Hijab Row: ಹಿಜಾಬ್ ವಿವಾದ -ಗೊಂದಲಕ್ಕೀಡಾದ ವಿದ್ಯಾಸಾಗರ ಶಾಲೆ! ಅನಾರೋಗ್ಯದ ಕಾರಣ ನೀಡಿ ವಿದ್ಯಾಸಾಗರ ಶಾಲೆ ಶಿಕ್ಷಕಿ ರಾಜೀನಾಮೆ

ವಿದ್ಯಾಸಾಗರ ಶಾಲೆಯ ಪ್ರಕರಣ ಗೊಂದಲದ ಗೂಡಾಗಿದೆ. ಶಾಲೆಯ ಸಭೆ ಬಳಿಕ ಶಾಲೆಯ ಕಾರ್ಯದರ್ಶಿ ರಾಜು ಮಾತು ಬದಲಿಸಿದ್ದಾರೆ. ರಾಜು ನಿನ್ನೆ ಹೇಳಿದೊಂದು ಇವತ್ತು ಹೇಳುತ್ತಿರೋದೊಂದು. ಶಾಲಾ ಆಡಳಿತ ಮಂಡಳಿ ಯೂ ಟರ್ನ್ ಹೊಡೆದಿದೆ.

Hijab Row: ಹಿಜಾಬ್ ವಿವಾದ -ಗೊಂದಲಕ್ಕೀಡಾದ ವಿದ್ಯಾಸಾಗರ ಶಾಲೆ! ಅನಾರೋಗ್ಯದ ಕಾರಣ ನೀಡಿ ವಿದ್ಯಾಸಾಗರ ಶಾಲೆ ಶಿಕ್ಷಕಿ ರಾಜೀನಾಮೆ
ವಿದ್ಯಾಸಾಗರ ಪಬ್ಲಿಕ್ ಶಾಲೆ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೋಷಕರು (ಸಂಗ್ರಹ)
Follow us
TV9 Web
| Updated By: ಆಯೇಷಾ ಬಾನು

Updated on: Feb 14, 2022 | 2:50 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಚಂದ್ರಾ ಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದ್ದಕ್ಕೆ ಪೋಷಕರು ಶಿಕ್ಷಕರ ಜೊತೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಈ ಸಂಬಂಧ ಕೆಲವು ಸಂಘಟನೆಗಳು ಸಹ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸದ್ಯ ಅನಾರೋಗ್ಯ ಕಾರಣ ನೀಡಿ ಶಿಕ್ಷಕಿ ಶಶಿಕಲಾ ರಾಜೀನಾಮೆ ನೀಡಿದ್ದಾರೆ ಎಂದು ಶಶಿಕಲಾ ರಾಜೀನಾಮೆ ಬಗ್ಗೆ ವಿದ್ಯಾಸಾಗರ್ ಶಾಲೆ ಕಾರ್ಯದರ್ಶಿ ಡಾ.ರಾಜು ಸ್ಪಷ್ಟನೆ ನೀಡಿದ್ದಾರೆ. ನನಗೆ ಆರೋಗ್ಯ ಸರಿ ಇಲ್ಲ. ಕೆಲಸ ಮಾಡೋಕೆ ಆಗೋದಿಲ್ಲ ಅಂತ ಶಿಕ್ಷಕಿ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಯೂ ಟರ್ನ್ ಹೊಡೆದ ಶಾಲಾ ಆಡಳಿತ ಮಂಡಳಿ ಇನ್ನು ವಿದ್ಯಾಸಾಗರ ಶಾಲೆಯ ಪ್ರಕರಣ ಗೊಂದಲದ ಗೂಡಾಗಿದೆ. ಶಾಲೆಯ ಸಭೆ ಬಳಿಕ ಶಾಲೆಯ ಕಾರ್ಯದರ್ಶಿ ರಾಜು ಮಾತು ಬದಲಿಸಿದ್ದಾರೆ. ರಾಜು ನಿನ್ನೆ ಹೇಳಿದೊಂದು ಇವತ್ತು ಹೇಳುತ್ತಿರೋದೊಂದು. ಶಾಲಾ ಆಡಳಿತ ಮಂಡಳಿ ಯೂ ಟರ್ನ್ ಹೊಡೆದಿದೆ. ನಿನ್ನೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ರಾಜು, ವಿದ್ಯಾಸಾಗರ ಶಾಲೆಯಲ್ಲಿ ನಡೆದ ವಿವಾದ ಷಡ್ಯಂತ್ರ. ಹೊರಗಡೆಯಿಂದ ಬಂದವರು ಗಲಾಟೆ ಮಾಡಿದ್ರು. ಶಿಕ್ಷಕಿಯ ತಪ್ಪಿಲ್ಲ ಎಂದಿದ್ದರು. ಆದ್ರೆ ಇಂದು ಸಭೆಯ ಬಳಿಕ ಉಲ್ಟಾ ಹೊಡೆದಿದ್ದಾರೆ. ಶಿಕ್ಷಕಿಯನ್ನು ಸಭೆಗೆ ಅಹ್ವಾನ ಮಾಡಿದ್ದೇವೆ. ಆಕೆ ಬರಲ್ಲ ಅಂದ್ರು. ನೇರವಾಗಿ ಮಾತನಾಡುವುದಿತ್ತು. ಆಕೆ ಬಂದಿಲ್ಲ ರಾಜೀನಾಮೆ ಕೊಟ್ಟಿದ್ದಾರೆ. ಮುಸ್ಲಿಂ ಮುಖಂಡರು ತುಂಬಾ ಬೇಸರ ಪಟ್ಟಿದ್ದಾರೆ. ಧರ್ಮದ ಬಗ್ಗೆ ಯಾರೇ ಮಾತನಾಡಿದ್ರೂ ತಪ್ಪೇ ಎಂದ ರಾಜು ತಿಳಿಸಿದ್ದಾರೆ. ಬೋರ್ಡ್ ನಲ್ಲಿ ಅಕ್ಷರ ಬರೆದಿದ್ದು ಗಲಾಟೆಗೆ ಕಾರಣವಾಗಿತ್ತು. ಹೊರಗಡೆಯಿಂದ ಬಂದು ಗಲಾಟೆ ಮಾಡಿದ್ರು ಅಂತಾ ನಿನ್ನೆ ಅನಿಸಿತು ಆದ್ರೇ ಈಗ ಎಲ್ಲರೂ ಇವ್ರೇ ಸ್ಥಳೀಯ ರೇ ಎಂದು ರಾಜು ಹೇಳಿದ್ದಾರೆ.

ಇನ್ನು ಮತ್ತೊಂದೆಡೆ ಮುಸ್ಲಿಂ ಮುಖಂಡ ನ್ಯಾಮತುಲ್ಲಾ ಈ ಬಗ್ಗೆ ಮಾತನಾಡಿದ್ದು, ಮೊನ್ನೆ ಶಿಕ್ಷಕಿ ಹಿಜಾಬ್ ಬಗ್ಗೆ ಹೇಳಿಲ್ಲ. ಆದ್ರೆ ಇಸ್ಲಾಂ ಧರ್ಮದ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ. ಇದನ್ನು ಕೇಳೋಕೆ ನಾವೆಲ್ಲ ಹೋಗಿದ್ವಿ. ಯಾರು ಹೊರಗಡೆಯಿಂದ ಬಂದಿಲ್ಲ. ಟೀಚರನ್ನು ತೆಗೆಯೋಕೆ ನಾವು ಹೇಳಿದ್ದೀವಿ. ಪುನೀತ್ ಕೆರೆಹಳ್ಳಿ ಹಾಗೂ ಟೀಚರ್ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದ್ದೇವೆ. ಪುನೀತ್ ಹೊರಗಡೆಯವರು ಯಾಕೆ ಬರಬೇಕು, ಅದಕ್ಕಾಗಿ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದೇವೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದೇ ಇದ್ರೇ ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಭೇಟಿ ಮಾಡಿ ನಾವು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದ್ರು.

ಇದನ್ನೂ ಓದಿ: ದಾವಣಗೆರೆ: ಸರಳ ಪ್ರಶ್ನೆಗಳಿಗೂ ಉತ್ತರಿಸದ ಮಕ್ಕಳು; ಇಂಗ್ಲಿಷ್ ಶಿಕ್ಷಕನಿಗೆ ನೋಟಿಸ್ ನೀಡಲು ಡಿಸಿ ಸೂಚನೆ