಿಯರು, ಟೋಪಿ ಧರಿಸಿ ಕುಳಿತ ವಿದ್ಯಾರ್ಥಿಗಳು: ಯಾದಗಿರಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿರುವ ವಿದ್ಯಾರ್ಥಿನಿಯರು ಹೈಕೋರ್ಟ್ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿ, ಹಿಜಾಬ್ ಧರಿಸಿ ಕೊಠಡಿಯಲ್ಲಿ ಕುಳಿತಿದ್ದಾರೆ. ಇನ್ನು ವಿದ್ಯಾರ್ಥಿಗಳು ಟೋಪಿ ಧರಿಸಿ ಕುಳಿತಿದ್ದಾರೆ. ಇದು ಉರ್ದು ಮತ್ತು ಕನ್ನಡ ಮಾಧ್ಯಮದ ಶಾಲೆಯಾಗಿದೆ. ಉರ್ದು ಮಾಧ್ಯಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಟೋಪಿ ಧರಿಸಿ ಬಂದಿದ್ದಾರೆ. ಹಿಜಾಬ್ ಧರಿಸಿ ಕುಳಿತರೂ ಹಾಗೆಯೇ ಶಿಕ್ಷಕರು ಹಾಗೆಯೇ ಪಾಠ ಮಾಡುತ್ತಿದ್ದಾರೆ.

ಟಿವಿ9 ವರದಿ ಇಂಪ್ಯಾಕ್ಟ್, ಯಾದಗಿರಿ ‌ಎಸ್ ಪಿ ಶಾಲೆಗೆ ದೌಡು: ಯಾದಗಿರಿ ನಗರದ ಸರ್ಕಾರಿ ಉರ್ದು ಮತ್ತು ಕನ್ನಡ ಮಾಧ್ಯಮದ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿರುವ ಸುದ್ದಿ ಟಿವಿ9ನಲ್ಲಿ ಪ್ರಸಾರವಾಗುತ್ತಿದಂತೆ ಯಾದಗಿರಿ ‌ಎಸ್ ಪಿ ಡಾ. ಸಿ.ಬಿ. ವೇದಮೂರ್ತಿ ಶಾಲೆಗೆ ಬಂದಿದ್ದಾರೆ. ಹೈಕೋರ್ಟ್​ ಆದೇಶ ಇದ್ದರೂ ಮಕ್ಕಳು ಹಿಜಾಬ್ ಧರಿಸಿ ಬಂದಿರುವ ವಿಚಾರ ತಿಳಿದು ಬಂದಿತು. ಆದ್ರೆ ಮಕ್ಕಳಿಗೆ ಹಿಜಾಬ್ ತೆಗೆಯಿರಿ ಎಂದು ಹೇಳಿದಾಗ ತೆಗೆದಿದ್ದಾರೆ. ಇದು ಉರ್ದು ಶಾಲೆಯಾಗಿದ್ದರಿಂದ ಮೊದಲಿನಿಂದ್ಲೂ ಹಾಕಿಕೊಂಡು ಬರ್ತಾಯಿದ್ರು. ಆದೇಶದ ಬಗ್ಗೆ ಮಕ್ಕಳಿಗೆ ಮಾಹಿತಿ ಇರಲಿಲ್ಲ, ಹೀಗಾಗಿ ಹಾಕಿಕೊಂಡು ಬಂದಿದ್ದಾರೆ. ನಾಳೆಯಿಂದ ಮಕ್ಕಳು ಹಿಜಾಬ್ ಧರಿಸಿ ಬಾರದ ರೀತಿಯಲ್ಲಿ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮಂಡ್ಯದಲ್ಲಿ ರೋಟರಿ ವಿದ್ಯಾಸಂಸ್ಥೆಯಲ್ಲಿ ಬುರ್ಕಾ ಶಿಕ್ಷಕಿ: ಮಂಡ್ಯ ನಗರದ ರೋಟರಿ ವಿದ್ಯಾಸಂಸ್ಥೆಗೆ ಬಂದ ಶಿಕ್ಷಕಿಯೊಬ್ಬರು ಬುರ್ಕಾ ಹಾಕಿಕೊಂಡು ಬಂದಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಗೇಟ್‌ನಲ್ಲಿ ಶಿಕ್ಷಕಿಯನ್ನು ತಡೆದಿದ್ದಾರೆ. ಹೈಕೋರ್ಟ್​ ಮಧ್ಯಂತರ ಆದೇಶದ ಅನುಸಾರ ಶಾಲೆ ಹೊರಗೆ ಬುರ್ಕಾ ತೆಗೆದು ಒಳಹೋಗುವಂತೆ ಸೂಚನೆ ನೀಡಿದ್ದಾರೆ. ಬಳಿಕ ಗೇಟ್‌ನಲ್ಲೇ ಬುರ್ಕಾ ತೆಗೆದು ಒಳಗೆಹೋಗಿದ್ದಾರೆ ಆ ಶಿಕ್ಷಕಿ.

ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ ಶಿಕ್ಷಕಿಯರು: ಕಲಬುರಗಿಯಲ್ಲಿಯೂ ಶಾಲಾ ಶಿಕ್ಷಕಿಯರು ಹಿಜಾಬ್ ಧರಿಸಿಯೇ ಬಂದಿದ್ದಾರೆ. ಬಂದವರೆ ಸ್ಟಾಫ್​​ ರೂಮ್ ನಲ್ಲಿ ಕುಳಿತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೈಕೋರ್ಟ್​ ಮಧ್ಯಂತರ ಆದೇಶದ ಪಾಲನೆ ಬಗ್ಗೆ ಶಾಲಾ ಆಡಳಿತ ಮಂಡಳಿ ಆಲೋಚಿಸುತ್ತಿದೆ. ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ವಿದ್ಯಾರ್ಥಿನಿಯರು ಧರಿಸಿದ್ದ ಹಿಜಾಬ್ ಅನ್ನು ಶಿಕ್ಷಕರು ತೆಗೆಸಿದ್ದಾರೆ. ಕೊಪ್ಪಳದ ಮೌಲಾನಾ ಆಜಾದ್ ಶಾಲೆಯಲ್ಲಿ ಈ ಪ್ರಸಂಗ ನಡೆದಿದೆ.

ಹಾಸನ ಶಾಲೆಯಲ್ಲೂ ಹಿಜಾಬ್ ಕಲರವ: ಹಾಸನದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗೆ ಬಂದಿದ್ದಾರೆ. ಬಳಿಕ, ಕ್ಲಾಸ್ ರೂಂ ಒಳಗೆ ಹಿಜಾಬ್ ಬಿಚ್ಚಿಟ್ಟಿದ್ದಾರೆ. ವಿದ್ಯಾರ್ಥಿನಿಯರು ಯಾರೂ ಪ್ರಶ್ನೆ ಮಾಡದಿದ್ದರೂ ತಾವೇ ಸ್ವಯಂ ಸ್ಪೂರ್ತಿಯಿಂದ ಹಿಜಾಬ್ ತೆಗೆದಿರುವುದು ಗಮನಾರ್ಹವಾಗಿದೆ. ಜಿಲ್ಲಾಡಳಿತವು ಶಾಲೆಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಿ, ಮುನ್ನೆಚ್ಚರಿಕೆ ವಹಿಸಿದೆ.

ಶಿವಮೊಗ್ಗದಲ್ಲಿ ಟೋಪಿ ಧರಿಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು: ವಿದ್ಯಾರ್ಥಿಗಳಿಂದಲೂ ಹೈಕೋರ್ಟ್ ಆದೇಶ ಉಲ್ಲಂಘಿಸಿರುವುದುಬೆಕಿಗೆ ಬಂದಿದೆ. ಶಿವಮೊಗ್ಗ ಬಿ ಎಚ್ ರಸ್ತೆಯ ಸರ್ಕಾರಿ ಪಬ್ಲಿಕ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಟೋಪಿ ಧರಿಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಟೋಪಿ ಹಾಕಿಕೊಂಡು ಪರೀಕ್ಷೆ ಬರೆಯುತ್ತಿರುವ ದೃಶ್ಯಗಳು ಟಿವಿ9 ಕ್ಯಾಮೆರಾಗೆ ಕಂಡು ಬಂದಿದೆ. ಟಿವಿ9 ವರದಿ ಮಾಡುತ್ತಿದ್ದಂತೆ ಶಾಲೆ ಸಿಬ್ಬಂದಿ ವಿದ್ಯಾರ್ಥಿಗಳು ಧರಿಸಿದ್ದ ಟೋಪಿಗಳನ್ನು ತೆಗೆಸಿದ್ದಾರೆ. ಆದರೆ ಶಿವಮೊಗ್ಗದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಿಡದ ಹಿನ್ನೆಲೆ 13 ವಿದ್ಯಾರ್ಥಿನಿಯರು SSLC ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೆ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: Honesty at KIAL: ಏರ್‌ಪೋರ್ಟ್ನಲ್ಲಿ ಪ್ರಯಾಣಿಕ ಮರೆತುಹೋಗಿದ್ದ ಹಣದ ಬ್ಯಾಗನ್ನು ವಾಪಸ್ ನೀಡಿ, ಪ್ರಾಮಾಣಿಕತೆ ತೋರಿದ ಸಿಬ್ಬಂದಿ

ಇದನ್ನೂ ಓದಿ: ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ನರ್ಸ್; ಮೆದುಳು ನಿಷ್ಕ್ರಿಯವಾಗಿರುವ ಯುವತಿಯಿಂದ ಅಂಗಾಗ ದಾನ

Published On - 10:05 am, Mon, 14 February 22

VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್