Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan Samman Nidhi: ಒಂದು ಕುಟುಂಬದಲ್ಲಿ ಎಷ್ಟು ಮಂದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಯೋಜನ ಪಡೆಯಬಹುದು?

Pradhan Mantri Kisan Samman Nidhi Yojana: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತ ಕುಟುಂಬದ ಎಷ್ಟು ಸದಸ್ಯರು ಅನುಕೂಲ ಪಡೆಯಬಹುದು ಎಂಬ ಬಗ್ಗೆ ವಿವರ ಈ ಲೇಖನದಲ್ಲಿ ಇದೆ.

PM Kisan Samman Nidhi: ಒಂದು ಕುಟುಂಬದಲ್ಲಿ ಎಷ್ಟು ಮಂದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪ್ರಯೋಜನ ಪಡೆಯಬಹುದು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Feb 14, 2022 | 1:09 PM

ಕೇಂದ್ರ ಸರ್ಕಾರವು ಕಳೆದ ತಿಂಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಫಲಾನುಭವಿಗಳಿಗೆ 10ನೇ ಕಂತನ್ನು ಬಿಡುಗಡೆ ಮಾಡಲಾಗಿದೆ. ಕೃಷಿಕರು pmkisan.gov.in ಅಧಿಕೃತವಾದ ವೆಬ್​ಸೈಟ್​ನಲ್ಲಿ ಎಲ್ಲ ಮಾಹಿತಿಯನ್ನು ಪರಿಶೀಲಿಸಬಹುದು. ಅಪ್​ಡೇಟ್ಸ್​ ಪ್ರಕಾರ, ಅರ್ಹ ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ ವರ್ಷಕ್ಕೆ ರೂ. 6000 ಹಣಕಾಸು ಅನುಕೂಲ ದೊರೆಯಲಿದೆ. ಕುಟುಂಬದಲ್ಲಿ ಎಷ್ಟು ಸದಸ್ಯರು ಬೆನಿಫಿಟ್ ಕ್ಲೇಮ್​ ಮಾಡಬಹುದು ಗೊತ್ತೆ? ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅನುಕೂಲದ ಭಾಗವಾಗಿ ಕೇಂದ್ರ ಸರ್ಕಾರದಿಂದ ಕುಟುಂಬ ಅಂದರೆ ಏನು ಎಂಬ ಬಗ್ಗೆ ವ್ಯಾಖ್ಯಾನ ನೀಡಲಾಗಿದೆ. ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು ಒಳಗೊಂಡಿರುವುದನ್ನು ಕುಟುಂಬ ಎನ್ನಲಾಗುತ್ತದೆ. ಆದರೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ರೈತರ ಕುಟುಂಬಗಳನ್ನು ಗುರುತಿಸಲಾಗುತ್ತದೆ. ಮಾರ್ಗದರ್ಶಿ ಸೂತ್ರದ ಪ್ರಕಾರ, ಕುಟುಂಬದ ಸದಸ್ಯರ ಪೈಕಿ ಒಬ್ಬರು ಇದರ ಅನುಕೂಲ ಪಡೆಯಬಹುದು ಮತ್ತು ಗಂಡ ಹಾಗೂ ಹೆಂಡತಿ ಇಬ್ಬರಿಗೂ ಈ ಅನುಕೂಲ ಸಿಗಲ್ಲ.

ಫಲಾನುಭವಿಗಳು ಇಲ್ಲಿ ಗಮನಿಸಬೇಕಾದದ್ದು​ ಏನೆಂದರೆ, ಆಧಾರ್​ ಜೋಡಣೆಯ ಎಲೆಕ್ಟ್ರಾನಿಕ್ ಡೇಟಾಬೇಸ್​ನಲ್ಲಿ ಕೃಷಿಕರ ಕಟುಂಬದ ಎಲ್ಲ ಸದಸ್ಯರ ಮಾಹಿತಿ ಇರಲಿದ್ದು, ಆ ಪೈಕಿ ಭೂ ದಾಖಲೆಗಳಲ್ಲಿ ಯಾರ ಹೆಸರು ಇರುತ್ತದೆ ಅದರ ಆಧಾರದಲ್ಲಿ ಈ ಯೋಜನೆಯು ಜಾರಿ ಆಗುತ್ತದೆ. ಯಾರಿಗೆ ಪ್ರಯೋಜನ ದೊರೆಯುವುದಿಲ್ಲ ಅಂತ ನೋಡುವುದಾದರೆ, ಆ ಬಗ್ಗೆ ವಿವರಗಳು ಇಲ್ಲಿವೆ:

– ಹೆಚ್ಚಿನ ಆರ್ಥಿಕ ಸ್ಥಾನಮಾನ ಇರುವ ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಅನುಕೂಲ ಪಡೆಯಲು ಅರ್ಹರಲ್ಲ.

– ಎಲ್ಲ ಸಾಂಸ್ಥಿಕ ಭೂಮಿ ಹೋಲ್ಡರ್​ಗಳು

– ಮಾಜಿ ಹಾಗೂ ಹಾಲಿ ಸಚಿವರು/ ರಾಜ್ಯ ಸಚಿವರು ಹಾಗೂ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ, ವಿಧಾನಪರಿಷತ್ ಮಾಜಿ/ ಹಾಲಿ ಸಚಿವರು, ಜಿಲ್ಲಾ ಪಂಚಾಯಿತಿಯ ಹಾಲಿ/ಮಾಜಿ ಸದಸ್ಯರು ಈ ಯೋಜನೆಗೆ ಅರ್ಹರಲ್ಲ.

– ಸೂಪರ್ ಆನ್ಯುಯೇಟೆಡ್/ ನಿವೃತ್ತ ಪಿಂಚಣಿದಾರರು ಯಾರು 10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು (ಬಹು ಕಾರ್ಯದ ಸಿಬ್ಬಂದಿ/ ನಾಲ್ಕನೇ ದರ್ಜೆ/ ಗ್ರೂಪ್ ಡಿ ಸಿಬ್ಬಂದಿ ಹೊರತುಪಡಿಸಿ) ಪಿಂಚಣಿ ಪಡೆಯುತ್ತಿದ್ದಲ್ಲಿ ಅವರು ಕೂಡ ಈ ಯೋಜನೆ ಅಡಿಯಲ್ಲಿ ಬೆನಿಫಿಟ್ ಪಡೆಯುವುದಕ್ಕೆ ಅರ್ಹರಲ್ಲ.

ರೈತರಿಗೆ ಗೊತ್ತಿರಲೇಬೇಕಾದ 5 ಅತಿ ದೊಡ್ಡ ಅಪ್​ಡೇಟ್​​​ಗಳಿವು

– ಸಣ್ಣ ಹಿಡುವಳಿ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿ ಹಣಕಾಸು ನೆರವು ನೀಡಬೇಕು ಎಂಬ ಉದ್ದೇಶಕ್ಕೆ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ. ಈ ಯೋಜನೆಯಿಂದ ದೇಶದಾದ್ಯಂತ 12 ಕೋಟಿ ರೈತರಿಗೆ ಅನುಕೂಲ

– ಮೊತ್ತವು ನೇರವಾಗಿ ರೈತರ ಬ್ಯಾಂಕ್​ ಖಾತೆಗೆ ಜಮೆ ಆಗುತ್ತದೆ.

– ಪಿಎಂ ಕಿಸಾನ್​ ಸಮ್ಮಾನ್ ನಿಧಿ ಯೋಜನೆಯ ಹತ್ತನೇ ಕಂತಿನ ಅಡಿಯಲ್ಲಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂಪಾಯಿಗೂ ಹೆಚ್ಚು ವರ್ಗಾವಣೆ ಆಗಿದೆ.

– ಫಲಾನುಭವಿಗಳ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿದ್ದಲ್ಲಿ ಜಿಲ್ಲಾ ಮಟ್ಟದ ಕುಂದುಕೊರತೆ ನಿಗಾ ಸಮಿತಿಯನ್ನು ಸಂಪರ್ಕಿಸಿ, ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವಂತೆ ಕೇಳಬಹುದು.

ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ

Published On - 12:53 pm, Mon, 14 February 22

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ