AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ, ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು; ಡಿಕೆ ಶಿವಕುಮಾರ್ ಆಗ್ರಹ

ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಇದನ್ನೆಲ್ಲಾ ಮುಚ್ಚಿಹಾಕಲು ಮಕ್ಕಳನ್ನು ಎತ್ತಿ ಕಟ್ಟುತ್ತಿದ್ದಾರೆ.

ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ, ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು; ಡಿಕೆ ಶಿವಕುಮಾರ್ ಆಗ್ರಹ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
TV9 Web
| Edited By: |

Updated on:Feb 14, 2022 | 2:56 PM

Share

ಬೆಂಗಳೂರು: ಸಚಿವ ಈಶ್ವರಪ್ಪ (KS Eshwarappa) ರಾಷ್ಟ್ರಧ್ವಜಕ್ಕೆ (Flag) ಅಪಮಾನ ಮಾಡಿದ್ದಾರೆ ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಸಚಿವ ಸಂಪುಟದಿಂದ ಕೈಬಿಡಬೇಕು ಅಂತ ಆಗ್ರಹಿಸಿದ್ದಾರೆ. ರಾಷ್ಟ್ರಧ್ವಜದ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ನಾವು ಸುಮ್ಮನೆ ಕೂರೂವುದಕ್ಕೆ ಸಾಧ್ಯವೇ? ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಖಂಡಿತ ಇದರ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಅಂತ ಡಿಕೆಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಇದನ್ನೆಲ್ಲಾ ಮುಚ್ಚಿಹಾಕಲು ಮಕ್ಕಳನ್ನು ಎತ್ತಿ ಕಟ್ಟುತ್ತಿದ್ದಾರೆ. ಹೀಗಾಗಿ ನಾವು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದೆವು. ಪೊಲೀಸ್ ಸರ್ಕಾರಿ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದೆ. ಅವರ ಪಾರ್ಟಿಯವರ ಮೇಲೆ ಕೇಸ್ ಹಾಕಲ್ಲ. ರಾಜ್ಯ ಸರ್ಕಾರ ಇಬ್ಬಂದಿತನವನ್ನು ತೋರುತ್ತಿದೆ ಅಂತ ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದರು.

ಮುಂದುವರಿದು ಮಾತನಾಡಿದ ಶಿವಕುಮಾರ್, ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೊದಲೇ ಹೇಳಿದ್ದೆ ಮಾತನಾಡಬಾರದು ಅಂತಾ. ಆದರೂ ಕೆಲವರು ಮಾತನಾಡಿದ್ದಾರೆ, ಜಮೀರ್ ತಮ್ಮ ಹೇಳಿಕೆಯನ್ನ ವಾಪಸ್ ಪಡೆಯಲು ಹೇಳುತ್ತೇನೆ ಅಂತ ತಿಳಿಸಿದರು.

ಕುಮಾರಸ್ವಾಮಿಗೆ ಶಿವಕುಮಾರ್ ಟಾಂಗ್: ಎಸ್‌ಪಿಗೆ ಎಚ್ಚರಿಕೆ ನೀಡುವಾಗ ಕನಕಪುರದವರ ರೀತಿ ಮಾತನಾಡುವುದು ನಮಗೂ ಬರುತ್ತೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ದೇವರು ಒಳ್ಳೆಯದು ಮಾಡಲಿ. ಅವರು ಕನಕಪುರದವರಂತೆ ಕಲಿತುಕೊಳ್ಳಲಿ. ನನ್ನ ಜಮೀನಿನಲ್ಲಿ ಬಂಡೆ ಇದೆ ಅದನ್ನು ಹೊಡೆಯುತ್ತೇನೋ, ಮಾರುತ್ತೆನೋ ಅದು ನನಗೆ ಬಿಟ್ಟಿದ್ದು. ಕದ್ದು ಮಾಡಿದರೆ ಪೊಲೀಸರಿದ್ದಾರೆ. ಸರ್ಕಾರವಿದೆ. ಈ ಹಿಂದೆ ಕೇಸ್ ಹಾಕಿದ್ದಾರೆ. ಈಗಲೂ ತನಿಖೆ ಮಾಡಲಿ ಯಾರು ಬೇಡ ಎಂದಿದ್ದಾರೆ ಅಂತ ಕೇಳಿದರು.

ಇದನ್ನೂ ಓದಿ

ಕೊವಿಡ್ ಸಾಂಕ್ರಾಮಿಕದ ವೇಳೆ ಜನರು ಹುಡುಕುತ್ತಿರುವ ಟಾಪ್ 10 ಉದ್ಯೋಗಗಳು ಯಾವುವು? ಗೂಗಲ್ ಸಮೀಕ್ಷೆ ಹೇಳುತ್ತಿರುವುದೇನು?

PM Kisan Samman Nidhi: ಒಂದು ಕುಟುಂಬದಲ್ಲಿ ಎಷ್ಟು ಮಂದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಯೋಜನ ಪಡೆಯಬಹುದು?

Published On - 2:52 pm, Mon, 14 February 22