Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?

ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ಜಗತ್ತಿನ ನಂಬರ್ 1 ಕಂಪೆನಿಯಾದ ಆಪಲ್ ಸಿಇಒ 2021ರಲ್ಲಿ ಪಡೆದ ವೇತನ ಎಷ್ಟು ಗೊತ್ತಾ? ಇವತ್ತಿನ ಡಾಲರ್​ ಲೆಕ್ಕಕ್ಕೆ 733.58 ಕೋಟಿ ರೂಪಾಯಿಗೆ ಸಮ. ಸಂಬಳ, ಸವಲತ್ತು, ಸೌಕರ್ಯ ಇವುಗಳ ಮಾಹಿತಿ ಇಲ್ಲಿದೆ.

Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?
ಟಿಮ್ ಕುಕ್ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on:Jan 07, 2022 | 12:59 PM

ವಿಶ್ವದ ಅತಿ ದೊಡ್ಡ ಟೆಕ್​ ಕಂಪೆನಿಯಾದ ಆಪಲ್​ನ ಸಿಇಒ ಟಿಮ್ ಕುಕ್ ಅವರು ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಡೆಯುವಂಥ ಸಿಇಒಗಳಲ್ಲಿ ಒಬ್ಬರು. ಆ ಕಂಪೆನಿಯ ಹಣಕಾಸು ವರ್ಷ ಸೆಪ್ಟೆಂಬರ್​ನಿಂದ ಶುರುವಾಗಿ, ಅದರ ಮುಂದಿನ ಆಗಸ್ಟ್​ ತನಕ ಇರುತ್ತದೆ. ಕಳೆದ ಹಣಕಾಸು ವರ್ಷದಲ್ಲಿ, ಅಂದರೆ 2020ರ ಸೆಪ್ಟೆಂಬರ್​ನಿಂದ 2021ರ ಆಗಸ್ಟ್​ ತನಕದ ಹಣಕಾಸು ವರ್ಷದಲ್ಲಿ ಆಪಲ್ ಕಂಪೆನಿಯೇ ತಿಳಿಸಿರುವ ಪ್ರಕಾರ ಟಿಮ್ ಕುಕ್ ಅವರಿಗೆ ಎಷ್ಟು ವೇತನ ಸಂದಾಯ ಆಗಿದೆ ಗೊತ್ತೆ? ಜನವರಿ 6ನೇ ತಾರೀಕಿನಂದು ಎಸ್​ಇಸಿ ಫೈಲಿಂಗ್​ನಲ್ಲಿ ತಿಳಿಸಿರುವಂತೆ 9.87 ಕೋಟಿ ಅಮೆರಿಕನ್ ಡಾಲರ್ (98.73 ಮಿಲಿಯನ್ ಯುಎಸ್​ಡಿ) ವೇತನ ರೂಪದಲ್ಲಿ ಪಾವತಿಸಲಾಗಿದೆ. ಇಷ್ಟು ಮೊತ್ತವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಇವತ್ತಿಗೆ ಲೆಕ್ಕಾಚಾರ ಹಾಕಿ ಹೇಳುವುದಾದರೆ, 733.58 ಕೋಟಿ ಆಗುತ್ತದೆ. ಇದರಲ್ಲಿ ಸಂಬಳ ಹಾಗೂ ಸವಲತ್ತು ಮತ್ತು ಇತರ ಬೆನಿಫಿಟ್​ಗಳು ಸಹ ಒಳಗೊಂಡಿವೆ. ಯಾವುದಕ್ಕೆ ಎಷ್ಟು ಪಾವತಿಸಲಾಗಿದೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

– ಸಂಬಳ: 30 ಲಕ್ಷ ಯುಎಸ್​ಡಿ – ಆಪಲ್​ನ ಹಣಕಾಸು ಹಾಗೂ ಪರಿಸರ ಸುಸ್ಥಿರ ಗುರಿಯನ್ನು ತಲುಪಿದ್ದಕ್ಕಾಗಿ 1.2 ಕೋಟಿ ಯುಎಸ್​ಡಿ ಬೋನಸ್ – ಇತರ ಕಾಂಪೆನ್ಸೇಷನ್ 13.9 ಲಕ್ಷ ಯುಎಸ್​ಡಿ (ವೈಯಕ್ತಿಕ ವಿಮಾನ ಪ್ರಯಾಣ 712,488 ಡಾಲರ್, ಸೆಕ್ಯೂರಿಟಿ 630,630 ಡಾಲರ್, 401 (k) ಪ್ಲಾನ್​ಗೆ ಕೊಡುಗೆಯಾಗಿ 17,400 ಯುಎಸ್​ಡಿ, ಜೀವ ವಿಮಾ ಪ್ರೀಮಿಯಂಗಳು 2964 ಡಾಲರ್ ಮತ್ತು ರಜಾ ದಿನದ ನಗದು 23,077 ಡಾಲರ್) – 8.23 ಕೋಟಿ ಡಾಲರ್ ಮೌಲ್ಯದ ಸ್ಟಾಕ್​ಗಳು

ಈ ದಶಕವು ಆಪಲ್ ಕಂಪೆನಿಗೆ ದಾಖಲಾರ್ಹವಾದದ್ದು. 2021ರಲ್ಲಿ ಕುಕ್​ ಅವರಿಗೆ ಈಕ್ವಿಟಿ ಷೇರು ದೊರೆತಿದೆ. 2011ರಲ್ಲಿ ಅವರು ಸಿಇಒ ಆಗಿ ಪದೋನ್ನತಿ ಪಡೆದ ನಂತರ ಮೊದಲ ಬಾರಿಗೆ ಇದನ್ನು ಪಡೆದಿದ್ದಾರೆ ಎಂದು ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ಆಪಲ್​ನ ಗಾತ್ರ, ಪರ್ಫಾರ್ಮೆನ್ಸ್, ಸಿಇಒ ಆಗಿ ಕುಕ್ ಅವರು ಪಾತ್ರ ಹಾಗೂ ಪರ್ಫಾರ್ಮೆನ್ಸ್ ಗಮನಿಸಿ ಈ ಸ್ಟಾಕ್ ಅವಾರ್ಡ್ ನೀಡಲಾಗಿದೆ ಎಂದು ಆಪಲ್ ಕಂಪೆನಿ ಹೇಳಿದೆ. ಅಂದಹಾಗೆ, 3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ತಲುಪಿದ ಜಗತ್ತಿನ ಮೊದಲ ಕಂಪೆನಿಯಾಗಿ ಆಪಲ್ ಹೊರಹೊಮ್ಮಿತು.

ಅಚ್ಚರಿಯ ಸಂಗತಿ ಏನೆಂದರೆ, ಇಷ್ಟು ದೊಡ್ಡ ಮೊತ್ತದ ವೇತನ ಪಡೆದುಕೊಂಡ ಹೊರತಾಗಿಯೂ ಅಮೆರಿಕದಲ್ಲಿ ಅತಿ ಹೆಚ್ಚು ವೇತನ ಪಡೆದ ಸಿಇಒಗಳ ಪಟ್ಟಿಯಲ್ಲಿ ಟಿಮ್​ ಕುಕ್​ಗೆ ಎಂಟನೇ ಸ್ಥಾನ ಎಂದು 2021ರ ಆಗಸ್ಟ್​ನಲ್ಲಿ ಬ್ಲೂಮ್​ಬರ್ಗ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.​

ಇದನ್ನೂ ಓದಿ: Apple Inc Market Cap: 3 ಟ್ರಿಲಿಯನ್ ಯುಎಸ್​ಡಿ ಮಾರುಕಟ್ಟೆ ಬಂಡವಾಳ ಮೌಲ್ಯ ಮುಟ್ಟಿದ ಮೊದಲ ಕಂಪೆನಿ ಆಪಲ್

Published On - 12:58 pm, Fri, 7 January 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ