Union Budget 2022: ಕೇಂದ್ರ ಬಜೆಟ್ ಮಂಡನೆ ಯಾವಾಗ, ಮಂಡಿಸುವವರು ಯಾರು, ಎಷ್ಟು ಅವಧಿಯ ಭಾಷಣ?

ಕೇಂದ್ರ ಬಜೆಟ್ 2022ರ ಮಂಡನೆ ಯಾವಾಗ ಮಾಡಲಾಗುತ್ತದೆ ಹಾಗೂ ಯಾರು ಮಾಡುತ್ತಾರೆ, ಎಷ್ಟು ಅವಧಿಯ ಭಾಷಣ ಇದಾಗಿರಬಹುದು ಎಂಬ ಮಾಹಿತಿ ಇಲ್ಲಿದೆ.

Union Budget 2022: ಕೇಂದ್ರ ಬಜೆಟ್ ಮಂಡನೆ ಯಾವಾಗ, ಮಂಡಿಸುವವರು ಯಾರು, ಎಷ್ಟು ಅವಧಿಯ ಭಾಷಣ?
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jan 07, 2022 | 7:24 PM

ಪ್ರತಿ ವರ್ಷದ ಕೇಂದ್ರ ಬಜೆಟ್‌ನ ಘೋಷಣೆಯು ದೇಶದ ಪ್ರಮುಖ ಘಟನಾವಳಿಗಳಲ್ಲಿ ಒಂದಾಗಿದೆ. ಭಾರತದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಬಜೆಟ್ ಪರಿಣಾಮ ಬೀರುತ್ತದೆ. ಆದರೆ ಬಜೆಟ್ ಭಾಷಣವನ್ನು ವೀಕ್ಷಿಸಲು ಅನೇಕರು ಸಿದ್ಧರಾಗಿರುವುದಿಲ್ಲ. ಬಜೆಟ್ ಮಂಡನೆ ಬಗ್ಗೆ ಜನರು ಸಾಮಾನ್ಯವಾಗಿ ಕೇಳುವ ಕೆಲವು ಪ್ರಶ್ನೆಗಳು ಇಲ್ಲಿವೆ.

2022-2023ರ ಕೇಂದ್ರ ಬಜೆಟ್ ಯಾವಾಗ ಸಂಸತ್​ನಲ್ಲಿ ಮಂಡಿಸಲಾಗುತ್ತದೆ? ಕೇಂದ್ರ ಬಜೆಟ್ ಫೆಬ್ರವರಿ 1, 2022ರಂದು ಬೆಳಗ್ಗೆ 11 ಗಂಟೆಗೆ ಸಂಸತ್​ನಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಸಂಸತ್​ ಅಧಿವೇಶನದ ಮೊದಲ ದಿನದಂದು ಬಜೆಟ್ ಮಂಡಿಸಲಾಗುವುದು. ಇದನ್ನು ಬಜೆಟ್ ಅಧಿವೇಶನ ಎಂದೂ ಕರೆಯುತ್ತಾರೆ.

2022-2023ರ ಕೇಂದ್ರ ಬಜೆಟ್ ಯಾರು ಮಂಡಿಸುತ್ತಾರೆ? ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರು ಮಂಡಿಸುತ್ತಾರೆ. ಸದ್ಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯ ಬಿಜೆಪಿ ಸದಸ್ಯೆ ಮತ್ತು ಅರ್ಥಶಾಸ್ತ್ರಜ್ಞೆ.

ಭಾಷಣ ಎಷ್ಟು ದೀರ್ಘವಾಗಿರಬಹುದು? ಹಣಕಾಸು ಸಚಿವರಿಂದ ಕೇಂದ್ರ ಬಜೆಟ್‌ನ ಮಂಡನೆಯು ಸರಾಸರಿ 90 ನಿಮಿಷಗಳಿಂದ 120 ನಿಮಿಷಗಳವರೆಗೆ ಇರುತ್ತದೆ. 1977ರಲ್ಲಿ ಹಿರೂಭಾಯಿ ಎಂ. ಪಟೇಲ್ ಅವರು ಮಧ್ಯಂತರ ಬಜೆಟ್ ಭಾಷಣವನ್ನು ಅತಿ ಕಡಿಮೆ ಅವಧಿಯಲ್ಲಿ ಮಾಡಿದರು. ನಿರ್ಮಲಾ ಸೀತಾರಾಮನ್ ಅವರು ಸುದೀರ್ಘವಾದ ಕೇಂದ್ರ ಬಜೆಟ್ ಭಾಷಣ ಮಾಡಿದ ದಾಖಲೆ ಹೊಂದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು 160 ನಿಮಿಷಗಳು, ಅಂದರೆ 2 ಗಂಟೆ ಮತ್ತು 40 ನಿಮಿಷಗಳ ಅವಧಿಗೆ ಕೇಂದ್ರ ಬಜೆಟ್ 2021-2022 ಅನ್ನು ಮಂಡಿಸಿದರು. ಆ ಸಮಯದಲ್ಲಿ ಅವರು ತಮ್ಮ ಭಾಷಣವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಕೊನೆಯ ಎರಡು ಪುಟಗಳನ್ನು ಬಿಡಬೇಕಾಯಿತು. ನಿರ್ಮಲಾ ಸೀತಾರಾಮನ್ ಅವರ ಭಾಷಣಗಳು ಸರಾಸರಿಯ ದೀರ್ಘ ಭಾಗದಲ್ಲಿ ತಪ್ಪಾಗಿದ್ದು, 2019ರಲ್ಲಿ 137 ನಿಮಿಷಗಳು, ಅಂದರೆ 2 ಗಂಟೆ ಮತ್ತು 17 ನಿಮಿಷಗಳ ಕಾಲ ಮಾತನಾಡಿದ ನಂತರ, ಸುದೀರ್ಘವಾದ ಕೇಂದ್ರ ಬಜೆಟ್ ಭಾಷಣದ ಹಿಂದಿನ ದಾಖಲೆಯನ್ನು ಮುರಿದರು.

ಹಿಂದಿನ ಸುದೀರ್ಘವಾದ ಕೇಂದ್ರ ಬಜೆಟ್ ಭಾಷಣವನ್ನು ಜಸ್ವಂತ್ ಸಿಂಗ್ ಅವರು 2003ರಲ್ಲಿ 135 ನಿಮಿಷಗಳು, 2 ಗಂಟೆಗಳು ಮತ್ತು 15 ನಿಮಿಷಗಳ ಕಾಲ ಬಜೆಟ್ ಮಂಡಿಸಿದರು. ಅವರ ಭಾಷಣಗಳ ಉದ್ದದ ಹೊರತಾಗಿಯೂ, ಕೇಂದ್ರ ಬಜೆಟ್ ಮಂಡನೆಯಲ್ಲಿ ಹೆಚ್ಚಿನ ವಿಷಯವು ಒಳಗೊಂಡಂಥ ದಾಖಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಅವರು 1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಅಧಿಕಾರಾವಧಿಯಲ್ಲಿ ಈ ಭಾಷಣ ಮಂಡಿಸಿದರು. ಭಾರತದಲ್ಲಿ ಉದಾರೀಕರಣದ ಅವಧಿಯನ್ನು ಪ್ರಾರಂಭಿಸಿದ 1991ರ ಬಜೆಟ್, ಆರ್ಥಿಕತೆಯಲ್ಲಿ ಲೈಸೆನ್ಸ್ ರಾಜ್ ಕೊನೆಗೊಳಿಸಿತು. ಪದಗಳ ವಿಷಯದಲ್ಲೂ 18,650 ಪದಗಳನ್ನು ಹೊಂದಿದ್ದ ದೀರ್ಘವಾದ ಭಾಷಣ ಇದು.

ಇದನ್ನೂ ಓದಿ: Tax On Cryptocurrency: ಕೇಂದ್ರ ಬಜೆಟ್​ನಲ್ಲಿ ಕ್ರಿಪ್ಟೋ ಗಳಿಕೆಯ ಮೇಲೆ ತೆರಿಗೆ ಬದಲಾವಣೆ ಸಾಧ್ಯತೆ

Published On - 7:23 pm, Fri, 7 January 22