ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ನರ್ಸ್; ಮೆದುಳು ನಿಷ್ಕ್ರಿಯವಾಗಿರುವ ಯುವತಿಯಿಂದ ಅಂಗಾಗ ದಾನ
ಆಸ್ಪತ್ರೆಗೆ ಗಾನವಿಯ ಯಕೃತ್, 2 ಕಿಡ್ನಿ, ಹೃದಯನಾಳಗಳು, 2 ಕಾರ್ನಿಯಾ ದಾನ ಮಾಡಿದ್ದಾರೆ. ಕುಟುಂಬಸ್ಥರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯವಾಗಿರುವ ಯುವತಿ ಅಂಗಾಗ (Organs) ದಾನ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯಲ್ಲಿ ನಡೆದಿದೆ. ಕೆರೆಮನೆಯ ಗಾನವಿಗೆ ಬ್ರೈನ್ ಡೆಡ್ (Brain dead) ಆಗಿತ್ತು. ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಹೀಗಾಗಿ ಅಂಗಾಗ ದಾನ ಮಾಡಲು ಯುವತಿಯ ಪೋಷಕರು( Family) ನಿರ್ಧಾರ ಮಾಡಿದ್ದಾರೆ. ಆ ಮೂಲಕ ಗಾವವಿ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕೆರೆಮನೆಯ ಗಾನವಿ, ಕೃಷ್ಣೇಗೌಡ ಹಾಗೂ ಲೀಲಾವತಿ ದಂಪತಿಯ ಎರಡನೇ ಪುತ್ರಿ. ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಗಾನವಿ. ಫೆಬ್ರವರಿ 8ರಂದು ಕೆಲಸ ಮಾಡುವಾಗ ಕುಸಿದುಬಿದ್ದು ಜ್ಞಾನ ತಪ್ಪಿದರು. ಫೆಬ್ರವರಿ 12ರವರೆಗೆ ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಹೀಗಾಗಿ ಮೆದುಳು ನಿಷ್ಕ್ರಿಯವಾಗಿರುವುದನ್ನು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಗಾನವಿಯ ಯಕೃತ್, 2 ಕಿಡ್ನಿ, ಹೃದಯನಾಳಗಳು, 2 ಕಾರ್ನಿಯಾ ದಾನ ಮಾಡಿದ್ದಾರೆ. ಕುಟುಂಬಸ್ಥರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು; ಅಪಘಾತದಲ್ಲಿ ವ್ಯಕ್ತಿ ದವಡೆ ಹೊಕ್ಕಿದ ಕಟ್ಟಿಗೆಯ ತುಂಡು
ಕೋಲಾರ: ಆರತಕ್ಷತೆ ವೇಳೆ ಕುಸಿದುಬಿದ್ದ ಮದುಮಗಳ ಬ್ರೈನ್ ಡೆಡ್; ಅಂಗಾಂಗ ದಾನ ಮಾಡಿ ಸಾರ್ಥಕತೆ- ಘಟನೆ ನಡೆದದ್ದೇನು?