ಭಾಷಣದ ಮೂಲಕ ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ
ಇಂದು (ಫೆಬ್ರವರಿ14) ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಂಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ರಾಜ್ಯಪಾಲರಿಗೆ ಭಾಷಣ ಬರೆದುಕೊಡುವ ಪದ್ಧತಿ ಇದೆ. ಈ ಭಾಷಣದ ಮೂಲಕ ರಾಜ್ಯಪಾಲ ಟಿ.ಸಿ.ಗೆಹ್ಲೋಟ್ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೋಮವಾರ ಆರೋಪಿಸಿದ್ದಾರೆ. 116 ಪ್ಯಾರಾಗಳ ಭಾಷಣದಲ್ಲಿ ಬಹುತೇಕ ಸುಳ್ಳೇ ಇದೆ. ಕೊರೊನಾ ಸಾವಿನ ಲೆಕ್ಕವನ್ನು ಕೂಡ ತಪ್ಪು ನೀಡಿದ್ದಾರೆ. ನನ್ನ ಪ್ರಕಾರ 4 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ವಿವಾದವನ್ನು ಶುರು ಮಾಡಿದ್ದೇ ಇವರು. ಕೇಸರಿ ಶಾಲುಗಳನ್ನು ಮಕ್ಕಳಿಗೆ ಹಾಕಿ ಕಳಿಸಿದ್ದು ಇವರೇ. ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂದು (ಫೆಬ್ರವರಿ14) ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಂಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೊರೊನಾ ಸಂಧರ್ಭದಲ್ಲಿ ಬಹಳ ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ಸುಳ್ಳು ಹೇಳಿಸಿದ್ದಾರೆ. ಮೊದಲು ಹಾಗೂ ಎರಡನೇ ಅಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಸಾವಿರಾರು ಜನ ಪ್ರಾಣ ಬಿಟ್ರು. ನನ್ನ ಪ್ರಕಾರ ನಾಲ್ಕು ಲಕ್ಷ ಜನ ಸಾವನ್ನಪ್ಪಿದ್ದಾರೆ. ಸತ್ತವರ ಸಂಖ್ಯೆಯನ್ನ ಸರ್ಕಾರ ಸುಳ್ಳು ಹೇಳಿದೆ ಎಂದು ಹೇಳಿದ್ದಾರೆ. ನಮ್ಮ ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿದ್ದೀರಿ. ಬಾಪೂಜಿ ಸೇವಾ ಕೇಂದ್ರಗಳನ್ನ ಗ್ರಾಮ ಒಮ್ ಎಂದು ಮರುನಾಮಕರಣ ಮಾಡಿದ್ದೀರಿ. ಕೊರೊನಾದಲ್ಲಿ ಸತ್ತವರಿಗೆ ಸಾಂತ್ವಾನ ಹೇಳಲು ಕನಿಷ್ಟ ಕಾರ್ಯಕ್ರಮಗಳನ್ನ ಆಯೋಜಿಸಿಲ್ಲ. ನಿರುದ್ಯೋಗದ ಬಗ್ಗೆ ಉಲ್ಲೇಖ ಮಾಡಿಲ್ಲ. ರಾಜ್ಯ, ದೇಶ ಸಾಲದಲ್ಲಿ ಇದೆ, ಹಣಕಾಸಿನ ಸ್ಥಿತಿ ಗತಿ ಬಗ್ಗೆ ಉಲ್ಲೇಖವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಇದೆಲ್ಲ ಒಂದು ಸುಳ್ಳಿನ ಕಂತೆ. ಈ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ. ಇವ್ರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಜನರ ಆಶಿರ್ವಾದ ಪಡೆದು ಬಂದಿರುವವರಲ್ಲ ಇವರು. ಇದೊಂದು ನಿಶ್ಕ್ರಿಯ ಸರ್ಕಾರ, ಭ್ರಷ್ಟ ಸರ್ಕಾರ. ನಾವು ಒಬ್ಬರಿಗೆ ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆವು. ಆದ್ರೆ ಇವಾಗ ಕುಟುಂಬಕ್ಕೆ ಐದು ಕೆಜಿ, ಇಬ್ಬರಿಗೆ ಒಂದು ಕೆಜಿ ಅಕ್ಕಿ ಅಂತೆ. ಹಿಜಾಬ್ ಪ್ರಕರಣ ಜೊತೆಗೆ ನಾರಾಯಣ ಗುರು ಟ್ಯಾಬ್ಲೋ ಕೈಬಿಟ್ಟಿದ್ದಕ್ಕೆ ನಾವು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Hijab Row: ಅಧಿವೇಶನದಲ್ಲಿ ಹಿಜಾಬ್ ವಿವಾದ ಪ್ರಸ್ತಾಪ ಮಾಡಬೇಕು, ಬೇಡಾ: ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ತಿಕ್ಕಾಟ!
ಇದನ್ನೂ ಓದಿ: ಗೋವಾ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದ ಕರವೇ! ಡಿಕೆಶಿ, ಸಿದ್ದರಾಮಯ್ಯ ಮನೆಗಳಿಗೆ ಮುತ್ತಿಗೆ
Published On - 2:51 pm, Mon, 14 February 22