Hijab Row: ಅಧಿವೇಶನದಲ್ಲಿ ಹಿಜಾಬ್ ವಿವಾದ ಪ್ರಸ್ತಾಪ ಮಾಡಬೇಕು, ಬೇಡಾ: ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ತಿಕ್ಕಾಟ!

ಹಿಜಾಬ್ ವಿಚಾರವಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಮುಸ್ಲಿಂ ಸಮುದಾಯದ ಪರ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಹೀಗಿರುವಾಗ ಸದನದಲ್ಲಿ ಪ್ರಸ್ತಾಪಿಸದಿದ್ದರೆ ಹೇಗೆಂಬ ವಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರದ್ದಾಗಿದೆ.

Hijab Row: ಅಧಿವೇಶನದಲ್ಲಿ ಹಿಜಾಬ್ ವಿವಾದ ಪ್ರಸ್ತಾಪ ಮಾಡಬೇಕು, ಬೇಡಾ: ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ತಿಕ್ಕಾಟ!
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ
Follow us
TV9 Web
| Updated By: preethi shettigar

Updated on:Feb 14, 2022 | 1:57 PM

ಬೆಂಗಳೂರು: ಹಿಜಾಬ್ ವಿಚಾರವಾಗಿ ಈಗಾಗಲೇ ರಾಜ್ಯಾದ್ಯಂತ ಚರ್ಚೆಗಳಾಗುತ್ತಿವೆ. ಹೀಗಿರುವಾಗಲೇ ಸದನದಲ್ಲಿ ಹಿಜಾಬ್(Hijab) ವಿವಾದ ಪ್ರಸ್ತಾಪ ಮಾಡುವ ವಿಚಾರವಾಗಿ ಕಾಂಗ್ರೆಸ್ ನಾಯಕರ(Congress leader) ಮಧ್ಯೆ ತಿಕ್ಕಾಟ ಶುರುವಾಗಿದೆ. ಮಾಜಿ ಸಚಿವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ತಿಕ್ಕಾಟ ಶುರುವಾಗಿದೆ. ಅಧಿವೇಶನದಲ್ಲಿ ಹಿಜಾಬ್ ವಿವಾದ ಪ್ರಸ್ತಾಪಿಸಲು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಒಲವು ತೋರಿದರೆ, ಸದನದಲ್ಲಿ ಪ್ರಸ್ತಾಪಿಸುವುದು ಬೇಡವೆಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಹಿಜಾಬ್ ವಿಚಾರ ಪ್ರಸ್ತಾಪಿಸಿದರೆ ಪಕ್ಷಕ್ಕೆ ಹೊಡೆತ ಬೀಳಲಿದೆ. ಇದನ್ನು ಪ್ರಸ್ತಾಪಿಸಿದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ. ಇದರಿಂದ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಕೇವಲ ಈಶ್ವರಪ್ಪ ಹೇಳಿಕೆಯನ್ನು ಮಾತ್ರ ಪ್ರಸ್ತಾಪಿಸೋಣ. ಹಿಜಾಬ್ ವಿವಾದ ಪ್ರಸ್ತಾಪಿಸುವುದು ಬೇಡ ಎಂದದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಹಿಜಾಬ್ ವಿಚಾರವಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಮುಸ್ಲಿಂ ಸಮುದಾಯದ ಪರ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಹೀಗಿರುವಾಗ ಸದನದಲ್ಲಿ ಪ್ರಸ್ತಾಪಿಸದಿದ್ದರೆ ಹೇಗೆಂಬ ವಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರದ್ದಾಗಿದೆ.

ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲು ಚಿಂತನೆ ನಡೆದಿದ್ದು, ಸಿಎಲ್‌ಪಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲು ಸದ್ಯ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿರ್ಧಾರ ಮಾಡಿದ್ದಾರೆ.

ಹುಬ್ಬಳ್ಳಿ: ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತೆಂದು ನಾನು ಹೇಳಿಲ್ಲ: ಶಾಸಕ ಜಮೀರ್ ಅಹ್ಮದ್

ಹುಬ್ಬಳ್ಳಿ: ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಇದೀಗ ಯುಟರ್ನ್ ಹೊಡೆದಿದ್ದಾರೆ. ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತೆಂದು ನಾನು ಹೇಳಿಲ್ಲ. ಹಿಜಾಬ್​ನಿಂದ ಹೆಣ್ಣು ಮಕ್ಕಳಿಗೆ ಸೇಫ್ಟಿ ಎಂದು ಹೇಳಿದ್ದೇನೆ. ಹಿಜಾಬ್ ಧರಿಸಿದರೆ ಹೆಣ್ಣು ಮಕ್ಕಳ ಬ್ಯೂಟಿ ಕಾಣುವುದಿಲ್ಲ. ಅವರಿಗೆ ಸೇಫ್ಟಿ ಇರುತ್ತೆ ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ಅಂತ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಹಾಕಿಕೊಂಡರೆ ಒಳ್ಳೆಯದು ಅಂತ ನಾನು ಹೇಳುತ್ತೇನೆ. ಬೇರೆಯವರ ಟೀಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅಥವಾ ಬೇರೆ ದೇಶದ ಜೊತೆ ಹೋಲಿಕೆ ಕೂಡ ಮಾಡಿಲ್ಲ. ನಮ್ಮ ದೇಶದಲ್ಲಿ ರೇಪ್ ರೇಟ್ ಜಾಸ್ತಿಯಿದೆ. ಬೇಕಾದರೆ ನೋಡಿ. ಅದಕ್ಕೆ ನಾನು ಅವರ ಸೇಫ್ಟಿ ಎನ್ನೋ ಅರ್ಥದಲ್ಲಿ ಹೇಳಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್  ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್​ ಇಸ್ಲಾಂನಲ್ಲಿ ಅತ್ಯಂತ ಮುಖ್ಯವೆಂದು ಕುರಾನ್​ ಹೇಳಿಲ್ಲ, ಸುಮ್ಮನೆ ಹೋಗಿ ವಿದ್ಯೆ ಕಲಿಯಿರಿ: ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್

Hijab Row Opinion: ಹಿಜಾಬ್​ ಧರಿಸಲೇಬೇಕು ಅಂತೆಲ್ಲೂ ಇಲ್ಲ, ಹಾಗಂತ ಧರಿಸುವ ಸ್ವಾತಂತ್ರ್ಯ ಕಸಿಯುವುದೂ ಸರಿಯಲ್ಲ

Published On - 1:32 pm, Mon, 14 February 22