PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಹತ್ತನೇ ಕಂತನ್ನು ಜನವರಿ 1, 2022ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಣವನ್ನು ಬಿಡುಗಡೆ ಮಾಡಲಾಯಿತು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಅಡಿಯಲ್ಲಿ ವಾರ್ಷಿಕವಾಗಿ 6000 ರೂಪಾಯಿಯನ್ನು ಭೂಮಿ ಇರುವ ರೈತರಿಗೆ ತಲಾ 2000 ರೂಪಾಯಿಯಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಕೃಷಿಕರು ತಮ್ಮ ಹೆಸರನ್ನು ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು. ಅಂದಹಾಗೆ ಪಿಎಂ ಕಿಸಾನ್ ಯೋಜನಾ ಅಥವಾ ಪಿಎಂ ಸಮ್ಮಾನ್ ನಿಧಿ ಯೋಜನಾವನ್ನು ಆರಂಭ ಮಾಡಿದ್ದು ಸಣ್ಣ ಪ್ರಮಾಣದ ಭೂಮಿ ಇರುವ ರೈತರಿಗೆ ಹಣಕಾಸಿನ ನೆರವು ನೀಡಬೇಕು ಎಂಬ ಉದ್ದೇಶದಿಂದ. ಆರಂಭದಲ್ಲಿ ಈ ಯೋಜನೆಯು ಎರಡು ಹೆಕ್ಟೇರ್ನೊಳಗೆ (5 ಎಕರೆ) ಭೂಮಿ ಇರುವವರಿಗೆ ಅಂತ ಜಾರಿಗೆ ತರಲಾಯಿತು. ಆ ನಂತರ ಸಣ್ಣ ಪ್ರಮಾಣದಲ್ಲಿ ಭೂಮಿ ಹೊಂದಿರುವ ಎಲ್ಲ ಕುಟುಂಬಗಳಿಗೂ ವಿಸ್ತರಣೆಯಾಯಿತು.
ಇಲ್ಲಿ ಕುಟುಂಬ ಅಂದರೆ ಗಂಡ, ಹೆಂಡತಿ ಹಾಗೂ ಅಪ್ರಾಪ್ತ ವಯಸ್ಸಿನ ಮಗು ಎಂದು ಅಧಿಕೃತವಾಗಿ ವ್ಯಾಖ್ಯಾನಿಸಲಾಗಿದೆ. ಜನವರಿ 1, 2022ರಂದು 14 ಕೋಟಿ ರೂಪಾಯಿ ಅನುದಾನವನ್ನು 351 ರೈತ ಉತ್ಪಾದಕರ ಸಂಸ್ಥೆಗಳಿಗೆ (FPOs) ಬಿಡುಗಡೆ ಆಗಿದೆ. ಇದರಿಂದ 1.24 ಲಕ್ಷ ರೈತರಿಗೆ ಅನುಕೂಲ ಆಗುವ ನಿರೀಕ್ಷೆ ಇದೆ. ಪಿಎಂ ಕಿಸಾನ್ ಸ್ಥಿತಿಯನ್ನು ಅಧಿಕೃತ ಪೋರ್ಟಲ್ ಆದ www.pmkisan.gov.in ಇದರಲ್ಲಿ ಪರಿಶೀಲನೆ ಮಾಡಬಹುದು.
ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದು ಹೇಗೆ? 1) ಅರ್ಹ ರೈತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.
2) www.pmkisan.gov.in ವೆಬ್‌ಸೈಟ್‌ಗೆ ತೆರಳಬೇಕು.
3) ಈಗ, ಹೋಮ್ ಪೇಜ್ನಲ್ಲಿ ‘ಫಾರ್ಮರ್ಸ್ ಕಾರ್ನರ್’ (Farmers Corner) ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.
4) ಮುಂದೆ, ‘ಹೊಸ ರೈತರ ನೋಂದಣಿ’ (New farmer registration) ಮೇಲೆ ಕ್ಲಿಕ್ ಮಾಡಿ.
5) ನೋಂದಣಿ ನಮೂನೆಯು ಇದೀಗ ನಿಮಗಾಗಿ ತೆರೆಯುತ್ತದೆ.
6) ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಿ.
7) ರೆಫರೆನ್ಸ್ಗಾಗಿ ಹಾರ್ಡ್ ಕಾಪಿಯನ್ನು ಉಳಿಸಿ.
– ಪಿಎಂ ಕಿಸಾನ್ ಅಪ್ಲಿಕೇಷನ್‌ಗೆ ಅಗತ್ಯವಿರುವ ಪ್ರಮುಖ ದಾಖಲೆಗಳು * ಭೂಮಿಯ ಮೂಲ ದಾಖಲೆಗಳು
* ಅರ್ಜಿದಾರರ ಬ್ಯಾಂಕ್ ಪಾಸ್ಬುಕ್
* ಮತದಾರರ ಗುರುತಿನ ಚೀಟಿ
* ಪಾಸ್ಪೋರ್ಟ್ ಅಳತೆಯ ಫೋಟೋ
* ಗುರುತಿನ ಚೀಟಿ
* ಚಾಲನಾ ಪರವಾನಗಿ ಪ್ರಮಾಣಪತ್ರ
* ನಿಮ್ಮ ಮಾಲೀಕತ್ವದಲ್ಲಿರುವ ಭೂಮಿಯ ಸಂಪೂರ್ಣ ವಿವರಗಳು.
* ನಿವಾಸ ಪ್ರಮಾಣಪತ್ರ
ಇದನ್ನೂ ಓದಿ: PM Kisan Scheme: ಪಿಎಂ ಕಿಸಾನ್ ಸಮ್ಮಾನ್ ಯೋಜನೆ; ಜ. 1ರಂದು ದೇಶದ 10 ಕೋಟಿ ರೈತರ ಖಾತೆಗೆ ಹಣ ಬಿಡುಗಡೆ
Published On - 12:51 pm, Wed, 19 January 22