Budget 2022: ಕೇಂದ್ರ ಬಜೆಟ್ 2022ರಿಂದ ಕೃಷಿ ವಲಯದ ಪ್ರಮುಖ ನಿರೀಕ್ಷೆಗಳೇನು?

ಕೃಷಿ ಕ್ಷೇತ್ರವು ಕೇಂದ್ರ ಬಜೆಟ್​ 2022ರಿಂದ ನಿರೀಕ್ಷೆ ಮಾಡುತ್ತಿರುವ ಪ್ರಮುಖ ಅಂಶವೇನು ಎಂಬ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾವವನ್ನು ಮಾಡಲಾಗಿದೆ.

Budget 2022: ಕೇಂದ್ರ ಬಜೆಟ್ 2022ರಿಂದ ಕೃಷಿ ವಲಯದ ಪ್ರಮುಖ ನಿರೀಕ್ಷೆಗಳೇನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 24, 2022 | 1:27 PM

ಫೆಬ್ರವರಿ 1ನೇ ತಾರೀಕಿಗೆ 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget 2022- 23)​ ಮಂಡನೆ ಆಗಲಿದೆ. ರೈತರ ಆದಾಯ ಹೆಚ್ಚು ಮಾಡುವ ನಿಟ್ಟಿನಲ್ಲಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಕಳೆದ ವರ್ಷ ಕೊನೆಯಲ್ಲಿ ಕೃಷಿ ಕಾನೂನು ತಿದ್ದುಪಡಿ ಹಿಂಪಡೆದ ನಂತರವೂ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವು ಯೋಜನೆ ತರುವ, ಉತ್ತೇಜನ ನೀಡುವ ನಿರೀಕ್ಷೆ ಕಾಣುತ್ತಿದೆ. ಕೃಷಿ ವಲಯದಲ್ಲಿ ಕೃಷಿ ಆಧಾರಿತ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಕಾರ್ಯತಂತ್ರ ರೂಪಿಸುವುದು ಸರ್ಕಾರದ ಯೋಜನೆ ಆಗಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಸಂಬಂಧವಾಗಿ ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಬಜೆಟ್​ನಲ್ಲಿ ಘೋಷಣೆ ನಿರೀಕ್ಷೆ ಮಾಡಬಹುದಾದಗಿದೆ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಹಾಗೂ ಕೃಷಿ ಆಧಾರಿತ ವಸ್ತುಗಳನ್ನು ಬೆಂಬಲಿಸುವುದು ಉದ್ದೇಶವಾಗಿ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಫ್ತು ಉತ್ತೇಜನ ಸಾಧ್ಯತೆ ಭಾರತೀಯ ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ ರಫ್ತಿಗೆ ಬೆಂಬಲ ನೀಡುವುದಕ್ಕೆ ಸರ್ಕಾರ ಮುಂದಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ವೈವಿಧ್ಯಮಯ ಕೃಷಿ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವುದಕ್ಕೆ ಹೆಚ್ಚುವರಿಯಾಗಿ ಸಾಗಣೆ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಪ್ರೋತ್ಸಾಹಧನ ಒದಗಿಸುವ ಸಾಧ್ಯತೆ ಕೂಡ ಇದೆ. ಸಂಗ್ರಹ ಹಾಗೂ ಸಾಗಣೆ ಮೂಲಸೌಕರ್ಯ ಸರಷ್ಟಿಸುವುದನ್ನು ಉತ್ತೇಜಿಸುವ ಉದ್ದೇಶಕ್ಕೆ ಆಹಾರ ಸಂಸ್ಕರಣೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (PLI) 10,900 ಕೋಟಿ ರೂಪಾಯಿ ಮೇಲೆ ನೀಡಬಹುದು ಎನ್ನಲಾಗುತ್ತಿದೆ. ಹಣಕಾಸು ವರ್ಷ 2020ರಲ್ಲಿ ಆಹಾರ ಸಂಸ್ಕರಣೆ ವಲಯದಲ್ಲಿ ಗ್ರಾಸ್ ವ್ಯಾಲ್ಯೂ ಆ್ಯಡೆಡ್ (GVA) 2.24 ಲಕ್ಷ ಕೋಟಿ ರೂಪಾಯಿ. ಒಟ್ಟಾರೆಯಾಗಿ ಶೇ 1.7ರಷ್ಟು ಕೊಡುಗೆ. ಕೃಷಿ ಮತ್ತು ಕೃಷಿ ಆಧಾರಿತ ವಲಯದ ಜಿವಿಎದಲ್ಲಿ ಆಹಾರ ಸಂಸ್ಕರಣೆ ವಲಯದ ಜಿವಿಎ ಶೇ 11.38ರಷ್ಟಿದೆ. ಈ ಪಾಲು ಜಾಸ್ತಿ ಆಗಬೇಕು ಎಂದು ಸರ್ಕಾರ ಬಯಸುತ್ತದೆ.

ಮೌಲ್ಯವರ್ಧನೆ ಮತ್ತು ಕೃಷಿ ಉತ್ಪನ್ನಗಳ ರಫ್ತು ಹೆಚ್ಚು ಸುಸ್ಥಿರವಾದ ರಫ್ತು ಬೆಳವಣಿಗೆಗೆ ದೀರ್ಘವಾದ ಸಮಯ ತೆಗೆದುಕೊಳ್ಳಬಹುದು. ಅದರಲ್ಲೂ ಹೆಚ್ಚಿನ ನೀರಿನ ಅವಲಂಬನೆ ಇರುವ ಅಕ್ಕಿಯಂಥದ್ದನ್ನು ಕಡಿಮೆ ಮಾಡಬಹುದು ಎಂದು ಐಸಿಆರ್​ಎ ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಹೇಳಿದ್ದಾರೆ. ಒಂದೇ ಬೆಳೆ ಮೇಲೆ ಅವಲಂಬಿತ ಆಗಿರುವ ರೈತರಿಗೆ ವೈವಿಧ್ಯಮಯ ಆದಾಯಕ್ಕೆ ಸಂಶೋಧನೆ, ಅಭಿವೃದ್ಧಿ ಹಾಗೂ ಸಾಲದ ಬೆಂಬಲ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸೇರಿಸುತ್ತಾರೆ. ಬೇಡಿಕೆ ಅನುಗುಣವಾದ ಚಟುವಟಿಕೆಗೆ ನೀತಿಗಳು ಆದ್ಯತೆ ನೀಡಬೇಕು. ಪ್ರತಿ ಕೃಷಿ ಉತ್ಪನ್ನಕ್ಕೂ ಜಾಗತಿಕ ಮಟ್ಟವನ್ನು ಗಮನದಲ್ಲಿ ಇರಿಸಿಕೊಂಡು, ನೀತಿ ರೂಪಿಸಬೇಕು. ಕೇವಲ ಪ್ರಾದೇಶಿಕ ಅಥವಾ ಸ್ಥಳೀಯ ಆಲೋಚನೆ ಸಾಕಾಗುವುದಿಲ್ಲ ಎನ್ನುತ್ತಾರೆ ಮಹೀಂದ್ರಾ ಅಂಡ್ ಮಹೀಂದ್ರಾದ ಮುಖ್ಯ ಅರ್ಥಶಾಸ್ತ್ರಜ್ಞ ಸಚ್ಚಿದಾನಂದ ಶುಕ್ಲ.

ಅವರು ಹೇಳುವಂತೆ, ಸರಕು ಸಾಗಣೆ, ಶೀತಲಗೃಹ ಸಂಗ್ರಹಾಗಾರ ಇವುಗಳಲ್ಲಿ ಹೂಡಿಕೆ ಮಾಡುವವರಿಗೂ ಪ್ರೋತ್ಸಾಹ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು 2015-16ರಲ್ಲಿ ಘೋಷಣೆ ಮಾಡಿರುವಂತೆ, 2022-23ರ ಹೊತ್ತಿಗೆ ಕೃಷಿಕರ ಆದಾಯ ದುಪ್ಪಟ್ಟು ಆಗಬೇಕು. ಆದರೆ ಕೊವಿಡ್​ ಕಾರಣದಿಂದ ಅವರ ಗುರಿಗೆ ಹಿನ್ನಡೆ ಆಗಿದೆ. ಅಂದಹಾಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಹಣಕಾಸು ವರ್ಷಕ್ಕೆ ಬಜೆಟ್​ನಲ್ಲಿ ಕೃಷಿ ವಲಯಕ್ಕೆ ಘೋಷಿಸಿರುವಂತೆ ಒಂಬತ್ತು ಕ್ರಮದಲ್ಲಿ ಕೃಷಿ ಸಾಲವನ್ನು 16.5 ಲಕ್ಷ ಕೋಟಿ ರೂಪಾಯಿಗೆ ಏರಿಸುವ ಪ್ರಸ್ತಾವ ಕೂಡ ಇದೆ.

ಇದನ್ನೂ ಓದಿ: Budget 2022: ಬಜೆಟ್​ನಲ್ಲಿ ಕ್ರಿಪ್ಟೋ ವಹಿವಾಟಿನ ಮೇಲೆ ಟಿಡಿಎಸ್/ಟಿಸಿಎಸ್ ವಿಧಿಸಲು ಸರ್ಕಾರ ಚಿಂತನೆ

Union Budget 2022-23: ಕೊವಿಡ್-19 ಹೊರತಾಗಿಯೂ 2022ರ ಬಜೆಟ್‌ಗೆ ಮುನ್ನ ಆರ್ಥಿಕತೆ ಬಗ್ಗೆ ಭಾರತ ಕಂಪೆನಿಗಳ ಆಶಾವಾದ

Published On - 6:59 pm, Tue, 18 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್